12 ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ನೇಮಕ: ಮಾಹಿತಿ
ಬೆಂಗಳೂರು, ಜನವರಿ 23: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸ್ಥಾನಗಳಿಗೆ ಮೇಯರ್ ಗೌತಮ್ ಕುಮಾರ್ ಅವರು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ.
ಸತತ ಮೂರು ಬಾರಿ ಮುಮದೂಡಿಕೆಯಾಗಿದ್ದ ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಸದಸ್ಯ ಚುನಾವಣೆ ಜ.18ರಂದು ಮುಗಿದಿದ್ದು, ಕೆಲ ಅಸಮಾಧಾನದ ನಡುವೆಯೂ ಎಲ್ಲಾ ಸ್ಥಾಯಿ ಸಮಿತಿಗಳಿಗೆ ಅವಿರೋಧ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.

12 ಸ್ಥಾಯಿ ಸಮಿತಿ ಅಧ್ಯಕ್ಷರ ಹೆಸರುಗಳು
1-ನಗರಯೋಜನೆ ಸ್ಥಾಯಿ ಸಮಿತಿ- ಅಶಾ ಸುರೇಶ್,
2-ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ- ಮೋಹನ್ ಕುಮಾರ್,
3-ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಹನುಮಂತಯ್ಯ,
4-ಲೆಕ್ಕಪತ್ರ ಸ್ಥಾಯಿ ಸಮಿತಿ- ಮಮತ ಶರವಣ,
5-ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಎಲ್ ಶ್ರೀನಿವಾಸ್,
6-ಆರೋಗ್ಯ ಸ್ಥಾಯಿ ಸಮಿತಿ- ಮಂಜುನಾಥ ರಾಜು,
7-ಶಿಕ್ಷಣ ಸ್ಥಾಯಿ ಸಮಿತಿ- ಮಂಜುಳ ನಾರಾಯಣ ಸ್ವಾಮಿ,
8-ಸಿಬ್ಬಂದಿ ಸುಧಾರಣೆ ಸ್ಥಾಯಿ ಸಮಿತಿ- ಅರುಣ ರವಿ,
9-ಅಪೀಲು ಸ್ಥಾಯಿ ಸಮಿತಿ- ಗುಂಡಣ್ಣ,
10-ತೋಟಗಾರಿಕೆ ಸ್ಥಾಯಿ ಸಮಿತಿ- ಉಮದೇವಿ,
11-ಮಾರುಕಟ್ಟೆ ಸ್ಥಾಯಿ ಸಮಿತಿ- ಪದ್ಮವತಿ,
12-ವಾರ್ಡ್ ಕಾಮಗಾರಿ ಸ್ಥಾಯಿ ಸಮಿತಿ- ಜಿ.ಕೆ ವೆಂಕಟೇಶ್.

ತೆರಿಗೆ ಸ್ಥಾಯಿ, ಆರೋಗ್ಯ ಸ್ಥಾಯಿ ಸಮಿತಿ ಕುರಿತ ಮಾಹಿತಿ
ತೆರಿಗೆ ಸ್ಥಾಯಿ ಸಮಿತಿ: ಮಾಜಿ ಉಪ ಮಹಾಪೌರ ಬಿ.ಭದ್ರೇಗೌಡ, ಮಹಾಲಕ್ಷ್ಮಿ ರವೀಂದ್ರ, ಎಂ.ಸತೀಶ್, ಬಿ.ಎನ್.ನಿತಿನ್ ಪುರುಷೋತ್ತಮ್, ದೇವದಾಸ್, ಭಾಗ್ಯಲಕ್ಷ್ಮಿ ಮುರುಳಿ, ಎಸ್. ಉದಯಕುಮಾರ್, ಕೇಶವ ಮೂರ್ತಿ, ವಸಂತಕುಮಾರ್, ಅನ್ಸರ್ ಪಾಷ ಅವರುಗಳು ಸದಸ್ಯರಾಗಿದ್ದು , ಕುಮಾರಸ್ವಾಮಿ ಬಡಾವಣೆಯ ಬಿಜೆಪಿ ಸದಸ್ಯ ಹಾಗೂ ಮಾಜಿ ಉಪ ಮಹಾಪೌರ ಎಲ್.ಶ್ರೀನಿವಾಸ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಆರೋಗ್ಯ ಸ್ಥಾಯಿ ಸಮಿತಿ: ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಜಿ.ಮಂಜುನಾಥ ರಾಜು ಅವರು ಆಯ್ಕೆಯಾಗಲಿದ್ದು, ಆರ್.ಪ್ರತಿಮಾ, ಶ್ರೀಕಾಂತ್, ಶಿಲ್ಪಾ ಶ್ರೀಧರ್, ಎಂ.ಪ್ರಮಿಳಾ, ಮಧುಕುಮಾರಿ ವಾಗೀಶ್, ಇರ್ಷಾದ್ ಬೇಗಂ, ಮೀನಾಕ್ಷಿ , ಆರ್.ರೂಪಾ, ಶಿಲ್ಪಾ ಅಭಿಲಾಷ್, ಶೋಭಾ ಜಗದೀಶ್ ಗೌಡ ಸದಸ್ಯರಾಗಿರುತ್ತಾರೆ. ನಗರ ಯೋಜನೆ: ಆಶಾ ಸುರೇಶ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ , ಟಿ.ವಿ.ಮಂಜುನಾಥ್ ಬಾಬು, ಆನಂದ್‍ಕುಮಾರ್, ರಾಮಚಂದ್ರ, ಡಿ.ಎಚ್.ಲಕ್ಷ್ಮಿ, ರಾಜಣ್ಣ, ಎಂ.ಶಶಿರೇಖಾ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣ, ಎನ್.ರಾಜಶೇಖರ್ ಸದಸ್ಯರಾಗಿರುತ್ತಾರೆ.

ಬೃಹತ್ ಕಾಮಗಾರಿ, ಶಿಕ್ಷಣ ಸ್ಥಾಯಿ ಸಮಿತಿ
ಬೃಹತ್ ಕಾಮಗಾರಿ ಸಮಿತಿ : ನಾಗರಬಾವಿ ವಾರ್ಡ್‍ನ ಮೋಹನ್ ಕುಮಾರ್ ಸಮಿತಿಯ ಅಧ್ಯಕ್ಷರಾಗಲಿದ್ದು, ಹರಿಪ್ರಸಾದ್, ಪ್ರಮೋದ್,ಚಂದ್ರಕಲಾ, ತೇಜಸ್ವಿನಿ, ಪಲ್ಲವಿ, ಕುಮಾರಿ ಪಳನಿಕಾಂತ್, ಸಿ.ಸರಳಾ ಮಹೇಶ್ ಬಾಬು, ಕೆಂಪೇಗೌಡ, ಪಳನಿಯಮ್ಮ ,ಕೆ.ವಿ.ರಾಜೇಂದ್ರ ಕುಮಾರ್ ಸದಸ್ಯರಾಗಿರುತ್ತಾರೆ.
ಶಿಕ್ಷಣ ಸ್ಥಾಯಿ ಸಮಿತಿ: ಈ ಸಮಿತಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಲಗ್ಗೆರೆ ವಾರ್ಡ್‍ನ ಮಂಜುಳಾ ನಾರಾಯಣಸ್ವಾಮಿ ಅವರು ಅಧ್ಯಕ್ಷರಾಗಲಿದ್ದಾರೆ. ಮಾಜಿ ಅಧ್ಯಕ್ಷ ಇಮ್ರಾನ್ ಪಾಷ, ಎಸ್.ಲೀಲಾ ಶಿವಕುಮಾರ್, ಹೇಮಲತಾ, ಸತೀಶ್ ಸೇಠ್, ಭವ್ಯ, ಸತ್ಯನಾರಾಯಣ, ಸರ್ವಮಂಗಳಾ, ಕೆ.ಮಮತಾ , ಜಿ.ವಿ.ಶಶಿಕಲಾ, ಮಂಜುನಾಥ ರೆಡ್ಡಿ ಸದಸ್ಯರಾಗಿರುತ್ತಾರೆ.
ಅಪೀಲು,ತೋಟಗಾರಿಕೆ ಸ್ಥಾಯಿ ಸಮಿತಿ ಕುರಿತ ಮಾಹಿತಿ
ಅಪೀಲು ಸ್ಥಾಯಿ ಸಮಿತಿ: ಪಕ್ಷೇತರ ಸದಸ್ಯ ಸಿ.ಆರ್. ಲಕ್ಷ್ಮೀನಾರಾಯಣ್ ಅವರು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವೇಲು ನಾಯಕರ್, ಜೈಪಾಲ್, ವೀಣಾ ಕುಮಾರಿ, ವಾಣಿ.ವಿ.ರಾವ್,ಅಜ್ಮಲ್ ಬೇಗ್, ಆರ್.ಸಂಪತ್‌ರಾಜ್ , ಅಬ್ದುಲ್ ಜಾಕಿರ್, ಶಕೀಲ್ ಅಹಮದ್, ಸುಮಂಗಲಾ, ಉಮ್ಮೇ ಸಲ್ಮಾ ಸದಸ್ಯರಾಗಿರುತ್ತಾರೆ.
ತೋಟಗಾರಿಕೆ ಸ್ಥಾಯಿ ಸಮಿತಿ: ಅದೇ ರೀತಿ ಮಾರುಕಟ್ಟೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ , ಸಾಮಾಜಿಕ ನ್ಯಾಯ,ಲೆಕ್ಕ ಪತ್ರ ಸ್ಥಾಯಿ ಸಮಿತಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೂ ಚುನಾವಣೆ ನಡೆಯಲಿದೆ.
ಹಾನಾ ಭುವನೇಶ್ವರಿ, ಜಿ ಕೋಕಿಲಾ ಚಂದ್ರಶೇಖರ್, ಜಿ ಬಾಲಕೃಷ್ಣನ್, ಉಮಾದೇವಿ, ನಾಗರಾಜ, ಡಿ ಎನ್ ರಮೇಶ್, ಎಸ್ ಸಂಪತ್ ಕುಮಾರ್ ಎಂ ಮಾಲತಿ ಸೋಮಶೇಖರ್ , ಐ ಯಶೋಧ, ಶ್ರೀಲತಾ, ಸಿಜಿ ಗೋಪಿನಾಥರಾಜು, ಎಂ ಆಂಜನಪ್ಪ ವಿ ಬಾಲಕೃಷ್ಣ. ಉಮಾದೇವಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾರುಕಟ್ಟೆ, ಸಿಬ್ಬಂದಿ ಸ್ಥಾಯಿ ಸಮಿತಿ
ಮಾರುಕಟ್ಟೆ ಸ್ಥಾಯಿ ಸಮಿತಿ : ಇದರಲ್ಲಿ ಪದ್ಮಾವತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿ ಮಂಜುನಾಥ್, ಎನ್ ನಾಗರಾಜು, ಸೈಯದ್ ಸಾಜೀದಾ, ವಿವಿ ಪಾರ್ತಿಬರಾಜನ್, , ಉಮಾವತಿ ಪದ್ಮರಾಜ್, ದೀಪಿಕಾ ಎನ್, ಮಂಜುನಾಥರೆಡ್ಡಿ, ಆರ್ ಪ್ರಭಾವತಿ ರಮೇಶ್ , ಭಾರತಿ ರಾಮಚಂದ್ರ, ಕೆ ಗಣೇಶ್ ರಾವ್ ಮಾನೆ, ಆರ್ ಪದ್ಮಾವತಿ ಅಮರಾತ್ ಸದಸ್ಯರಾಗಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ : ಇದರಲ್ಲಿ ಅರುಣ ರವಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜಿ ಪದ್ಮಾವತಿ, ಆರ್‌ಎಸ್ ಸತ್ಯನಾರಾಯಣ, ಮೊಹಮ್ಮದ್ ರಿಜ್ವಾನ್ ನವಾಬ್, ಎಂಬಿ ದ್ವಾರಕನಾಥ್ , ದೀಪಾ ನಾಗೇಶ್, ಜಿ ಇಂದಿರಾ, ಎಂ ನಾಗರಾಜ್, ಪ್ರತಿಭಾ ಧನರಾಜ್, ಗಂಗಮ್ಮ ಸದಸ್ಯರಾಗಿದ್ದಾರೆ.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ












Click it and Unblock the Notifications