ಸಿಲಿಕಾನ್ ಸಿಟಿಯಲ್ಲಿ 'ನೈಟಿ ಕಳ್ಳ': ಈತನ ಟಾರ್ಗೆಟ್ ಚಿನ್ನ, ಹಣ ಅಲ್ಲ.. ಮತ್ತೇನು?
ಬೆಂಗಳೂರು, ಫೆಬ್ರವರಿ 21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ, ಮೊಬೈಲ್ ಕಳ್ಳತನ, ಚಿನ್ನಾಭರಣ ಕಳ್ಳತನ, ಮನೆಗಳ್ಳತನ, ನಗದು ಕಳ್ಳತನ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇತ್ತೀಚಿಗೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ರೀತಿಯ ಕಳ್ಳತನವೂ ನಡೆಯುತ್ತದೆಯೇ..? ಈ ರೀತಿ ಕಳ್ಳರು ಇರುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ.
ಬೆಂಗಳೂರಿನಲ್ಲಿ ವಿಚಿತ್ರ ಕಳ್ಳನೊಬ್ಬನ ಕೈಚಳಕ ಬೆಳಕಿಗೆ ಬಂದಿದ್ದು, ಈತ ನಗದು, ಚಿನ್ನಾಭರಣ ಯಾವುದನ್ನೂ ಕದಿಯದೇ ಬರೀ ಶೂಗಳನ್ನಷ್ಟೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾನೆ. ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ದುಬಾರಿ ಶೂ ಹಾಗೂ ಚಪ್ಪಲಿಗಳನ್ನು ಬಿಡುವ ಮುನ್ನ ಎಚ್ಚರ ವಹಿಸಬೇಕಾಗಿದೆ. ಯಾಕೆಂದರೆ ನಗರದಲ್ಲಿ ಇದೀಗ ಶೂ ಕಳ್ಳನೊಬ್ಬ ಸಕ್ರಿಯನಾಗಿದ್ದು, ಕಂಡ ಕಂಡ ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಶೂ ಕಳ್ಳತನ ಮಾಡುತ್ತಿದ್ದಾನೆ.

ಈ ಶೂ ಕಳ್ಳನ ಕಳ್ಳತನದ ಪರಿಯೇ ವಿಚಿತ್ರವಾಗಿದೆ. ರಾತ್ರಿ ವೇಳೆ ಮನೆಗೆ ನುಗ್ಗುವ ಈ ಕಳ್ಳ ಮಹಿಳೆಯರಂತೆ ಕಾಣಿಸಲು ನೈಟಿ ಧರಿಸಿ ಬರುತ್ತಾನೆ. ಅದೇ ನೈಟಿಯಲ್ಲಿ ಮುಖ ಮುಚ್ಚಿಕೊಂಡು ಬರುವ ಈ ಖತರ್ನಾಕ್ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಅಲ್ಲಿರುವ ಶೂ ಹಾಗೂ ಚಪ್ಪಲಿಗಳನ್ನು ಕದ್ದು ಪರಾರಿಯಾಗುತ್ತಿದ್ದಾನೆ. ನೈಟಿ ಕಳ್ಳ ಕಳ್ಳತನ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಅನಿಲ್ ಕುಮಾರ್ ಎನ್ನುವವರು ಎಕ್ಸ್ನಲ್ಲಿ ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್ ಮಾಡಿ ವಿಚಿತ್ರ ಕಳ್ಳರಿದ್ದಾರೆ ಎಚ್ಚರವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ಗುರುತು ಸಿಗಬಾರದು ಎಂದು ಮಹಿಳೆಯರಂತೆ ನೈಟಿ ಧರಿಸಿ ಕಳ್ಳತನಕ್ಕೆ ಇಳಿಯುವ ಖತರ್ನಾಕ್ ಕಳ್ಳ, ಬೆಂಗಳೂರಿನ ಅಪಾರ್ಟ್ಮೆಂಟ್ಗೆ ನುಗ್ಗಿ ಶೂ ಕದಿಯುತ್ತಾನೆ. ಬೆಳೆಬಾಳುವ ಶೂಗಳನ್ನು ಕದ್ದು ಕಾಂಪೌಂಡ್ ಹಾರಿ ಕಳ್ಳ ಪರಾರಿಯಾಗುವ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ.












Click it and Unblock the Notifications