ಸೆಪ್ಟೆಂಬರ್‌ನಲ್ಲಿ ರಾಜ್ಯಕ್ಕೆ ಯುರೋಪಿಯನ್ ತಜ್ಞರ ಭೇಟಿ
ಬೆಂಗಳೂರು, ಜೂ.25: ಯುರೋಪಿಯನ್ ಒಕ್ಕೂಟ ಅಲ್ಪಾನ್ಸೋ ಮಾವು ಸೇರಿದಂತೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಿರುವ ನಿಷೇಧ ಪುನರ್ ಪರೀಶಿಲನೆಗಾಗಿ ಯುರೋಪ್ ರಾಷ್ಟ್ರಗಳ ತಜ್ಞರ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತೋಟಗಾರಿಕಾ ಹಾಗೂ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ರಾಮಚಂದ್ರ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಯುರೋಪಿಯನ್ ತಜ್ಞರ ಸಮಿತಿ ಸೆಪ್ಟೆಂಬರ್ 2 ರಿಂದ 12ವರೆಗೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ರಾಜ್ಯದ ವಿವಿಧ ತಾಲೂಕಿನಲ್ಲಿರುವ ರೈತರನ್ನು ಸಂಪರ್ಕಿಸಿ ಮಾವಿನಹಣ್ಣು ವೀಳ್ಯದೆಲೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿಸಿದರು.[ಭಾರತದ ಮಾವಿನ ಹಣ್ಣಿಗೆ ಯುರೋಪಿನಲ್ಲಿ ನಿಷೇಧ]

ಯುರೋಪ್ ರಾಷ್ಟ್ರಗಳು ಮಾವು ಹಾಗೂ ವೀಳ್ಯದೆಲೆ ರಫ್ತುಗೆ ನಿಷೇಧ ಹೇರಿದ್ದರೂ ಯಾವುದೇ ಪರಿಣಾಮ ಬೀರಿಲ್ಲ. ಶೇ.1ರಷ್ಟು ಅದಾಯ ಕಡಿಮೆಯಾಗಿದೆ ಎಂದು ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು.[ಭಾರತದ ಮೆಣಸಿನಕಾಯಿಗೆ ಸೌದಿಯಲ್ಲಿ ನಿಷೇಧ]











Click it and Unblock the Notifications