ಬೆಂಗಳೂರಿನಲ್ಲಿ ಮ್ಯಾಕ್ಸ್ ಲೈಫ್ ಇನ್‍ಶೂರೆನ್ಸ್ ಶಾಖೆ ಆರಂಭ
ಬೆಂಗಳೂರು, ಆಗಸ್ಟ್ 01: ಭಾರತದ ಪ್ರಮುಖ ಲೈಫ್ ಇನ್‍ಶೂರೆನ್ಸ್ ಕಂಪನಿ ಮ್ಯಾಕ್ಸ್ ಲೈಫ್ ಇನ್‍ಶೂರೆನ್ಸ್ ಕಂಪನಿ ಲಿಮಿಟೆಡ್ (ಮ್ಯಾಕ್ಸ್ ಲೈಫ್/ಕಂಪನಿ) ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಣೆ ಮಾಡಿದೆ.
ತನ್ನ ಹೊಸ ಪ್ರತಿ ಶಾಖೆಯಲ್ಲಿಯೂ 8-10 ಪೂರ್ಣಪ್ರಮಾಣದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದ್ದು, 500 ಕ್ಕೂ ಹೆಚ್ಚು ಏಜೆಂಟ್ ಅಡ್ವೈಸರ್ ಗಳು ಮತ್ತು ಏಜೆನ್ಸಿ ಪಾಟ್ರ್ನರ್‍ಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸಲಿದೆ. ಈ ಕಚೇರಿ ಮೂಲಕ ಮ್ಯಾಕ್ಸ್ ಲೈಫ್ ಬೆಂಗಳೂರಿನ 12.5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆಯನ್ನು ಒದಗಿಸಲಿದೆ. ಮುಂದಿನ ಹಂತಗಳಲ್ಲಿ 16 ರಾಜ್ಯಗಳಲ್ಲಿ 60 ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆಯನ್ನು ರೂಪಿಸಿದೆ.
ಈ ಹೊಸ ಶಾಖೆಯ ಆರಂಭದ ಬಗ್ಗೆ ಮಾತನಾಡಿದ ಮ್ಯಾಕ್ಸ್ ಲೈಫ್ ಲೈಫ್ ಇನ್‍ಶೂರೆನ್ಸ್ ನ ಉಪ ವ್ಯವಸ್ಥಾಪಕ ನಿರ್ದೇಶಕ ವಿ.ವಿಶ್ವನಾಂದ್ ಅವರು, "ಕಂತಾರ್ ಐಎಂಆರ್ಬಿ ಸಹಯೋಗದಲ್ಲಿ ಮ್ಯಾಕ್ಸ್ ಲೈಫ್ ಇನ್‍ಶೂರೆನ್ಸ್ ನಡೆಸಿದ 'ಇಂಡಿಯಾ ಪ್ರೊಟೆಕ್ಟ್ ಕೋಶಂಟ್' ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಪ್ರಸ್ತುತ ನಗರ ಪ್ರದೇಶದ ಭಾರತೀಯರಲ್ಲಿ ಶೇ.79 ರಷ್ಟು ಜನರು ಏಜೆಂಟ್ ಅಡ್ವೈಸರ್ ಗಳ ಮೂಲಕವೇ ಲೈಫ್ ಇನ್‍ಶೂರೆನ್ಸ್ ಖರೀದಿಸಲು ಬಯಸುತ್ತಾರೆ.ಬೆಂಗಳೂರಿನಲ್ಲಿ ನಮ್ಮ ಏಜೆನ್ಸಿ ಜಾಲವನ್ನು ವಿಸ್ತರಣೆ ಮಾಡುವ ಮೂಲಕ ತನ್ನ ನಾಗರಿಕರಿಗೆ ಸೂಕ್ತ ಹಣಕಾಸು ಭದ್ರತೆಯನ್ನು ಒದಗಿಸಲು ಬದ್ಧವಾಗಿದೆ'' ಎಂದು ತಿಳಿಸಿದರು.

ಗ್ರಾಹಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಕಂಪನಿ ಎನಿಸಿರುವ ಮ್ಯಾಕ್ಸ್ ಲೈಫ್ ಇನ್‍ಶೂರೆನ್ಸ್ ಇತ್ತೀಚೆಗೆ ಮ್ಯಾಕ್ಸ್ ಲೈಫ್ ಸ್ಮಾರ್ಟ್ ಟರ್ಮ್ ಪ್ಲಾನ್ಅನ್ನು ಜಾರಿಗೆ ತಂದಿದೆ. ಇದಲ್ಲದೇ, ಮೈ ಪ್ರೊಟೆಕ್ಷನ್ ಕೋಶಂಟ್' ಯೋಜನೆಯನ್ನು ಜಾರಿಗೊಳಿಸಿದೆ.
ಹೊಸ ಕಚೇರಿ ವಿಳಾಸ: ಮ್ಯಾಕ್ಸ್ ಲೈಫ್ ಇನ್‍ಶೂರೆನ್ಸ್ ಕಂಪನಿ ಲಿಮಿಟೆಡ್, ಅರಬಿಂದೋ ಮಾರ್ಗ್, ಟಿಎಂಸಿ ಲೇಔಟ್, ಮೊದಲ ಹಂತ, ಬೆಂಗಳೂರು- 560078.












Click it and Unblock the Notifications