ಅಮ್ಮನ ಮೇಲೆ ಕಣ್ಣು ಹಾಕಿದ ಚಿಕ್ಕಪ್ಪನ ರುಂಡ ಕಚಕ್!

ಬುಧವಾರ ರಾತ್ರಿ ಕೋಲಾರ ಜಿಲ್ಲೆಯ ಅಣ್ಣೇನಹಳ್ಳಿ ಬಳಿಯ ಕೊಂಡಸಂದ್ರದ ನೀಲಗಿರಿ ತೋಪಿನಲ್ಲಿ ಶೇಖರ್(30), ಚಿಕ್ಕಪ್ಪನಾದ ಗೋಂವಿಂದಪ್ಪನನ್ನು ಕೊಲೆ ಮಾಡಿದ್ದಾರೆ. ನಂತರ ರುಂಡವನ್ನು ಚೀಲದಲ್ಲಿ ಹಾಕಿಕೊಂಡು ಬಂದು ಪರಪ್ಪನ ಅಗ್ರಹಾರ ಪೊಲೀಸರಿಗೆ ಶರಣಾಗಿದ್ದಾನೆ.
ತನ್ನ ತಾಯಿಯನ್ನು ಮೃತ ಗೋವಿಂದಪ್ಪ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದ, ಆದ್ದರಿಂದ ಆತನನ್ನು ಕೊಲೆ ಮಾಡಿರುವುದಾಗಿ ಶೇಖರ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸರು ಆರೋಪಿ ಶೇಖರ್ ನನ್ನು ಕೋಲಾರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬೆಚ್ಚಿಬಿದ್ದ ಜೈಲಿನ ಅಧಿಕಾರಿಗಳು : ಆರೋಪಿ ಶೇಖರ್ ಕೊಲೆ ಮಾಡಿದ ನಂತರ ರುಂಡವನ್ನು ಕತ್ತರಿಸಿ ಚೀಲದಲ್ಲಿ ಹಾಕಿಕೊಂಡು ಬೆಂಗಳೂರಿಗೆ ಬರುವ ಲಾರಿ ಹತ್ತಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನ ಬಳಿ ಇಳಿದ ಶೇಖರ್ ಬಳಿ, ಲಾರಿ ಚಾಲಕ ಹಣ ಕೇಳಿದಾಗ ರುಂಡ ತೋರಿಸಿ ಅವನಿಗೆ ಹೆದರಿಸಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗೆ ನಾನು ಕೊಲೆ ಮಾಡಿದ್ದೇನೆ ನನ್ನನ್ನು ಬಂಧಿಸಿ ಎಂದು ಮನವಿ ಮಾಡಿದ್ದಾನೆ. ಆದರೆ. ಅಧಿಕಾರಿಗಳು ಬೈದು ಕಳಿಸಿದ್ದಾರೆ. ತಕ್ಷಣ ತನ್ನ ಬಳಿಯಿದ್ದ ಚೀಲದಿಂದ ಕತ್ತರಿಸಿದ ರುಂಡವನ್ನು ಪೊಲೀಸರಿಗೆ ನೀಡಿ. ಕೊಲೆ ಮಾಡಿರುವುದು ನಿಜ, ಬಂಧಿಸಿ ಎಂದು ಹೇಳಿದ್ದಾನೆ.
ರಕ್ತಸಿಕ್ತ ರುಂಡವನ್ನು ಕಂಡು ಬೆಚ್ಚಿಬಿದ್ದ ಜೈಲಿನ ಅಧಿಕಾರಿಗಳು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರುಂಡವನ್ನು ನೋಡಿ ಆರೋಪಿ ಶೇಖರ್ ನನ್ನು ಬಂಧಿಸಿದ್ದಾರೆ.
ಕೋಲಾರದಲ್ಲಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕೋಲಾರ ಪೊಲೀಸರಿಗೆ ಮಾಹಿತಿ ತಿಳಿಸಿದ ಪರಪ್ಪನ ಅಗ್ರಹಾರ ಠಾಣೆಯ ಅಧಿಕಾರಿಗಳು ಆರೋಪಿಯನ್ನು ಹಸ್ತಾಂತರಿಸಿದ್ದಾರೆ.












Click it and Unblock the Notifications