BMTC Accident : ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಬೆಂಗಳೂರು, ಜನವರಿ 18: ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಬಿಎಂಟಿಸಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ಯಿಯೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ವಿಜಯನಗರದ ನಿವಾಸಿಯಾದ ಕುಲದೀಪ್ ಬಗರೇಚಾ ಎಂಬುವವರು ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಕುಲದೀಪ್ ಬಗರೇಚಾ ಅವರು ನಿಧನರಾಗಿದ್ದಾರೆ. ಈ ಸಂಬಂಧ ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಶಿಲ್ಪಾ ಎಂಬ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದರು, ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಾ ಅದೇ ಅಕ್ಟೋಬರ್ 23ರಂದು ನಿಧನರಾಗಿದ್ದರು.
ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಶಿಲ್ಪಾ ಎಂಬ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದರು, ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಶ್ರೀ ಅದೇ ಅಕ್ಟೋಬರ್ 23ರಂದು ನಿಧನರಾಗಿದ್ದರು.
ಮೊದಲ ವರ್ಷದ ಎಂಎಸ್ಸಿ ಗಣಿತಶಾಸ್ತ್ರ ಓದುತ್ತಿದ್ದ ವಿದ್ಯಾರ್ಥಿನಿ ಶಿಲ್ಪಶ್ರೀ ಮಧ್ಯದ ಭಾಗಿಲಿನಿಂದ ಬಸ್ ಹತ್ತಲು ಮುಂದಾಗಿದ್ದರು. ಆ ವೇಳೆ ಬಸ್ ಏಕಾಏಕಿ ಮುಂದೆ ಚಲಿಸಿದ್ದರಿಂದ ವಿದ್ಯಾರ್ಥಿನಿ ಆಯತಪ್ಪಿ ರಸ್ತೆಗೆ ಬಿದ್ದಿದ್ದರು, ಆಗ ಹಠಾತ್ತನೆ ಬಿಎಂಟಿಸಿ ಬಸ್ ಎಡಭಾಗದಿಂದ ಹಿಂಬದಿಯ ಚಕ್ರ ಶ್ರೀಲ್ಪಶ್ರಿಯ ಸೊಂಟದ ಎಡ ತೊಡೆಯ ಮೇಲೆ ಹರಿದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶ್ರೀಲ್ಪಶ್ರಿ ಅವರನ್ನು ಪೋರ್ಟೀಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತರಾಗಿದ್ದರು.
ಕಳೆದ ನವೆಂಬರ್‌ನಲ್ಲಿ ಮಾಗಡಿ ರೋಡ್ ನೈಸ್ ರಸ್ತೆ ಜಂಕ್ಷನ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮಂಜುನಾಥ್ ಹಾಗೂ ಶಿವರಾಜ್ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದರು. ಅವರು ರಾಮನಗರ ಜಿಲ್ಲೆಯ ಗೊಲ್ಲರಹಟ್ಟಿಯ ಇಂದಿರಾ ಕಲೋನಿಯ ನಿವಾಸಿಗಳಾಗಿದ್ದರು. ಅದೇ ನವೆಂಬರ್‌ನಲ್ಲಿ ಕಾಮಾಕ್ಷಿಪಾಳ್ಯದ ಬಳಿ ಯೋಧರೊಬ್ಬರಿಗೆ ಡಿಕ್ಕಿಯಾಗಿ ಅವರು ನಿಧನರಾಗಿದ್ದರು.












Click it and Unblock the Notifications