ಮಗಳ ಪ್ರಿಯಕರನ ರುಂಡ ಚೆಂಡಾಡಿ ಶರಣಾದ ಅಪ್ಪ
ಬೆಂಗಳೂರು, ಆ.7: ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಮಗಳ ತಂದೆಯೇ ಬರ್ಬರವಾಗಿ ಹತ್ಯೆಮಾಡಿ ಮೃತದೇಹವನ್ನು ಪೊಲೀಸ್ ಠಾಣೆಗೆ ತಂದು ಶರಣಾದ ಘಟನೆ ಆ.7 ಗುರುವಾರ ನಡೆದಿದೆ.
ಯುವಕನನ್ನು ಕೊಲೆ ಮಾಡಿ ಶರಣಾದ ರಿಯಾಜ್ ಖಾನ್‌ನನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.[ಅಮ್ಮನ ಮೇಲೆ ಕಣ್ಣು ಹಾಕಿದ ಚಿಕ್ಕಪ್ಪನ ರುಂಡ ಕಚಕ್!

ಘಟನೆ ಹಿನ್ನಲೆ: ಕೆ.ಆರ್‌ಪುರಂ ಶಾಲೆಯೊಂದರಲ್ಲಿ ಏಳನೇ ತರಗತಿ ಓದುತ್ತಿದ್ದ ರಿಯಾಜ್ ಖಾನ್ ಮಗಳು, 25 ವರ್ಷ ವಯಸ್ಸಿನ ಲಾಲ್ ಬಾಗ್ ನಿವಾಸಿ ಸಾದಿಕ್ ಪಾಷಾ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗುತ್ತಿದೆ. ಈ ವಿಚಾರ ತಿಳಿದು ರಿಯಾಜ್ ಖಾನ್ ಮಗಳಿಗೆ ಆತನನ್ನು ಪ್ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದಾನೆ. ಬುದ್ಧಿ ಹೇಳಿದರೂ ಮಗಳು ಆತನನ್ನು ಪ್ರೀತಿಸುತ್ತಿರುವುದು ತಂದೆಗೆ ಗೊತ್ತಾಗಿದೆ.
ಈ ಮಧ್ಯೆ ಜು.30ರಂದು ಮಗಳು ಮನೆಯಿಂದ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಜು.2 ರಂದು ಮಗಳು ನಾಪತ್ತೆಯಾಗಿದ್ದ ಬಗ್ಗೆ ರಿಯಾಜ್ ರಿಯಾಜ್ ಖಾನ್ ಕೆ.ಆರ್‌ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ಎರಡು ದಿನಗಳ ಹಿಂದೆ ಸಾದಿಕ್ ಪೋಷಕರು ರಿಯಾಜ್‌ಗೆ ಕರೆ ಮಾಡಿ ಮಗಳನ್ನು ಮಗನಿಗೆ ಮದುವೆ ಮಾಡಿಕೊಡುವಂತೆ ಹೇಳಿದ್ದಾರೆ. ಈ ಸಂಬಂಧವಾಗಿ ಆ.6 ಬುಧವಾರ ರಾತ್ರಿ ರಿಯಾಜ್ ಜೊತೆಗೆ ಸಾದಿಕ್ ಪೋಷಕರು ತಮ್ಮ ಲಾಲ್‌ಬಾಗ್‌ನ ಸಿದ್ದಾಪುರ ನಿವಾಸದಲ್ಲಿ ಸಂಧಾನ ನಡೆಸಿದ್ದರು. ಸಂಧಾನ ನಡೆದರೂ ಸಾದಿಕ್ ಮೇಲೆ ಆಕ್ರೋಶಗೊಂಡಿದ್ದ ರಿಯಾಜ್ ಗುರುವಾರ ಬನ್ನೇರುಘಟ್ಟ ರಸ್ತೆಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಬಳಿಕ ರಿಯಾಜ್ ಶವವನ್ನು ಗೋಣಿ ಚೀಲದಲ್ಲಿ ತುಂಬಿಸಿ ಆಕ್ಟಿವಾ ಬೈಕಿನಲ್ಲಿ ಕೆಆರ್ ಪುರಂ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ.
ಸಾದಿಕ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಿಯಾಜ್ ಖಾನ್‌ನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
.












Click it and Unblock the Notifications