ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರು, ಡಿಸೆಂಬರ್ 22 : ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆ ಮಾಡಿ ತಡರಾತ್ರಿ ಮನೆಗೆ ತೆರಳುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ರಾತ್ರಿ ವೇಳೆಯ ಸಂಚಾರ ಅವಧಿಯನ್ನು ವಿಸ್ತರಿಸಲು ಮುಂದಾಗಿದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷದ ಮುನ್ನಾದಿನ ಹೆಚ್ಚುವರಿ ಮೆಟ್ರೋ ರೈಲು ರಾತ್ರಿ ವೇಳೆ ಹೆಚ್ಚಿನ ಅವಧಿ ವರೆಗೆ ಸಂಚರಿಸಲಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಗಳನ್ನು ಕೂಡ ನಿಯೋಜನೆ ಮಾಡಲಾಗಿದೆ.

Metro timings exstended for Xmas, New Year

ಕ್ರಿಸ್ ಮಸ್ ಮುನ್ನಾದಿನ ರಾತ್ರಿ ಮೆಟ್ರೋ ರೈಲು ಎರಡು ಗಂಟೆ ಹೆಚ್ಚು ಕಾಲ ಮತ್ತು ಹೊಸ ವರ್ಷ ಮುನ್ನಾದಿನ ಮೂರು ಗಂಟೆಗಳ ಹೆಚ್ಚಿನ ಅವಧಿಯಲ್ಲಿ ಸಂಚರಿಸಲಿದೆ. ಡಿ.24 ರಂದು ಮೆಟ್ರೋ ರೈಲು ರಾತ್ರಿ 11ಗಂಟೆಯಿಂದ ಮರುದಿನ ಡಿಸೆಂಬರ್ 25 ರಂದು ಮಧ್ಯರಾತ್ರಿ 1 ಗಂಟೆಯವರೆಗೂ ಮೆಟ್ರೋ ಸಂಚರಿಸಲಿದೆ.

ಡಿಸೆಂಬರ್ 31 ರಂದು ರಾತ್ರಿ 11ಗಂಟೆಯಿಂದ ಮರುದಿನ ಜನವರಿ 1 ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಪ್ರಯಾಣಿಕರಿಗೆ ಅನುಕೂಲಕ್ಕೆ ಮೆಟ್ರೋ ಸಂಚರಿಸಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಮಾಹಿತಿನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+