ನಮ್ಮ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಬಿದ್ದು ಓರ್ವ ಸಾವು

ಬೆಂಗಳೂರು, ಫೆಬ್ರವರಿ 29: ಮೆಟ್ರೋ 2ನೇ ಹಂತದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಎಸ್ಕಲೇಟರ್ ಅಳವಡಿಕೆ ವೇಳೆ ಎಸ್ಕಲೇಟರ್ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ. ಮೆಟ್ರೋ ಎರಡನೇ ಹಂತದ ವ್ಯಾಪ್ತಿಗೆ ಬರುವ ಪಟ್ಟಣಗೆರೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಮೃತ ದುರ್ದೈವಿ ಆಂಧ್ರಪ್ರದೇಶದ ಶ್ರೀಕಾಕುಳಂ ನ ಮೂಲದವರಾಗಿದ್ದು, M/s ILFS ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಬೆನ್ನಲ್ಲೇ ಆತನನ್ನು ಹೈ-ಟೆಕ್ ಆಸ್ಪತ್ರೆಗೆ ದಾಖಲಿಸಲಾಯಿತು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ.

ಮೈಸೂರು ರಸ್ತೆ-ಕೆಂಗೇರಿ ಲೈನ್ ನಲ್ಲಿ ಪಟ್ಟಣಗೆರೆ ಮೆಟ್ರೋ ನಿಲ್ದಾಣವಿದೆ. ಎಸ್ಕಲೇಟರ್ ಅಳವಡಿಕೆ ವೇಳೆ ನೆಟ್ ಕಟ್ಟಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಎಲೆಕ್ಟ್ರಿಕಲ್ ಜಾಕ್ ಹ್ಯಾಮರ್ ಬಿದ್ದ ಪರಿಣಾಮ ನೆಟ್ ಹರಿದಿದ್ದು ಕಾಮಗಾರಿ ನಡೆಯುತ್ತಿದ ಪ್ರದೇಶದಿಂದ 7-8 ಮೀಟರ್ ಕೆಳಗೆ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ.

Metro Worker Falls To His Death At Pattanagere metro station

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುತ್ತಿಗೆದಾರರು ತನ್ನ ಕೆಲಸದವರಿಗೆ ವಿಮೆ ಮಾಡಿಸಿದ್ದು, ಏಜೆನ್ಸಿಯಿಂದ ಪರಿಹಾರ ಮೊತ್ತ ಲಭ್ಯವಾಗಲಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+