Metro Fare Hike: ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆ ಅಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಇತ್ತೀಚೆಗೆ ಜಾರಿಯಾದ ಮೆಟ್ರೋ ಟಿಕೆಟ್ ದರ ಏರಿಕೆಯಿಂದಾಗಿ ಪ್ರಯಾಣಿಕರಲ್ಲಿ ಉಂಟಾಗಿರುವ ಅಸಮಾಧಾನ ಮತ್ತು ಆಕ್ರೋಶವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮೆಟ್ರೋ ದರ ನಿಗದಿ ಮಾಡುವ ಅಧಿಕಾರ ಕರ್ನಾಟಕ ಸರ್ಕಾರಕ್ಕೆ ಇಲ್ಲ ಎಂಬ ಸತ್ಯವನ್ನು ಜನರು ತಿಳಿದುಕೊಳ್ಳಬೇಕು. ನಮ್ಮ ಮೆಟ್ರೋ ಕೇವಲ ಸಾರಿಗೆ ವ್ಯವಸ್ಥೆಯಷ್ಟೇ ಅಲ್ಲ, ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬಗಳ ದಿನನಿತ್ಯದ ಜೀವನಾಡಿ. ಇದು ನಗರದ ಭವಿಷ್ಯ ಹಾಗೂ ಮಹತ್ವಾಕಾಂಕ್ಷೆಗಳ ಪ್ರತೀಕ ಕೂಡ ಎಂದಿದ್ದಾರೆ.

ಈ ವಿಚಾರದಲ್ಲಿ ಸತ್ಯವನ್ನು ಜನರಿಗೆ ತಿಳಿಸಬೇಕಿದೆ, ರಾಜಕೀಯ ವಂಚನೆಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೆಟ್ರೋ ದರ ನಿಗದಿ ಮಾಡುವ ಅಧಿಕಾರ ಕರ್ನಾಟಕ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದು, ಮೆಟ್ರೋ ರೈಲ್ವೇಸ್ (O&M) ಕಾಯ್ದೆ-2002 ಅಡಿಯಲ್ಲಿ ದರಗಳನ್ನು ನಿಗದಿಪಡಿಸುವುದು ಸಂಪೂರ್ಣವಾಗಿ ಕೇಂದ್ರ ಸರ್ಕಾರ ರಚಿಸುವ ಸ್ವತಂತ್ರ ಫೇರ್ ಫಿಕ್ಸೇಶನ್ ಕಮಿಟಿಯ ಅಧಿಕಾರ ಎಂದು ಹೇಳಿದ್ದಾರೆ.

Metro Fare Hike

ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ

ಕಾಯ್ದೆಯ 36 ಮತ್ತು 37ನೇ ವಿಧಿಗಳ ಪ್ರಕಾರ, ಈ ಸಮಿತಿಯ ಶಿಫಾರಸುಗಳು ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರಕ್ಕಾಗಲಿ, ಬಿಎಂಆರ್‌ಸಿಎಲ್‌ಗಾಗಲಿ ಅದನ್ನು ಬದಲಾಯಿಸುವ ಯಾವುದೇ ಕಾನೂನು ಅಧಿಕಾರವಿಲ್ಲ. ಆದ್ದರಿಂದ ಮೆಟ್ರೋ ದರ ಏರಿಕೆಗೆ ಕರ್ನಾಟಕ ಸರ್ಕಾರವನ್ನು ಹೊಣೆ ಮಾಡುವುದೇ ವಾಸ್ತವಕ್ಕೆ ದೂರವಾದದ್ದು ಹಾಗೂ ಉದ್ದೇಶಪೂರ್ವಕ ತಪ್ಪು ಪ್ರಚಾರ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೂ ಕಾನೂನು ಪ್ರಕ್ರಿಯೆಗಳಾಚೆಗೂ ಜನರ ಮೇಲಿನ ನಮ್ಮ ಹೊಣೆಗಾರಿಕೆ ಇದೆ ಎಂದು ಸಿಎಂ ಹೇಳಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೈಗೆಟಕುವ ದರದಲ್ಲಿ, ಎಲ್ಲ ವರ್ಗದ ಜನರಿಗೆ ಲಭ್ಯವಾಗಬೇಕು ಎಂಬುದೇ ನಮ್ಮ ಬದ್ಧತೆ. ಈ ಹಿನ್ನೆಲೆ ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಕಡಿಮೆ ಆದಾಯದ ವರ್ಗದವರ ಹಿತವನ್ನು ಗಮನದಲ್ಲಿಟ್ಟುಕೊಂಡು, ಮೆಟ್ರೋ ದರಗಳನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರದೊಂದಿಗೆ ಅಧಿಕೃತವಾಗಿ ವಿಷಯವನ್ನು ಎತ್ತಿಹಿಡಿಯುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಜೆಪಿ ಸಚಿವರು ಏಕೆ ವಿರೋಧಿಸುತ್ತಿಲ್ಲ?

ಈ ನಡುವೆ, ಕೇಂದ್ರದಲ್ಲಿ ಕರ್ನಾಟಕದ ಹಿತ ರಕ್ಷಿಸಲು ವಿಫಲರಾದ ಬಿಜೆಪಿ ನಾಯಕರು, ಈಗ ಬೆಂಗಳೂರಿನಲ್ಲಿ ರಾಜಕೀಯ ನಾಟಕವಾಡುತ್ತಿದ್ದಾರೆ. ಬಿಜೆಪಿ ಸಂಸದರು ಸಂಸತ್ತಿನಲ್ಲಿ ಈ ವಿಚಾರವನ್ನು ಏಕೆ ಗಂಭೀರವಾಗಿ ಎತ್ತಲಿಲ್ಲ? ಕೇಂದ್ರದ ಬಿಜೆಪಿ ಸಚಿವರು ಮೆಟ್ರೋ ದರ ಏರಿಕೆಗೆ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ಈ ದರ ಏರಿಕೆ ಕೂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ನಡೆಸುತ್ತಿರುವ ಅನ್ಯಾಯಗಳ ಸರಣಿಯ ಭಾಗವೇ ಎಂದೂ ಆರೋಪಿಸಿದ್ದಾರೆ.

ಕೇಂದ್ರದಿಂದ ತೆರಿಗೆ ಪಾಲು ಕಡಿತ, ನ್ಯಾಯಸಮ್ಮತ ಅನುದಾನ ನಿರಾಕರಣೆ, ಮೂಲಸೌಕರ್ಯ ಯೋಜನೆಗಳಲ್ಲಿ ವಿಳಂಬ ಮತ್ತು ಈಗ ಮೆಟ್ರೋ ದರ ಏರಿಕೆ - ಇವೆಲ್ಲವೂ ಕರ್ನಾಟಕದ ವಿರುದ್ಧದ ಅನ್ಯಾಯಗಳು. ಕರ್ನಾಟಕ ಸರ್ಕಾರ ತನ್ನ ಜನರ ಜೊತೆ ಸದಾ ನಿಲ್ಲುತ್ತದೆ. ಬೆಂಗಳೂರಿನ ಜನರ ಹಿತ ರಕ್ಷಣೆಗೆ ನಾವು ಸಂವಿಧಾನಬದ್ಧವಾಗಿ, ದೃಢವಾಗಿ ಹೋರಾಟ ನಡೆಸುತ್ತೇವೆ. ಹಣಕಾಸು, ಆಡಳಿತಾತ್ಮಕ ಅಥವಾ ರಾಜಕೀಯ ಯಾವುದೇ ಅನ್ಯಾಯಕ್ಕೂ ಮೌನವಾಗಿರುವುದಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+