Get Updates
Get notified of breaking news, exclusive insights, and must-see stories!

ಬೆಂಗಳೂರು: ಜೂನ್ 11 ರಂದು ಅಂಕಿತ ಪ್ರಕಾಶನದ ಐದು ಪುಸ್ತಕ ಬಿಡುಗಡೆ

ಬೆಂಗಳೂರು, ಜೂನ್ 7: ಕನ್ನಡದ ಉತ್ತಮ ಪುಸ್ತಕಗಳನ್ನು ನೀಡುವಲ್ಲಿ ಎಂದಿಗೂ ಮುಂಚೂಣಿಯಲ್ಲಿರುವ ಅಂಕಿತ ಪ್ರಕಾಶನ, ಇದೇ ಭಾನುವಾರ ಹಿರೇಮಗಳೂರು ಕಣ್ಣನ್ ಸೇರಿದಂತೆ ಖ್ಯಾತ ಲೇಖಕರ ಐದು ಪುಸ್ತಕಗಳನ್ನು ಸಹೃದಯಿಗಳ ಕೈಗೆ ಒಪ್ಪಿಸುತ್ತಿದೆ.

ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಜೂನ್ 11 ರಂದು ಬೆಳಗ್ಗೆ 10 ಗಂಟೆಗೆ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.[ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest]

Five Kannada books from ankita publications is releasing on June 11th

ಖ್ಯಾತ ವಾಗ್ಮಿ, ಕನ್ನಡ ಪುರೋಹಿತ ಎಂದೇ ಖ್ಯಾತಿ ಪಡೆದ ಹಿರೇಮಗಳೂರು ಕಣ್ಣನ್ ಅವರ 'ಕಣ್ಣನ್ ನೋಟ', ವೈ.ಎನ್. ಗುಂಡೂರಾವ್ ಸಂಪಾದಿಸಿದ 'ಚೌರಸುಖ' , ದೊಡ್ಡೇರಿ ವೆಂಕಟಗಿರಿರಾವ್ ಅವರ ಮೂರು ಕಾದಂಬರಿಗಳಾದ 'ಅವದಾನ', 'ಸಂಪ್ರದಾನ', 'ದೃಷ್ಟಿದಾನ' ಪುಸ್ತಕಗಳು ಬಿಡುಗಡೆಯಾಗಲಿವೆ.

ಖ್ಯಾತ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದು, ಚಿಂತಕ, ಪತ್ರಕರ್ತ ಎನ್. ಎಸ್.ಶ್ರೀಧರಮೂರ್ತಿ, ಖ್ಯಾತ ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್, ಹಿರೇಮಗಳೂರು ಕಣ್ಣನ್, ವೈ.ಎನ್.ಗುಂಡೂರಾವ್, ಅನುರಾಧಾ ರಾವ್ ಉಪಸ್ಥಿತರಿರಲಿದ್ದಾರೆ.

Five Kannada books from ankita publications is releasing on June 11th

ಸಾಹಿತ್ಯ ಪ್ರೇಮಿಗಳು ಭಾನುವಾರ ಬೆಳಗ್ಗೆ 9:30 ಕ್ಕೇ ವಾಡಿಯಾ ಸಭಾಂಗಣಕ್ಕೆ ಬಂದು, ಸಾಹಿತಿಗಳೊಂದಿಗೆ ಉಪಹಾರ ಸ್ವೀಕರಿಸಿ, ಪುಸ್ತಕ ಬಿಡುಗಡೆಯನ್ನು ಕಣ್ತುಂಬಿಸಿಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+