BJP MLA Munirathna: ರಾಜಕೀಯ ವಿರೋಧಿಗಳಿಗೆ HIV ಮಹಿಳೆಯರಿಂದ ಹನಿಟ್ರ್ಯಾಪ್: ಆಘಾತಕಾರಿ ಎಂದ ಎಂಬಿ ಪಾಟೀಲ್
ಬೆಂಗಳೂರು, ಸೆಪ್ಟಂಬರ್ 22: ಕರ್ನಾಟಕದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ಹಗರಣಗಳು ಒಂದೊಂದಾಗೆ ಸದ್ದು ಮಾಡುತ್ತಿವೆ. ದೇಶದಲ್ಲಿ ತಿರುತಪಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಈ ಮಧ್ಯೆ ಅದೆಷ್ಟೋ ರಾಜಕೀಯ ನಾಯಕರು ಮುನಿರತ್ನ ಅವರು ರಾಜಕೀಯವಾಗಿ ಎದುರುಗಾರರನ್ನು ಹಣಿಯಲು ಮುಂದಾದ ನಡೆ, ಹನಿಟ್ರ್ಯಾಪ್ ತಂತ್ರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೀಗ ಸಚಿವ ಎಂಬಿ ಪಾಟೀಲ್ ಅವರು ಕೆಲವು ವಿಷಯಗಳನ್ನು ಕೇಳಿ ಆಘಾತಗೊಂಡಿದ್ದಾರೆ.
ಹೌದು, ಶನಿವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಬಿಜೆಪಿ ಶಾಸಕ ಮುನಿರತ್ನ ಅವರು HIV ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್ ಮಾಡುತ್ತಿದ್ದರು ಎನ್ನುವ ಸಂಗತಿ ಕೇಳಿ ಬಂದಿದೆ. ಇದರ ಸತ್ಯಾಸತ್ಯತೆ ನನಗೆ ಗೊತ್ತಿಲ್ಲ. ಇದು ನಿಜವೇ ಆಗಿದ್ದರೆ ಇದೊಂದು ತಲೆ ತಗ್ಗಿಸಬೇಕಾದ ಆಘಾತಕಾರಿ ಸಂಗತಿಯಾಗಿದೆ. ಇದರ ಬಗ್ಗೆಯೂ ತನಿಖೆ ನಡೆದು ಸತ್ಯಾಂಶ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸದ್ಯ ಮುನಿರತ್ನ ಅವರ ಮೇಲಿನ ಆರೋಪ, ಜಾತಿ ನಿಂದನೆ, ಏಡ್ಸ್ ರೋಗಿಯ ರಕ್ತ ಪ್ರತಿ ಸ್ಪರ್ಧಿ ರಾಜಕೀಯ ನಾಯಕರಿಗೆ ಇಂಜೆಕ್ಟ್ ಮಾಡಲು ಮಾಡಲು, ಮಹಿಳಾ ರೋಗಿ ಇಟ್ಟುಕೊಂಡು ಹನಿಟ್ರ್ಯಾಪ್ ಮಾಡುವ ವಿಷಯ ಕೇಳಿ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್ ಬೆಚ್ಚಿ ಬಿದ್ದಿದ್ದಾರೆ. ಆರ್. ಅಶೋಕ್ ಸೇರಿ ಹಲವುರಿಗೆ ಈ ರಕ್ತ ಇಂಜೆಕ್ಟ್‌ಗೆ ಪ್ಲಾನ್ ಮಾಡಲಾಗಿತ್ತು ಅಂತಲೂ ಆರೋಪ ಇದೆ.
ಟಿಟಿಡಿಗೆ KMFನಿಂದ ತುಪ್ಪ ಪೂರೈಕೆಯಲ್ಲಿ ಕಲಬೆರಕೆ ಇರಲಿಲ್ಲ
ಇನ್ನು ಪ್ರತಿಷ್ಠಿತ ದೇವಾಲಯ ತಿರುಪತಿ ತಿಮ್ಮನ ಸನ್ನಿಧಿಯಲ್ಲಿ ಲಡ್ಡು ತಯಾರಿಕೆಯಲ್ಲಿ ಮೀನಿನ ಎಣ್ಣೆ, ದನ ಮತ್ತು ಹಂದಿ ಸೇರಿದಂತೆ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು. ಧಾರ್ಮಿಕವಾಗಿ ಪಾವಿತ್ರ್ಯ ಹೊಂದಿರುವ ತಿರುಪತಿ ಲಡ್ಡುವಿಗೆ ಪ್ರಾಣಿ ಜನ್ಯ ಕೊಬ್ಬನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಆಘಾತಕಾರಿಯಾಗಿದೆ.
ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬು ಬಳಕೆ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಈ ಬಗ್ಗೆ ತನಿಖೆ ನಡೆದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು. ಮೊದಲೆಲ್ಲ ಕರ್ನಾಟಕದ ಕೆಎಂಎಫ್ ನಿಂದ ತಿರುಪತಿಗೆ ತುಪ್ಪ ಪೂರೈಸುತ್ತಿತ್ತು. ಆಗ ಕಲಬೆರಕೆ ಇತ್ಯಾದಿ ಏನೂ ಇರಲಿಲ್ಲ. ಈ ಬಗ್ಗೆ ನಾನು ಕೆಎಂಎಫ್ ಅಧ್ಯಕ್ಷರ ಜತೆ ಕೂಡ ಮಾತನಾಡಿದ್ದೇನೆ. ಯಾರೇ ಆದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಎಂದು ಅವರು ಹೇಳಿದರು.












Click it and Unblock the Notifications