ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಜುಲೈ 29: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ರೈಲು ಸೇವೆಯನ್ನು ಪ್ರಾರಂಭಿಸಲಾಗಿದೆ. ವಿಮಾನ ಪ್ರಯಾಣಿಕರು, ವಿಮಾಣ ನಿಲ್ದಾಣಗಳಲ್ಲಿ ಕೆಲಸ ಮಾಡುವ ಮತ್ತು ಆ ಭಾಗದ ಜನರಿಗೆ ರೈಲ್ವೆ ಸೌಲಭ್ಯದಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಶುಕ್ರವಾರದಿಂದಲೇ ರೈಲುಗಳು ಕಾರ್ಯಾಚರಣೆ ಆರಂಭಿಸಿವೆ.

ಬೆಂಗಳೂರು-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರೈಲ್ವೆ ಮಾರ್ಗವನ್ನು ಹೊಸದಾಗಿ ವಿದ್ಯುದ್ದೀಕರಿಸಲಾಗಿದೆ. ಈ ಭಾಗದಲ್ಲಿ ಐದು ಜೋಡಿ ಮೆಮು (MEMU) ರೈಲುಗಳನ್ನು ಸಂಚಾರವನ್ನು ಆರಂಭಿಸುವುದಾಗಿ ನೈಋತ್ಯ ರೈಲ್ವೆ (SWR) ಗುರುವಾರ ಹೇಳಿತ್ತು.

ಬೆಂಗಳೂರು; 8 ಡೆಮು ರೈಲು ಸಂಚಾರ ಆರಂಭ, ವೇಳಾಪಟ್ಟಿಬೆಂಗಳೂರು; 8 ಡೆಮು ರೈಲು ಸಂಚಾರ ಆರಂಭ, ವೇಳಾಪಟ್ಟಿ

ರೈಲ್ವೇ ಮಾರ್ಗವನ್ನು ಹೊಸದಾಗಿ ವಿದ್ಯುದ್ದೀಕರಣ ವೇಳೆ ಹಲವು ಸಮಸ್ಯೆಗಳು ಎದುರಾಗಿದ್ದರಿಂದ ಕಾಮಗಾರಿಗಳು ವಿಳಂಬವಾದವು. ಇತ್ತೀಚೆಗೆ, ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಳೆಯ ಪ್ರಸರಣ ಮಾರ್ಗವನ್ನು ಬದಲಾಯಿಸಿತು, ಸುರಕ್ಷತಾ ಮಾನದಂಡಗಳ ಪ್ರಕಾರ ಮಾರ್ಗವನ್ನು ಎತ್ತರಿಸಿದೆ. ಅದರ ನಂತರ, ನೈಋತ್ಯ ರೈಲ್ವೆ ಮೆಮು ರೈಲುಗಳ ಪ್ರಯೋಗಾತ್ಮಕ ಓಡಾಟ ನಡೆಸಿತು. ನಂತರ ಸೇವೆಗಳನ್ನು ಆರಂಭಿಸಲು ನಿರ್ಧರಿಸಿತು.

ಹೊಸ ಸೇವೆಯ ಪರಿಚಯವು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಜನರಿಗೆ ಪ್ರಯೋಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ನಗರದ ಹಲವು ನಿಲ್ದಾಣಗಳಿಂದ 10 ರಿಂದ 15 ರುಪಾಯಿ ಪಾವತಿಸಿ ಪ್ರಯಾಣಿಸಬಹುದು.

 ನೂತನ ರೈಲು ವೇಳಾಪಟ್ಟಿ ನಿಗದಿ

ನೂತನ ರೈಲು ವೇಳಾಪಟ್ಟಿ ನಿಗದಿ

ಬೆಂಗಳೂರು ವಿಮಾನ ನಿಲ್ದಾಣದ ನಿರ್ವಾಹಕರಾದ ಕೆಂಪೇಗೌಡ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (KIAL) ಅನ್ನು ಸಂಪರ್ಕಿಸಿದ ನಂತರ ಹೊಸ ರೈಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಬೆಂಗಳೂರು) ಶ್ಯಾಮ್ ಸಿಂಗ್ ತಿಳಿಸಿದ್ದಾರೆ.

"ಮೆಮು ರೈಲುಗಳನ್ನು ಓಡಿಸಲು ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಿದ ನಂತರ, ನಾವು ಶುಕ್ರವಾರದಿಂದ ಹೊಸ ಸೇವೆಗಳನ್ನು ಪರಿಚಯಿಸುತ್ತಿದ್ದೇವೆ. ಬಿಐಎಲ್‌ ಜೊತೆ ಸಮಾಲೋಚನೆ ನಡೆಸಿದ ನಂತರ ಸೇವೆಗಳನ್ನು ಪರಿಚಯಿಸಲಾಗಿದೆ. ನೂತನ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು ಅದರಂತೆ ರೈಲುಗಳು ಕಾರ್ಯ ನಿರ್ವಹಿಸಲಿವೆ" ಎಂದರು.

 ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಓಡಾಟ

ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಓಡಾಟ

2021ರಲ್ಲಿ ನೈಋತ್ಯ ರೈಲ್ವೆ ಮೊದಲ ಬಾರಿಗೆ ಐದು ಜೋಡಿ ಮೆಮು ರೈಲುಗಳ ಸೇವೆಯನ್ನು ವಿಮಾನ ನಿಲ್ದಾಣಕ್ಕೆ ಪರಿಚಯಿಸಲಾಯಿತು. ಆದರೆ ಜನರಿಂದ ಅದಕ್ಕೆ ಸೂಕ್ತ ಸ್ಪಂದನೆ ಸಿಗಿಲಿಲ್ಲ. ರೈಲ್ವೆ ಸೇವೆಯೂ ಸಮರ್ಪಕವಾಗಿಲ್ಲದ ಕಾರಣ ಮತ್ತು ಇತರ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ ಸೇವೆಗಳನ್ನು ನಿಲ್ಲಿಸಲಾಯಿತು.

ನಂತರ ಸಮಸ್ಯೆಗಳನ್ನು ಸರಿಪಡಿಸಿದ ನೈಋತ್ಯ ರೈಲ್ವೆ ಈಗ ಮತ್ತೆ ಮೆಮು ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಎಲ್ಲಾ ದೋಷಗಳನ್ನು ಸರಿಪಡಿಸಲಾಗಿದ್ದು, ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಇತರೆ ನಿಲ್ದಾಣಗಳಿಂದಲೂ ರೈಲು ಸೇವೆ ಆರಂಭಕ್ಕೆ ಒತ್ತಾಯ

ಇತರೆ ನಿಲ್ದಾಣಗಳಿಂದಲೂ ರೈಲು ಸೇವೆ ಆರಂಭಕ್ಕೆ ಒತ್ತಾಯ

ರೈಲು ಹೋರಾಟಗಾರ ಕೆ.ಎನ್. ಕೃಷ್ಣಪ್ರಸಾದ್ ರೈಲುಗಳ ಮತ್ತೆ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ಸ್ವಾಗತಿಸಿದ್ದಾರೆ, "ರೈಲು ಸೇವೆಗಳನ್ನು ಮರುಪ್ರಾರಂಭಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನೈಋತ್ಯ ರೈಲ್ವೆ ಇತರ ಸಮಯಗಳಲ್ಲಿ ರೈಲುಗಳನ್ನು ಓಡಿಸುವ ಸಾಧ್ಯತೆಯ ಬಗ್ಗೆಯೂ ಚಿಂತಿಸಲಿ. ಇದರ ಜೊತೆಗೆ ನಗರದ ಇತರ ಸ್ಥಳಗಳಿಂದ ರೈಲುಗಳನ್ನು ಓಡಿಸುವ ಅವಶ್ಯಕತೆಯಿದೆ" ಎಂದು ತಿಳಿಸಿದರು.

ಯಶವಂತಪುರ, ಹೊಸೂರು, ವೈಟ್‌ಫೀಲ್ಡ್ ಮತ್ತು ಇತರ ರೈಲ್ವೆ ನಿಲ್ದಾಣಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಗೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

 ಮೆಮು ರೈಲುಗಳ ನೂತನ ವೇಳಾಪಟ್ಟಿ

ಮೆಮು ರೈಲುಗಳ ನೂತನ ವೇಳಾಪಟ್ಟಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲ್ವೆ ನಿಲ್ದಾಣ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಲಹಂಕದಿಂದ ದೇವನಹಳ್ಳಿಗೆ ರೈಲುಗಳು ಕಾರ್ಯನಿರ್ವಹಿಸಲಿವೆ. ರೈಲು ಸಂಖ್ಯೆ 06531 ಕೆಎಸ್‌ಆರ್ ಬೆಂಗಳೂರಿನಿಂದ ಬೆಳಿಗ್ಗೆ 4.55 ಕ್ಕೆ ಹೊರಟು ಬೆಂಗಳೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ರೈಲು ನಿಲ್ದಾಣವನ್ನು ಬೆಳಿಗ್ಗೆ 6.20 ಕ್ಕೆ ತಲುಪುತ್ತದೆ. ವಿರುದ್ಧ ದಿಕ್ಕಿನಿಂದ, ರೈಲು ಸಂಖ್ಯೆ 06532 ಕೆಐಎ ನಿಲುಗಡೆ ನಿಲ್ದಾಣದಿಂದ ರಾತ್ರಿ 7.58 ಕ್ಕೆ ಹೊರಟು 9.20 ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ.

ರೈಲು ಸಂಖ್ಯೆ 06533 ದೇವನಹಳ್ಳಿಯಿಂದ ಬೆಳಿಗ್ಗೆ 6.30 ಕ್ಕೆ ಹೊರಟು 7 ಗಂಟೆಗೆ ಯಲಹಂಕವನ್ನು ತಲುಪುತ್ತದೆ ಮತ್ತು 06534 ಜೋಡಿ ರೈಲು 7.45 ಕ್ಕೆ ಯಲಹಂಕದಿಂದ ಹೊರಟು 8.03 ಕ್ಕೆ ಕೆಐಎ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 06535 ದೇವನಹಳ್ಳಿಯಿಂದ ಬೆಳಿಗ್ಗೆ 8.50 ಕ್ಕೆ ಹೊರಟು 10.10 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ ರೈಲು ಸಂಖ್ಯೆ 06536 ಕಂಟೋನ್ಮೆಂಟ್‌ನಿಂದ ಮಧ್ಯಾಹ್ನ 12.20 ಕ್ಕೆ ಹೊರಡುತ್ತದೆ 1.20 ಗಂಟೆಗೆ ಕೆಐಎ ನಿಲುಗಡೆ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 06537 ಕೆಐಎ ನಿಲ್ದಾಣದಿಂದ ಮಧ್ಯಾಹ್ನ 2.07 ಗಂಟೆ ಹೊರಟು 3.15 ಕ್ಕೆ ಕಂಟೋನ್ಮೆಂಟ್ ತಲುಪುತ್ತದೆ. ರೈಲು ಸಂಖ್ಯೆ 06538 ಕಂಟೋನ್ಮೆಂಟ್‌ನಿಂದ ಸಂಜೆ 4 ಗಂಟೆಗೆ ಹೊರಟು 5.14 ಕ್ಕೆ ಕೆಐಎ ನಿಲುಗಡೆ ನಿಲ್ದಾಣವನ್ನು ತಲುಪುತ್ತದೆ.

ರೈಲು ಸಂಖ್ಯೆ 06539 ಕೆಐಎ ನಿಲ್ದಾಣದಿಂದ ಸಂಜೆ 5.58 ಕ್ಕೆ ಹೊರಟು 6.20 ಕ್ಕೆ ಯಲಹಂಕ ತಲುಪುತ್ತದೆ, ವಿರುದ್ಧ ದಿಕ್ಕಿನಿಂದ, ರೈಲು ಸಂಖ್ಯೆ 06540 ​​ಯಲಹಂಕದಿಂದ 7.15 ಕ್ಕೆ ಹೊರಟು 7.37 ಗಂಟೆಗೆ ಕೆಐಎ ನಿಲುಗಡೆ ನಿಲ್ದಾಣ ತಲುಪುತ್ತದೆ.

Recommended Video

Rishikumar Swamiji ಮಂಗಳೂರಿನ ಘಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ | *Politics | OneIndia Kannada
 ವಿಶ್ವೇಶ್ವರಯ್ಯ ಟರ್ಮಿನಲ್-ಮೆಜೆಸ್ಟಿಕ್‌ ನಡುವೆ ರೈಲು

ವಿಶ್ವೇಶ್ವರಯ್ಯ ಟರ್ಮಿನಲ್-ಮೆಜೆಸ್ಟಿಕ್‌ ನಡುವೆ ರೈಲು

ವಿಶ್ವೇಶ್ವರಯ್ಯ ಟರ್ಮಿನಲ್‌-ಮೆಜೆಸ್ಟಿಕ್ ನಡುವೆಯೂ ಮೆಮು ರೈಲು ಸಂಚಾರಕ್ಕೆ ನೈಋತ್ಯ ರೈಲ್ವೆ ನಿರ್ಧರಿಸಿದೆ. ರೈಲು ಸಂಖ್ಯೆ 06523 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿಯಿಂದ 3.15 ಗಂಟೆಗೆ ಹೊರಟು 4 ಗಂಟೆಗೆ ಮೆಜೆಸ್ಟಿಕ್ ತಲುಪಲಿದೆ. ವಿರುದ್ಧ ದಿಕ್ಕಿನಲ್ಲಿ, ರೈಲು 06524 ಮೆಜೆಸ್ಟಿಕ್‌ನಿಂದ ರಾತ್ರಿ 9.30 ಹೊರಟು 10.05 ಕ್ಕೆ ಬೈಯಪ್ಪನಹಳ್ಳಿ ಟರ್ಮಿನಲ್ ತಲುಪುತ್ತದೆ.

English summary
The South Western Railway (SWR) Started MEMU Train Service Between Kempegowda International Airport (KIA) and Bengaluru. five pairs of MEMU trains will be introduced on the newly electrified line connecting the airport. The introduction of the new service is expected to benefit people traveling to the airport as they can travel paying Rs 10 to Rs 15 from city points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X