ಇನ್ನೂ ಲಗ್ನವಾಗಿಲ್ವಾ? ಬೆಂಗಳೂರು ಮದುವೆ ಮೇಳಕ್ಕೆ ಬನ್ನಿ
ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬುದು ಹಳೆಯ ಗಾದೆ. ಇಂದಿನ ಕಾಲದಲ್ಲಿ ಲಕ್ಷ ಸುಳ್ಳು ಹೇಳಿದರೂ ಮದುವೆಯಾಗುತ್ತಿಲ್ಲ ಎಂಬುದು ವಸ್ತುಸ್ಥಿತಿ. ಸಂಗಾತಿ ಹುಡುಕುವುದು ಒಂದು ಕಥೆಯಾದರೆ, ಮದುವೆ ನಿಶ್ಚಿಯವಾದರೂ ಕಲ್ಯಾಣ ಮಂಟಪ ನಿಗದಿ, ದುಬಾರಿ ಬೆಲೆ, ತಯಾರಿಗಾಗಿ ಓಡಾಟ, ಬಂಧುಗಳ ಆತಿಥ್ಯ ಮಾಡುವುದು ಮತ್ತೊಂದು ಕಥೆಯ ಚಾಪ್ಟರ್. ಇದನ್ನೆಲ್ಲ ಮಾಡಿ ಮುಗಿಸುವಷ್ಟರಲ್ಲಿ 'ಯಪ್ಪಾ, ಮದುವೆ ಸಾಕಪ್ಪಾ ಸಾಕು' ಎಂಬಂತಾಗುತ್ತದೆ.
ಇದಕ್ಕೇನಾದರೂ ಪರಿಹಾರವಿದೆಯಾ ಎಂದು ನೀವು ತಲೆಕೆಡಿಸಿಕೊಳ್ಳುತ್ತಿದ್ದರೆ, ಮದುವೆ ತಯಾರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸ್ವರೂಪವಾಗಿ ಬರುತ್ತಿದೆ ಭಾರತದ ಪ್ರಪ್ರಥಮ ಬೃಹತ್ ಮದುವೆ ಮೇಳ ದಿ ಶಾದಿ ಬಜಾರ್! ಸರ್ವ ಧರ್ಮಗಳ ಸಮನ್ವಯದ ಪ್ರತೀಕವಾಗಿ ಈ ಮದುವೆ ಮೇಳ ಏಪ್ರಿಲ್ 30ರಿಂದ ಮೇ 3ರವರೆಗೆ ಬೆಂಗಳೂರಿನ ಹೃದಯ ಭಾಗವಾದ ಸೆಂಟ್ ಜೋಸೆಫ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.

ತಮ್ಮ ಮಕ್ಕಳಿಗೆ ಯೋಗ್ಯ ಬಾಳ ಸಂಗಾತಿ ಹುಡುಕುವುದೇ ಇಂದು ದೊಡ್ಡ ತಲೆನೋವಾಗಿದೆ. ವಿಭಕ್ತ ಕುಟುಂಬಗಳಿಂದಾಗಿ ಹಾಗೂ ವ್ಯಸ್ಥ ಜೀವನ ಶೈಲಿಯಿಂದ ಮದುವೆ ತಯಾರಿ ಕಷ್ಟಕರವಾಗಿದೆ. ಶ್ರೀಮಂತ ವರ್ಗದವರಿಗೆ ಮದುವೆ ತಮ್ಮ ಪ್ರತಿಷ್ಠೆಯ ಪ್ರತೀಕವೂ ಆಗಿದೆ. ಆದರೆ ಮದುವೆ ತಯಾರಿಯ ಗೋಜಲಿನಿಂದಾಗಿ ಮದುವೆ ಸಮಾರಂಭದ ಆನಂದದಲ್ಲಿ ಪಾಲ್ಗೊಳಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಮದುವೆಗೆ ಸಂಬಂಧಿಸಿ ವ್ಯಾಪಾರ-ಉದ್ಯೋಗ ಮಾಡುತ್ತಿದ್ದರೂ ಸಹ ಗ್ರಾಹಕರ ಕೊರತೆಯಿಂದ ಬಳಲುತ್ತಿರಬಹುದು. ಇದಕ್ಕೆಲ್ಲ ಪರಿಹಾರ ಸ್ವರೂಪವಾಗಿಯೇ ಜನ್ಮ ತಳೆದಿದ್ದು ದಿ ಶಾದಿ ಬಜಾರ್.
ದಿ ಶಾದಿ ಬಜಾರ್ ನ ಹುಟ್ಟು : ಬೇರೆ ಬೇರೆ ಧರ್ಮಗಳಿಗೆ ಸಂಬಂಧಿಸಿದ ಗೆಳೆಯರು ಕುಳಿತು ತಮ್ಮ ತಮ್ಮ ಧರ್ಮಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಬಗ್ಗೆ ಮಾತಾಡುತ್ತಿದ್ದಾಗ ಹುಟ್ಟಿದ ಕಲ್ಪನೆಯೇ ದಿ ಶಾದಿ ಬಜಾರ್. ತಮ್ಮದೇ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿರುವ ಗೆಳೆಯರು ಒಂದೇ ಸೂರಿನಡಿ ವಧು-ವರರ ಅನ್ವೇಷಣಾ ಕೇಂದ್ರದಿಂದ ಹಿಡಿದು ಹನಿಮೂನ್ ಪ್ಯಾಕೆಜ್ ವರೆಗೆ ಎಲ್ಲ ರೀತಿಯ ವ್ಯಾಪಾರಿಗಳನ್ನು ತರುವ ಉದ್ದೇಶದಿಂದ ದಿ ಶಾದಿ ಬಜಾರ್ ಮದುವೆ ಮೇಳವನ್ನು ದೇಶದಲ್ಲೆಡೆ ಪ್ರಾರಂಭಿಸಲು ಮುಂದಾದೆವು ಎಂದು ನಿರ್ದೇಶಕರಲ್ಲೊಬ್ಬರಾದ ಗೀತ್ ಟೆಕ್ಕೆವಾರಿ ಒನ್ಇಂಡಿಯಾಗೆ ತಿಳಿಸಿದ್ದಾರೆ.
ಎಲ್ಲ ಮಾಹಿತಿ ಒಂದೇ ಕಡೆಯಲ್ಲಿ : ದಿ ಶಾದಿ ಬಜಾರ್ ಮದುವೆ ಮೇಳದ ಅಂಗವಾಗಿ ವಿಶ್ವದಲ್ಲೇ ಪ್ರಪ್ರಥಮವಾಗಿ ಕೇವಲ ಮದುವೆಗೆ ಸಂಬಂಧಿಸಿದಂತೆ ಫೋನ್ ಡೈರೆಕ್ಟರಿ ಪ್ರಕಟಗೊಳ್ಳುತ್ತಿದೆ. ಹೊರ ವ್ಯಾಪಾರಿಗಳು, ಉಚಿತ ಸಾಮೂಹಿಕ ವಿವಾಹಗಳನ್ನು ಮಾಡಿಸುವ ಸಂಘ ಸಂಸ್ಥೆಯವರು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ನಮೂದಿಸಬಹುದು. ಆಸಕ್ತರು ಜಾಹೀರಾತನ್ನೂ ನೀಡಬಹುದು. ಈ ಡೈರೆಕ್ಟರಿಯ ಸಹಾಯದಿಂದ ಜನ ಮನೆಯಲ್ಲೇ ಕುಳಿತು ಕೇವಲ ದೂರವಾಣಿ ಮೂಲಕ ತಮಗೆ ಬೇಕಾದ ಮದುವೆಗೆ ಸಂಬಂಧಿಸಿದ ಸೇವಾ ಸೌಲಭ್ಯಗಳನ್ನು ಪಡೆಯಬಹುದು. ಈ ಡೈರೆಕ್ಟರಿಯನ್ನು ಮದುವೆ ಮೇಳಕ್ಕೆ ಬರುವ ಪ್ರತಿಯೊಬ್ಬರಿಗೂ ಉಚಿತವಾಗಿ ಕೊಡಲು ನಿರ್ಧರಿಸಲಾಗಿದೆ. ಈ ಡೈರೆಕ್ಟರಿಯನ್ನು ದಿ ಶಾದಿ ಬಜಾರ್ ವೆಬ್ ಸೈಟ್ ನಲ್ಲೂ ನೋಡಬಹುದು.

ರಾಗಿಣಿ ದ್ವಿವೇದಿ ರಾಯಭಾರಿ : ಮದುವೆ ತಯಾರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸ್ವರೂಪವಾಗಿ ಎಲ್ಲ ಜಾತಿ, ಧರ್ಮದವರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ, ಸಾಮಾಜಿಕ ಕಳಕಳಿಯಿಂದ ಹುಟ್ಟಿಕೊಂಡಿರುವ ದಿ ಶಾದಿ ಬಜಾರ್ ಮದುವೆ ಮೇಳದ ರಾಯಭಾರಿಯಾಗಿ ಕನ್ನಡ ಚಲನಚಿತ್ರ ನಟಿ ರಾಗಿಣಿ ದ್ವಿವೇದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಪ್ರಾರಂಭವಾಗುತ್ತಿರುವ ದಿ ಶಾದಿ ಬಜಾರ್ ಕರ್ನಾಟಕದ ಕೆಲವು ಆಯ್ದ ಪಟ್ಟಣಗಳಲ್ಲಿ ಹಾಗೂ ಭಾರತದ ಎಲ್ಲ ರಾಜ್ಯಗಳ ದೊಡ್ಡಪಟ್ಟಣಗಳಲ್ಲಿ ಆಯೋಜಿಸಲಿದೆ. [ಮಿಸ್ ಜಯಮಾಲಿನಿ ಆದ 'ಅಮ್ಮ' ರಾಗಿಣಿ]
ಯಾರು ಪಾಲ್ಗೊಳ್ಳಬಹುದು? : ಎಲ್ಲ ಧರ್ಮದ ವಧು-ವರರ ಅನ್ವೇಷಣಾ ಕೇಂದ್ರದವರು, ಮಾಹಿತಿ ಕೇಂದ್ರದವರು, ಮದುವೆ ವಸ್ತ್ರವಿನ್ಯಾಸಗಾರರು ಹಾಗು ಮಾರಾಟಗಾರರು, ಬ್ಯೂಟಿ ಪಾರ್ಲರ್ ಮತ್ತು ಮೆಹಂದಿಯವರು, ಆಭರಣ ಮಳಿಗೆಯವರು, ಮದುವೆ ಸಮಾರಂಭದ ಆಯೋಜಕರು, ಪುಷ್ಫಾಲಂಕಾರದವರು, ಆರ್ಕೆಸ್ಟ್ರಾದವರು, ಛಾಯಾಗ್ರಾಹಕರು, ಲಗ್ನಪತ್ರಿಕಾ ಮಾರಾಟಗಾರರು, ಹೋಟೆಲ್ ಉದ್ಧಿಮೆದಾರರು, ಹನಿಮೂನ್ ಪ್ಯಾಕೆಜ್ ನೀಡುವ ಪ್ರವಾಸೋದ್ಯಮ ಸಂಸ್ಥೆ ಹಾಗೂ ಇನ್ನಿತರೆ ಮದುವೆಗೆ ಸಂಬಂಧಿಸಿದ ಎಲ್ಲ ವ್ಯಾಪಾರಿಗಳು ಇದರಲ್ಲಿ ಪಾಲ್ಗೊಳ್ಳಬಹುದು.
ವ್ಯಾಪಾರಿ ಉದ್ದೇಶವಿಲ್ಲ : ಕೇವಲ ವ್ಯಾಪಾರಿ ಉದ್ದೇಶದಿಂದ ಜನ್ಮತಳೆದ ಮದುವೆಮೇಳ ಅಲ್ಲ. ಈ ಮೇಳದಿಂದ ಬರುವ ಲಾಭದಿಂದ ಎಲ್ಲ ಧರ್ಮಗಳನ್ನು ಒಳಗೊಂಡಂತೆ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಿದೆ. ಇದು ಕೇವಲ ಬಡವರಿಗಾಗಿ ಮಾತ್ರ ಆಗಿರದೆ ಎಲ್ಲ ವರ್ಗದವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಕೆಲ ಬಡಮಕ್ಕಳ ಶೈಷಣಿಕ ವೆಚ್ಚವನ್ನು ಭರಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡಿ ಅವರ ಕಾಲುಗಳ ಮೇಲೆ ನಿಲ್ಲುವಂತೆ ಮಾಡುವ ಉದ್ದೇಶವನ್ನೂ ಹೊಂದಿದೆ ಎಂದು ಗೀತಾ ಅವರು ಹೇಳುತ್ತಾರೆ.
ಮಾರಾಟ ಮಳಿಗೆ ಹಾಗೂ ಹೆಚ್ಚಿನ ವಿವರಗಳಿಗಾಗಿ :
#58, ಹೆಚ್.ಎಂ.ಟಿ ಲೇಔಟ್, ಆರ್.ಟಿ. ನಗರ ಪೋಲಿಸ್ ಸ್ಟೇಷನ್ ಹಿಂಭಾಗ,
ಆರ್.ಟಿ. ನಗರ, ಬೆಂಗಳೂರು - 560032
ದೂರವಾಣಿ : 080-40967868
ಮೊಬೈಲ್ : 7022597495, 7022597496
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications