ಪ್ರತಿದಿನ ಮುಂಜಾನೆ ಲವಂಗ ಜಗಿಯುವುದರಿಂದ ಆರೋಗ್ಯಕ್ಕಿದೆ ಹಲವು ಅದ್ಭುತ ಪ್ರಯೋಜನ!ಸಂಶೋಧನೆಯಿಂದಲೂ ಸಾಬೀತಾದ ಸತ್ಯ

ಪ್ರತಿದಿನ ಬೆಳಗ್ಗೆ ಎರಡರಿಂದ ಮೂರು ಲವಂಗಗಳನ್ನು ಜಗಿಯುವುದು ಇತ್ತೀಚೆಗೆ ಅತ್ಯಂತ ಜನಪ್ರಿಯ ಆರೋಗ್ಯ ಅಭ್ಯಾಸವಾಗಿ ಮಾರ್ಪಟ್ಟಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ ಎಂದು ಅನೇಕರು ಹೇಳುತ್ತಾರೆ.

ಲವಂಗವೇನು ಪವಾಡ ಮಾಡುವ ಔಷಧಿಯಲ್ಲದಿದ್ದರೂ, ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಪ್ರಬಲ ಸಸ್ಯ ಸಂಯುಕ್ತಗಳನ್ನು ಹೊಂದಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ.

Chewing Cloves

ಇದರ ಹಿಂದಿನ ರಹಸ್ಯವೇನು?:

ಲವಂಗದ ಈ ಅದ್ಭುತ ಗುಣಗಳ ಹಿಂದಿನ ರಹಸ್ಯವೆಂದರೆ ಅದರಲ್ಲಿರುವ 'ಯುಜೆನಾಲ್' (Eugenol) ಎಂಬ ಪ್ರಾಥಮಿಕ ಸಕ್ರಿಯ ಸಂಯುಕ್ತ. ಯುಜೆನಾಲ್ ತನ್ನ ಆಂಟಿಆಕ್ಸಿಡೆಂಟ್, ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನೋವು ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಗುಣಗಳೇ ಲವಂಗವನ್ನು ನಮ್ಮ ಅಡುಗೆಮನೆಯ ಅತ್ಯಂತ ಪೌಷ್ಟಿಕಾಂಶ-ಭರಿತ ಮಸಾಲೆಗಳಲ್ಲಿ ಒಂದನ್ನಾಗಿ ಮಾಡಿರುವುದು.

ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ಸೇವಿಸಿದರೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳಾಗುವುದು!
ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ಸೇವಿಸಿದರೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳಾಗುವುದು!

ಪ್ರತಿದಿನ ಮುಂಜಾನೆ ಲವಂಗವನ್ನು ಜಗಿಯುವುದರಿಂದ ಆಗುವ ಲಾಭಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ?:

1. ಬಾಯಿಯ ಆರೋಗ್ಯ ಮತ್ತು ದುರ್ವಾಸನೆ ನಿವಾರಣೆ:

ಲವಂಗವನ್ನು ಜಗಿಯುವುದರಿಂದ ಆಗುವ ಪ್ರಮುಖ ಲಾಭವೆಂದರೆ ಬಾಯಿಯ ದುರ್ವಾಸನೆ ದೂರವಾಗುವುದು. ಯುಜೆನಾಲ್ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಬಾಯಿಯ ದುರ್ವಾಸನೆ ಮತ್ತು ವಸಡುಗಳ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಹಲ್ಲುನೋವು ಮತ್ತು ಬಾಯಿಯ ಸಮಸ್ಯೆಗಳಿಗೆ ಲವಂಗದ ಎಣ್ಣೆಯನ್ನು ಸಾಂಪ್ರದಾಯಿಕವಾಗಿ ಬಳಸಲು ಇದೇ ಪ್ರಮುಖ ಕಾರಣ. ಆದರೆ ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಅದೇನೆಂದರೆ ಲವಂಗ ಜಗಿಯುವುದು ನಿತ್ಯದ ಬ್ರಶಿಂಗ್ ಮತ್ತು ಡೆಂಟಲ್‌ ಫ್ಲಾಸಿಂಗ್‌ಗೆ ಪರ್ಯಾಯವಲ್ಲ

2. ಜೀರ್ಣಕ್ರಿಯೆಯ ಸುಧಾರಣೆ:

ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಶತಮಾನಗಳಿಂದಲೂ ಸಾಂಪ್ರದಾಯಿಕ ವೈದ್ಯಕೀಯದಲ್ಲಿ ಲವಂಗವನ್ನು ಬಳಸಲಾಗುತ್ತಿದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸಿ, ಆಹಾರವು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ. ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಇದು ರಿಲೀಫ್ ನೀಡುತ್ತದೆ. ಲವಂಗದ ಸೇವನೆಯು ಹೊಟ್ಟೆಯ ಹುಣ್ಣುಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದು ಪ್ರಾಣಿಗಳ ಮೇಲೆ ನಡೆಸಿರುವ ಅಧ್ಯಯನಗಳು ಸೂಚಿಸಿವೆ.

ಮೊಸರಿನ ಮೇಲೆ ತೇಲುವ ನೀರನ್ನು ಚೆಲ್ಲಬೇಡಿ: ಇದರಲ್ಲೇ ಅಡಗಿರುವುದು ಆರೋಗ್ಯದ ಗುಟ್ಟು!
ಮೊಸರಿನ ಮೇಲೆ ತೇಲುವ ನೀರನ್ನು ಚೆಲ್ಲಬೇಡಿ: ಇದರಲ್ಲೇ ಅಡಗಿರುವುದು ಆರೋಗ್ಯದ ಗುಟ್ಟು!

3. ಅತ್ಯುತ್ತಮ ಆಂಟಿಆಕ್ಸಿಡೆಂಟ್‌ಗಳ ಆಗರ:

ಅತ್ಯಧಿಕ ಆಂಟಿಆಕ್ಸಿಡೆಂಟ್ ಹೊಂದಿರುವ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡಾ ಸೇರಿದೆ. ಇದು ವಯಸ್ಸಾಗುವಿಕೆ, ಉರಿಯೂತ, ಹೃದ್ರೋಗ ಮತ್ತು ಮಧುಮೇಹದಂತಹ ದೀರ್ಘಕಾಲೀನ ಕಾಯಿಲೆಗಳಿಗೆ ಕಾರಣವಾಗುವ ಹಾನಿಕಾರಕ 'ಫ್ರೀ ರಾಡಿಕಲ್'ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

4. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ:

ಲವಂಗದಲ್ಲಿರುವ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ದಿಢೀರ್ ಏರಿಕೆಯಾಗುವುದನ್ನು ತಡೆಯುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಆದರೆ, ಮಧುಮೇಹ ಹೊಂದಿರುವವರು ವೈದ್ಯರನ್ನು ಸಂಪರ್ಕಿಸಿದ ನಂತರವೇ ಇದನ್ನು ನಿಯಮಿತವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಮಧುಮೇಹದ ಮಾತ್ರೆಗಳನ್ನು ಬಿಟ್ಟು ಲವಂಗವನ್ನು ನೆಚ್ಚಿಕೊಳ್ಳುವುದು ಸರಿಯಲ್ಲ.

5. ಉರಿಯೂತದ ವಿರುದ್ಧ ಹೋರಾಡಲು ಸಹಕಾರಿ:

ದೀರ್ಘಕಾಲದ ಉರಿಯೂತವು ಸಂಧಿವಾತ, ಹೃದ್ರೋಗ ಹಾಗೂ ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಯುಜೆನಾಲ್ ಸಂಯುಕ್ತವು ಉರಿಯೂತದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಪ್ರಯೋಗಾಲಯದ ಅಧ್ಯಯನಗಳು ಸಾಬೀತುಪಡಿಸಿವೆ.

ಒಟ್ಟಾರೆಯಾಗಿ, ಪ್ರತಿದಿನ ಮುಂಜಾನೆ ಒಂದೆರಡು ಲವಂಗವನ್ನು ಜಗಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ, ಲವಂಗವನ್ನು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಿ ನೋಡಬೇಕೇ ಹೊರತು, ವೈದ್ಯಕೀಯ ಚಿಕಿತ್ಸೆ ಅಥವಾ ಸಮತೋಲಿತ ಆಹಾರಕ್ಕೆ ಪರ್ಯಾಯವಾಗಿ ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+