ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಬೈಕ್ ಇನ್ನು ಬೌನ್ಸ್ ಬೈಕ್ : ಜತೆಗೆ ಸಿಗುತ್ತೆ ಬೈಸಿಕಲ್

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4: ಬೆಂಗಳೂರಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ನಮ್ಮ ಮೆಟ್ರೋ ಸೇವೆಯನ್ನು ಆರಂಭಿಸಲಾಗಿದೆ. ಜತೆಗೆ ನಮ್ಮ ಮೆಟ್ರೋ ನಿಲ್ದಾಣದಿಂದ ಎಲೆಕ್ಟ್ರಿಕ್ ಬೈಕ್ ಸೇವೆಯನ್ನೂ ಕೂಡ ನೀಡಲಾಗುತ್ತಿದೆ. ಆದರೆ ಆ ಬೈಕ್ ಹೆಸರು ಮಾತ್ರ ಬದಲಾಗಿದೆ.

ಬೈಕ್ ಸೇವೆ ನೀಡುತ್ತಿದ್ದ ಅಪ್ಲಿಕೇಷನ್ ಮೇಲ್ದರ್ಜೆಗೇರಿಸಲಾಗಿದ್ದು ಇನ್ನುಮುಂದೆ ಬೌನ್ಸ್ ಅಪ್ಲಿಕೇಷನ್ ನಲ್ಲಿ ಲಭ್ಯವಿರಲಿದೆ. ಹಲವು ತಿಂಗಳಿಂದ ಬಾಡಿಗೆ ದ್ವಿಚಕ್ರ ವಾಹನ ಸೇವೆಯನ್ನು ಒದಗಿಸಲಾಗುತ್ತಿತ್ತು. ಮೆಟ್ರೋ ಬೈಕ್ ಅಪ್ಲಿಕೇಷನ್ ನಲ್ಲಿ ದೊರೆಯುತ್ತಿತ್ತು ಆದರೆ ಇದೀಗ ಬೌನ್ಸ್ ಅಪ್ಲಿಕೇಷನ್ ಮೂಲಲ ದೊರೆಯಲಿದೆ.

ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್ ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್

ಮೆಟ್ರೋ ಬೈಕ್ ಸಂಸ್ಥೆಯು ನಗರದ 31 ಮೆಟ್ರೋ ನಿಲ್ದಾಣಗಳಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಬೈಕ್ ಗಳನ್ನು ಬಾಡಿಗೆಗೆ ಇರಿಸಿದೆ. ಈ ಸೇವೆಯು ಮೆಜೆಸ್ಟಿಕ್, ಸಿಟಿ ರೈಲ್ವೆ ನಿಲ್ದಾಣ, ಎಂಎನ್ ಸಿ ಕಂಪನಿಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಇರಿಸಲಾಗಿದೆ.

ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ಬೈಕ್! ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ಬೈಕ್!

ಸಂಸ್ಥೆ ಕೇವಲ ಬೈಕ್ ಗೆ ಸೀಮಿತವಾಗಿರದೆ ಇದೀಗ ಬೈಸಿಕಲ್ ಸೇವೆಯನ್ನೂ ನೀಡಲು ಮುಂದಾಗಿದೆ. ಆದ್ದರಿಂದ ಮೆಟ್ರೋ ಬೈಕ್ ಹೆಸರಿನ ಬದಲಿಗೆ ಬೌನ್ಸ್ ಎಂದು ಹೆಸರು ಬದಲಾಯಿಸಿಕೊಂಡಿದೆ.

ಹೊಸ ಅಪ್ಲಿಕೇಷನ್ ಡೌನ್‌ಲೋಡ್ ಅಗತ್ಯವಿಲ್ಲ

ಹೊಸ ಅಪ್ಲಿಕೇಷನ್ ಡೌನ್‌ಲೋಡ್ ಅಗತ್ಯವಿಲ್ಲ

ಮೆಟ್ರೋ ಬೈಕ್ ಎಂಬ ಹೆಸರು ಬದಲಾದ ಬಳಿಕ ಗ್ರಾಹಕರು ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಬೌನ್ಸ್ ಎಂಬ ಹೆಸರಿನ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಮೆಟ್ರೋ ಬೈಕ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡವರು ಅಪ್‌ಡೇಟ್ ಮಾಡಿಕೊಂಡು ಮುಂದುವರೆಯಬಹುದಾಗಿದೆ.ಆದರೆ ಹೊಸ ಗ್ರಾಹಕರು ಬೌನ್ಸ್ ಹೆಸರಿನ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಸೇವೆ ಪಡೆಯಬಹುದು.

ಬೌನ್ಸ್ ಬೈಕ್ ಬಾಡಿಗೆ ಎಷ್ಟು?

ಬೌನ್ಸ್ ಬೈಕ್ ಬಾಡಿಗೆ ಎಷ್ಟು?

ಈಗಿರುವ ಗ್ರಾಹಕರಿಗೆ ಪ್ರತಿ ಕಿ.ಮೀಗೆ 3ರೂ ಬಾಡಿಗೆ ನಿಗದಿ ಮಾಡಲಾಗಿದೆ. ಪ್ರತಿ ನಿಮಿಷಕ್ಕೆಪೈಸೆ ನಿಗದಿಪಡಿಸಲಾಗಿದೆ. ಗ್ರಾಹಕರು ಸಂಸ್ಥೆಯ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಸೇವೆ ಪಡೆಯುತ್ತಿದ್ದಾರೆ. ಕೀ ರಹಿತ ಸೇವೆ ಇದಾಗಿದ್ದು, ಬೈಕ್ ಬುಕ್ ಮಾಡುವಾಗ ಗ್ರಾಹಕರು ಪಡೆಯುವ ಓಟಿಪಿ ಸಂಖ್ಯೆಯನ್ನು ಬೈಕ್ ನಲ್ಲಿ ಹಾಕಿದರೆ ಲಾಕ್ ತೆರೆದುಕೊಳ್ಳುತ್ತದೆ.

ಸೆಪ್ಟೆಂಬರ್ ಅಂತ್ಯದೊಳಗೆ ಮತ್ತೊಂದು ಆರು ಬೋಗಿಯ ಮೆಟ್ರೋ

ಸೆಪ್ಟೆಂಬರ್ ಅಂತ್ಯದೊಳಗೆ ಮತ್ತೊಂದು ಆರು ಬೋಗಿಯ ಮೆಟ್ರೋ

ನಮ್ಮಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗಾಗಿ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಈಗಾಗಲೇ ಆರುಬೋಗಿಯ ಮೆಟ್ರೋ ಸಂಚಾರ ಆರಂಭಗೊಂಡಿದೆ. ಶೀಘ್ರ ಇನ್ನೊಂದು ಬೋಗಿ ಸೇರ್ಪಡೆಯಾಗಲಿದೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಚಾರ್ಜಿಗ್ ಸ್ಟೇಷನ್ ನಿರ್ಮಿಸಲಾಗುತ್ತಿದೆ, ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ, ಅದರೊಂದಿಗೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ತೆರೆಯಲಾಗುತ್ತಿದೆ.

English summary
Metro bike which is serving bike on rent with four thousand bike now onwards will be Bounce bike app adding with bicycles on rent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X