• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಮರ್ಸಿಡೀಸ್ ಬೆಂಜ್ ಕಾರ್‌ ವಶ!

|

ಬೆಂಗಳೂರು, ಅ. 03: ನಗರದಲ್ಲಿ ಡ್ರಗ್ ಕುರಿತು ತನಿಖೆ ತೀವ್ರಗೊಂಡಿರುವ ಸಂದರ್ಭದಲ್ಲಿಯೇ ಬೆಂಗಳೂರಿನ ಯಲಹಂಕದ ಸಾರಿಗೆ ಅಧಿಕಾರಿಗಳು ಮರ್ಸಿಡೀಸ್ ಬೆಂಜ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಕಾರ್ಯಾಚರಣೆಗೆ ಡ್ರಗ್ಸ್‌ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2018ನೇ ಇಸವಿಯಿಂದ ತೆರಿಗೆ ಕಟ್ಟದೆ ತಾತ್ಕಾಲಿಕ ನೋಂದಣಿ ನಂಬರ್‌ನಲ್ಲಿ ವಾಹನ ಚಲಾಯಿಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರ‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಲಹಂಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಪ್ರಕಾಶ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 2018ರಲ್ಲಿ ಖರೀದಿಸಿದ್ದ ಮರ್ಸಿಡೀಸ್‌ ಬೆಂಜ್‌ ಕಾರನ್ನು ತಾತ್ಕಾಲಿಕ ನೋಂದಣಿ ನಂಬರ್‌ನಲ್ಲೇ ಇದುವರೆಗೂ ಓಡಿಸಲಾಗುತ್ತಿತ್ತು. ಆಗಸ್ಟ್‌ 2018 ರಲ್ಲಿ ತಾತ್ಕಾಲಿಕ ನೋಂದಣಿ ಸಮಯ ಮುಗಿದಿದೆ. ಆ ನಂತರ 37 ಸಾವಿರ ಕಿಲೋಮೀಟರ್‌ ವಾಹನ ಚಲಾಯಿಸಿದ್ದು, ಒಂದು ತಿಂಗಳ ಕಾಲ ನಿಗಾವಹಿಸಿ 15,80,000 ತೆರಿಗೆ ಹಣವನ್ನು ಕಟ್ಟದೆ ವಂಚಿಸಿದ್ದನ್ನು ಸಾರಿಗೆ ಆಧಿಕಾರಿಗಳ ತಂಡ ಪತ್ತೆ ಹಚ್ಚಿದೆ.

ಯಲಹಂಕ ಸಾರಿಗೆ ಕಚೇರಿಯ ಮೋಟಾರ್‌ ವಾಹನ ಇನ್ಸ್‌ಪೆಕ್ಟರ್ ಲಕ್ಷ್ಮೀ ಅವರ ತಂಡ ಕಾರ್ಯಾಚರಣೆ ನಡೆಸಿದ್ದು, ಇದೀಗ ‌ ಬೆಂಜ್‌ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

English summary
The Mercedes-Benz, which operates a temporary registration number, has been seized Yelahanka Regional Transport Department Officer Prakash said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X