ಮಗನಿಗೆ ಬೈದಿದ್ದಕ್ಕೆ ಚಾಕುವಿನಿಂದ ಯುವಕನನ್ನು ಇರಿದ ತಂದೆ
ಬೆಂಗಳೂರು, ಫೆಬ್ರವರಿ 13: ಇತ್ತೀಚಿನ ದಿನಗಳಲ್ಲಿ ಯಾವ ವಿಚಾರವನ್ನೂ ಸಮಾಧಾನದಿಂದ ಕೇಳುವ ತಾಳ್ಮೆಯೇ ಹೊರಟು ಹೋಗಿದೆ.
ಮನೆಯ ತಾರಸಿ ಮೇಲೆ ಬಂದು ಆಟವಾಡುತ್ತಿದ್ದ ಬಾಲಕನಿಗೆ ಆಟವಾಡಬೇಡ ಇಲ್ಲಿ ಎಂದು ಹೇಳಿದ ಕಾರಣಕ್ಕೆ ಮಗುವಿನ ತಂದೆ ಯುವಕನಿಗೆ ಚೂರಿಯಿಂದ ತಿವಿದಿರುವ ಘಟನೆ ಬೆಂಗಳೂರಿನ ಕುಪ್ಪಸ್ವಾಮಿ ಬಡಾವಣೆಯಲ್ಲಿ ನಡೆದಿದೆ.
ಪಾಷಾ ಹಲ್ಲೆಗೊಳಗಾದವರು, ಅವರು ತೀವ್ರವಾಗಿ ಗಾಯಗೊಂಡಿದ್ದು,ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀವಕ್ಕೇನು ಅಪಾಯವಿಲ್ಲ ಆದರೆ ತೀವ್ರ ನಿಗಾದಲ್ಲಿ ಇಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಬಾಲಕನ ತಂದೆ ಅಬ್ದುಲ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಪಾಷಾ ಮನೆಯಲ್ಲಿ ಮಲಗಿದ್ದಾಗ ಬಾಲಕ ಮನೆಯ ತಾರಸಿಗೆ ಬಂದು ಆಟವಾಡುತ್ತಿದ್ದ ಹಾಗಾಗಿ ಇಲ್ಲಿ ಆಟವಾಡಬೇಡ ಎಂದು ಗದರಿಸಿದ್ದರು.
ಬಳಿಕ ಬಾಲಕ ಅಳುತ್ತಾ ಮನೆಗೆ ಹೋಗಿದ್ದು ತಂದೆಗೆ ಈ ವಿಷಯ ತಿಳಿಸಿದ್ದಾನೆ ಇದನ್ನು ಕೇಳಿದ ಕೂಡಲೇ ಪಾಷಾ ಮನೆಗೆ ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಒಮ್ಮೆ ನೆರೆಮನೆಯವರೆಲ್ಲ ಸೇರಿ ಜಗಳವನ್ನು ನಿಲ್ಲಿಸಿದ್ದರು ಆದರೆ ಅಬ್ದುಲ್ ಈ ವಿಚಾರವನ್ನು ಅಲ್ಲಿಗೆ ಬಿಡದೆ ಮಾತು ಮುಂದುವರೆಸಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ.ಬಳಿಕ ಚಾಕುವಿನಿಂದ ಆತನಿಗೆ ತಿವಿದು ಘಾಸಿಗೊಳಿಸಿದ್ದಾನೆ.











Click it and Unblock the Notifications