ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ; ಸ್ಮಾರ್ಟ್‌ ಕಾರ್ಡ್ ರಿಚಾರ್ಜ್‌ ಇನ್ನು ಸರಳ, ಸುಲಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13 : ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಿದೆ. ಕಾರ್ಡ್ ರೀಚಾರ್ಜ್ ಮಾಡಲು ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

Recommended Video

Namma Metro ಪ್ರಯಾಣಿಕರು ಇನ್ಮುಂದೆ ಪರದಾಡುವಹಾಗಿಲ್ಲ | Oneindia Kannada

ಮೆಟ್ರೋ ಪ್ರಯಾಣಿಕರು ಶೀಘ್ರದಲ್ಲಿಯೇ ಪೇಟಿಎಂ, ಗೂಗಲ್ ಪೇ ಮುಂತಾದವುಗಳ ಮೂಲಕವೂ ಕಾರ್ಡ್ ರೀಚಾರ್ಜ್ ಮಾಡಬಹುದಾಗಿದೆ. 15 ದಿನಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ.

ಮೆಟ್ರೋ ಕಾರ್ಡ್; ಬಿಎಂಆರ್‌ಸಿಎಲ್‌ನಿಂದ ಮಹತ್ವದ ತೀರ್ಮಾನ ಮೆಟ್ರೋ ಕಾರ್ಡ್; ಬಿಎಂಆರ್‌ಸಿಎಲ್‌ನಿಂದ ಮಹತ್ವದ ತೀರ್ಮಾನ

ಪ್ರಸ್ತುತ ಬಿಎಂಆರ್‌ಸಿಎಲ್ ವೆಬ್ ಸೈಟ್ ಅಥವ ಅಪ್ಲಿಕೇಶನ್ ಮೂಲಕ ಮಾತ್ರ ಮೆಟ್ರೋ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬೇಕು. ಹೊಸ ಕಾರ್ಡ್‌ ಪಡೆದವರು ಮಾತ್ರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರಿಚಾರ್ಜ್ ಮಾಡಬಹುದಾಗಿದೆ.

ಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರ ಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರ

ಹಿಂದೆ ನಮ್ಮ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕಾರ್ಡ್ ರಿಚಾರ್ಜ್ ವ್ಯವಸ್ಥೆ ಇತ್ತು. ಆದರೆ, ಬಿಎಂಆರ್‌ಸಿಎಲ್ ಈಗ ಅದನ್ನು ರದ್ದುಗೊಳಿಸಿದೆ. ವೆಬ್ ಸೈಟ್, ಅಪ್ಲಿಕೇಶನ್ ಮೂಲಕ ಮಾತ್ರ ರಿಚಾರ್ಜ್ ಮಾಡುವುದಕ್ಕೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಜಕ್ಕೂರು ಬಳಿ ನಮ್ಮ ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ತಡೆ ಜಕ್ಕೂರು ಬಳಿ ನಮ್ಮ ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ತಡೆ

1 ಗಂಟೆ ಮೊದಲು ರಿಚಾರ್ಜ್

1 ಗಂಟೆ ಮೊದಲು ರಿಚಾರ್ಜ್

ನಮ್ಮ ಮೆಟ್ರೋ ಪ್ರಯಾಣಿಕರು ನಿಲ್ದಾಣ ತಲುಪುವ ಒಂದು ಗಂಟೆ ಮೊದಲು ನಿಗಮದ ವೆಬ್ ಸೈಟ್ ಅಥವ ಅಪ್ಲಿಕೇಶನ್ ಮೂಲಕ ಈಗ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು. ಆದರೆ, ಈ ವ್ಯವಸ್ಥೆ ಪ್ರಯಾಣಿಕ ಸ್ನೇಹಿ ಆಗಿಲ್ಲ ಎಂಬುದು ಪ್ರಯಾಣಿಕರ ದೂರುಗಳಾಗಿವೆ.

15 ದಿನಗಳಲ್ಲಿ ಹೊಸ ವ್ಯವಸ್ಥೆ

15 ದಿನಗಳಲ್ಲಿ ಹೊಸ ವ್ಯವಸ್ಥೆ

"ಪೇಟಿಎಂ, ಗೂಗಲ್ ಪೇ ಮುಂತಾದವುಗಳ ಮೂಲಕ ಪ್ರಯಾಣಿಕರು ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುವ ವ್ಯವಸ್ಥೆಯನ್ನು ನಮ್ಮ ತಂಡ ಮಾಡುತ್ತಿದೆ. 10 ರಿಂದ 15 ದಿನದಲ್ಲಿ ಇದು ಜಾರಿಗೆ ಬರಲಿದೆ" ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.

ಟೋಕನ್ ವಿತರಣೆ ಕಾರ್ಯ ಸ್ಥಗಿತ

ಟೋಕನ್ ವಿತರಣೆ ಕಾರ್ಯ ಸ್ಥಗಿತ

ಕೋವಿಡ್ ಪರಿಸ್ಥಿತಿಯ ಕಾರಣ ನಮ್ಮ ಮೆಟ್ರೋ ಸಂಚಾರಕ್ಕೆ ಟೋಕನ್ ಕೊಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಮತ್ತೊಂದು ಕಡೆ ಸ್ಮಾರ್ಟ್ ಕಾರ್ಡ್‌ನಲ್ಲಿನ ಮೊತ್ತ ಸರಿಯಾಗಿ ತೋರಿಸುತ್ತಿಲ್ಲ. ರಿಚಾರ್ಜ್ ಸಹ ಬೇಗ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಕಾರ್ಡ್ ರಿಚಾರ್ಜ್ ಸುಲಭ

ಕಾರ್ಡ್ ರಿಚಾರ್ಜ್ ಸುಲಭ

ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್‌ಗೆ ಇರುವ ಪೇಮೆಂಟ್ ಮಾದರಿಗಳನ್ನು ಹೆಚ್ಚಿಸಿ ಸರಳೀಕರಣಗೊಳಿಸಲಾಗುತ್ತಿದೆ. ಇದರಿಂದಾಗಿ ಕೆಲವೇ ನಿಮಿಷಗಳಲ್ಲಿ ಜನರು ಕಾರ್ಡ್ ರಿಚಾರ್ಜ್ ಮಾಡಿಕೊಂಡು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದಾಗಿದೆ.

English summary
BMRCL will allowed to recharge Namma Metro smart card through paytm and google pay soon. New system will come to effect in 15 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X