ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಕೆಆರ್‌ಪುರಂಗೆ ಸಂಪರ್ಕ?

|
Google Oneindia Kannada News

ಬೆಂಗಳೂರು, ಮೇ 7: ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಕುರಿತು ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದವು. ಇದೀಗ ಮೆಟ್ರೋ ನಿಗಮವು ಹೊಸ ಸಮೀಕ್ಷೆಯೊಂದನ್ನು ನಡೆಸಿದ್ದು ಅದರ ಪ್ರಕಾರ ಏರ್‌ಪೋರ್ಟ್ ಮಾರ್ಗವು ಕೆಆರ್‌ಪುರಂ ಗೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಕೆಆರ್‌ಪುರಂ(ನೀಲಿ ಮಾರ್ಗ)ವು ಕೆಂಪೇಗೌಡ ಏರ್‌ಪೋರ್ಟ್‌ಗೆ ಸಂಪರ್ಕ ಸಾಧಿಸಲಿದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

ಏರ್‌ಪೋರ್ಟ್‌ ಮಾರ್ಗವನ್ನು ಕೆಆರ್‌ಪುರಂ ಮೂಲಕ ಹಾದುಹೋಗುವಂತೆ ಮಾಡಿದರೆ ನಾಗವಾರ, ಹೆಬ್ಬಾಳ, ಯಲಹಂಕ ಮೂಲಕ ಏರ್‌ಪೋರ್ಟ್‌ಗೆ ತೆರಳಲಿದೆ. ಈ ಕುರಿತು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದ್ದು, ಟೆಂಡರ್ ಕೂಡ ಆಹ್ವಾನಿಸಿದೆ.

ಕೆಆರ್‌ಪುರಂ ಮೂಲಕವೇ ಏರ್‌ಪೋರ್ಟ್‌ ಮೆಟ್ರೋ ಖಚಿತ

ಕೆಆರ್‌ಪುರಂ ಮೂಲಕವೇ ಏರ್‌ಪೋರ್ಟ್‌ ಮೆಟ್ರೋ ಖಚಿತ

ಏರ್‌ಪೋರ್ಟ್ ನಮ್ಮ ಮೆಟ್ರೋ ಮಾರ್ಗವನ್ನು ಕೆಆರ್‌ಪುರಂ ನಿಂದ ಹಾದುಹೋಗುವಂತೆ ಮಾಡುವುದು ಖಚಿತವಾಗಿದೆ. ಈ ಕುರಿತು ಟೆಂಡರ್ ಆಹ್ವಾನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಆರ್‌ಪುರಂ ಮಾರ್ಗವೇ ಉತ್ತಮ ಮಾರ್ಗ ಎಂದು ಗುರುತಿಸಲಾಗಿದೆ.

ಏರ್‌ಪೋರ್ಟ್‌ಗೆ ಯಾವ ಮಾರ್ಗವನ್ನು ಗುರುತಿಸಲಾಗಿತ್ತು

ಏರ್‌ಪೋರ್ಟ್‌ಗೆ ಯಾವ ಮಾರ್ಗವನ್ನು ಗುರುತಿಸಲಾಗಿತ್ತು

ಮೊದಲು ಏರ್‌ಪೋರ್ಟ್ ಮಾರ್ಗ ನಾಗವಾರದಿಂದ ಆರಂಭವಾಗಿ ರಾಮಕೃಷ್ಣಹೆಗಡೆ ನಗರ ಹಾಗೂ ಜಕ್ಕೂರು ತಲುಪುತ್ತಿತ್ತು ಆದರೆ ಬೆಂಗಳೂರು ಮಂಗಳೂರು ತೈಲದ ಪೈಫ್‌ಲೈನ್ ಇರುವ ಕಾರಣ ಆ ಮಾರ್ಗದಲ್ಲಿ ಮೆಟ್ರೋ ನಿರ್ಮಾಣ ಬೇಡ ಎನ್ನುವ ನಿರ್ಧಾರಕ್ಕೆ ಬರಲಾಯಿತು. ನಾಗವಾರದಿಂದ ಹೆಬ್ಬಾಳ-ಯಲಹಂಕ, ನಾಗವಾರ-ಕೋಗಿಲು-ಯಲಹಂಕ, ನಾಗವಾರ-ಬೆಲ್ಲಹಳ್ಳಿ-ಕಣ್ಣೂರು-ಏರ್‌ಪೋರ್ಟ್, ನಾಗವಾರ-ಕಣ್ಣೂರು-ಬಾಗಲೂರು-ಏರ್‌ಪೋರ್ಟ್‌, ನಾಗವಾರ-ಬೆಲ್ಲಹಳ್ಳಿ-ಯಲಹಂಕ-ಏರ್‌ಪೋರ್ಟ್‌ ಹಾಗೂ ಯಶವಂತಪುರ-ಯಲಹಂಕ-ಏರ್‌ಪೋರ್ಟ್ ಮಾರ್ಗವನ್ನು ಗುರುತಿಸಲಾಗಿತ್ತು.

ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಸರ್ವೇ ಆರಂಭ, ನಿಲ್ದಾಣಗಳೆಷ್ಟು?, ಸಮೀಕ್ಷೆ ಹೇಗೆ? ಏರ್‌ಪೋರ್ಟ್‌ ಮೆಟ್ರೋ ಮಾರ್ಗದ ಸರ್ವೇ ಆರಂಭ, ನಿಲ್ದಾಣಗಳೆಷ್ಟು?, ಸಮೀಕ್ಷೆ ಹೇಗೆ?

3ನೇ ಹಂತದ ಮೆಟ್ರೋ ಮಾರ್ಗ ಮತ್ತೆ ಬದಲು, ಕೈಬಿಟ್ಟ ಮಾರ್ಗಗಳು

3ನೇ ಹಂತದ ಮೆಟ್ರೋ ಮಾರ್ಗ ಮತ್ತೆ ಬದಲು, ಕೈಬಿಟ್ಟ ಮಾರ್ಗಗಳು

ನಮ್ಮ ಮೆಟ್ರೋ 3ನೇ ಹಂತದ ಮಾರ್ಗಗಳನ್ನು ಮತ್ತೆ ಬದಲಾಯಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೂರನೇ ಹಂತದ ಮಾರ್ಗಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದರು.

ಅದು ಜೆಪಿನಗರದಿಂದ ಹೊರವರ್ತುಲ ರಸ್ತೆಯಲ್ಲಿ ಹೆಬ್ಬಾಳ-ಕೆಆರ್ ಪುರ, ಟೋಲ್‌ಗೇಟ್-ಕಡಬಗೆರೆ, ಗೊಟ್ಟಿಗೆರೆ-ಬಸವಪುರ, ಆರ್‌ಕೆ ಹೆಗಡೆನಗರ-ಏರೋ ಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್ ರಾಜಾನುಕುಂಟೆ, ಇಬ್ಬಲೂರು- ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಸೇರಿ ಒಟ್ಟು 105 ಕಿ.ಮೀ ಮಾರ್ಗ ನಿರ್ಮಾಣವಾಗಲಿದೆ ಎಂದು ಹೇಳಲಾಗಿತ್ತು.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣ

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣ

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಎರಡನೇ ಹಂತದಲ್ಲಿ ಬರುವ ಸುರಂಗ ಮಾರ್ಗವನ್ನು ಚಿಕ್ಕ ಗಾತ್ರದಲ್ಲಿ ನಿರ್ಮಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಎರಡನೇ ಹಂತದಲ್ಲಿ ಒಟ್ಟು 12ಸುರಂಗ ಮಾರ್ಗ ನಿಲ್ದಾಣಗಳು ಬರಲಿದೆ. ಮೊದಲ ಹಂತದ ಮೆಟ್ರೋಗಿಂತ ಚಿಕ್ಕದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಾಗದ ಅಭಾವದಿಂದಾಗಿ ಚಿಕ್ಕ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ 72.1 ಕಿ.ಮೀ ಸುರಂಗ ನಿಲ್ದಾಣಗಳು ಬರಲಿವೆ.

ಬ್ಯಾಂಬೂ ಬಜಾರ್, ಪಾಟರಿ ರಸ್ತೆ, ಶಿವಾಜಿನಗರ, ಎಂಜಿ ರಸ್ತೆ, ವೆಲ್ಲಾರ ಜಂಕ್ಷನ್, ಮೈಕೋ ಲೇಔಟ್, ಲಾಂಗ್‌ಫರ್ಡ್ ಜಂಕ್ಷನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರ ನಿಲ್ದಾಣಗಳು ಸುರಂಗ ನಿಲ್ದಾಣಗಳಾಗಿವೆ.

English summary
BMRCL clarified that Namma metro 2nd Phase Airport blue line it will connected KR Puram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X