ಫೇಸ್‌ಬುಕ್ ಗೆಳತಿಗಾಗಿ 2 ಸಾವಿರ ಕಿ.ಮೀ ಹೋದ ಬೆಂಗಳೂರು ಯುವಕ: ಆಗಿದ್ದೇನು?

ಬೆಂಗಳೂರು, ಜನವರಿ 13:ಫೇಸ್‌ಬುಕ್ ಗೆಳತಿಗಾಗಿ ಬೆಂಗಳೂರು ಯುವಕ 2 ಸಾವಿರ ಕಿ.ಮೀ ಹೋಗಿದ್ದಾನೆ.ಹಾಗಾದರೆ ಈ ಫೇಸ್‌ಬುಕ್ ಲವ್ ಸ್ಟೋರಿ ಎಂಥದ್ದು ಎಂದು ನೋಡೋಣ..

ಬೆಂಗಳೂರು ಯುವಕನ ಹೆಸರು ಸಲ್ಮಾನ್, ಈತನಿಗೆ ಸುಮಾರು 25 ವರ್ಷವಿರಬಹುದು, ಆತನಿಗೆ 21 ವರ್ಷದ ಯುವತಿಯ ಜತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು.

ಆತ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ, ಯುವತಿ ಉತ್ತರ ಪ್ರದೇಶ ಡಿಯೋರಿಯಾ ಜಿಲ್ಲೆಯವಳು.ಮೊದಲ ಫ್ರೆಂಡ್ ರಿಕ್ವೆಸ್ಟ್‌ನಿಂದ ಆರಂಭವಾಗಿದ್ದು, ಆಕೆ ಮನೆಯನ್ನು ಹುಡುಕಿಕೊಂಡು ಹೋಗುವಂತೆ ಮಾಡಿತ್ತು. ಫೇಸ್‌ಬುಕ್ ಚಾಟ್‌ನಲ್ಲಿ ಸಲುಗೆಯೂ ಬೆಳೆದಿತ್ತು.

Bengaluru Man Long Journey To Meet Up Girl He Met Online, Parents File Case

ಆಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಲು ಶುರು ಮಾಡಿದ್ದ ಸಲ್ಮಾನ್, ಆಕೆಯು ಕೂಡ ತನ್ನಷ್ಟೇ ಪ್ರೀತಿ ಮಾಡುತ್ತಿದ್ದಾಳೆ ಎಂದು ನಂಬಿದ್ದ. ದೂರದಲ್ಲಿರುವ ಹುಡುಗ ಹೇಗೂ ಇಲ್ಲಂತೂ ಬರುವುದಿಲ್ಲ ಎಂದು ಆಕೆಯೂ ನಂಬಿದ್ದಳು.

ಆಕೆಯ ಹುಟ್ಟುಹಬ್ಬ ಹತ್ತಿರ ಬಂದಿತ್ತು, ಆಕೆಯ ಮನೆಗೆ ಹೋಗುವ ನಿರ್ಧಾರವನ್ನು ಆತ ಮಾಡಿದ್ದ, ಡ್ರೆಸ್, ಚಾಕೊಲೇಟ್, ಗಿಫ್ಟ್‌ ಎಲ್ಲವನ್ನೂ ಹಿಡಿದು ದೂರದ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ. ಅಲ್ಲಿಂದ ಆಕೆಯ ಮನೆಗೂ ಹೋಗಿದ್ದ, ಅಂದರೆ ಆಕೆ ಮನೆಯ ವಿಳಾಸವನ್ನೂ ನೀಡಿದ್ದಳು ಅದಂಗಾಯ್ತು.

ಹುಡುಗಿ ಮನೆಗೆ ಬಂದು ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾನೆ, ಆದರೆ ಮನೆಯವರು ಆತನ ಮೇಲೆ ಕೈ ಮಾಡಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆದರೆ ಎಲ್ಲಿಯೂ ಹುಡುಗಿ ಕಾಣಲೇ ಇಲ್ಲ.

Recommended Video

      Munirathna ಮತ್ತು Nagesh ಇಬ್ಬರ ನಡುವೆ ಜಟಾಪಟಿ!! | Oneindia Kannada

      ಎರಡು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಕಳೆದು, ಜಾಮೀನಿನ ಮೇಲೆ ಬಿಡುಗಡೆ ಪ್ರೇಯಸಿ ಮಾತ್ರ ಎಲ್ಲಿಯೂ ಕಾಣಲಿಲ್ಲ ಎಂಬುದೇ ಆತನಿಗೆ ನೋವಿನ ವಿಷಯವಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+