• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉರುಳುತ್ತಿದ್ದ ಸರ್ಕಾರಿ ಶಾಲೆಯನ್ನು ಉಳಿಸಿದ ಅಪಾರ್ಟ್‌ಮೆಂಟ್ ನಿವಾಸಿಗಳು

By Praveen Sajjan
|

ಬೆಂಗಳೂರು, ಫೆಬ್ರವರಿ 20: ಬಣ್ಣ ಮಾಸಿದ ಗೋಡೆಗಳು, ಬೆಳಕಿಲ್ಲದ ಕೊಠಡಿಗಳು ಪುಸ್ತಕ, ಪೆನ್ನು, ಪಾದರಕ್ಷೆಗಳಿಲ್ಲದ ವಿದ್ಯಾರ್ಥಿಗಳು ಇದ್ಯಾವುದೋ ಹಳ್ಳಿ ಶಾಲೆಯ ಕತೆ ಹೇಳುತ್ತಿಲ್ಲ ಬೆಂಗಳೂರಿನಲ್ಲಿರುವ ಸರ್ಕಾರಿ ಶಾಲೆಯ ಕತೆ ಇದು.

ಸೋರುವ ಮಾಳಿಗೆ, ಬಣ್ಣ ಮಾಸಿದ ಗೋಡೆ ಹಾಗಿರಲಿ ಸ್ವಚ್ಛತೆಯೂ ಇಲ್ಲದ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದರು.ಇದನ್ನು ನೋಡಿ ಮಹಾವೀರ ಒಬೆರೊನ ನಿವಾಸಿಗಳು ಸ್ವಂತ ಖರ್ಚಿನಲ್ಲಿಯೇ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಬೆಳಕಾದ ವಿರೂಪಾಕ್ಷಸ್ವಾಮಿ

ಮಂಜುನಾಥ ರಾವ್ ಎಂಬ ಹಿರಿಯರ ಮಾರ್ಗದರ್ಶನದಲ್ಲಿ ಅಪಾರ್ಟಮೆಂಟಿನ ಎಲ್ಲ ನಿವಾಸಿಗಳು ಶಾಲೆಯ ಅಭಿವೃದ್ಧಿಗೆ ಯೋಚಿಸಿ ಶಾಲೆಯ ಮುಖ್ಯೋಪಾದ್ಯಾಯ ಶಿವಕುಮಾರ ಅವರನ್ನು ಭೇಟಿಯಾಗಿ ನಮ್ಮ ಯೋಚನೆಯನ್ನು ತಿಳಿಸಿದರು.ಶಿವಕುಮಾರವರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಒಪ್ಪಿ ತಮ್ಮ ಸಹಕಾರದ ಭರವಸೆ ನೀಡಿದರು.

ಇದಾದ ನಂತರ ಒಬೆರೊನ್ ನಿವಾಸಿಗಳೆಲ್ಲರೂ ಒಬೆರೊನ್ CSR (ಕಮ್ಯೂನಿಟಿ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ) ಎಂಬ ತಂಡ ರಚಿಸಿ ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಶಾಲೆಯ ಅವಶ್ಯಕತೆಗಳನ್ನೂ ಸಿಬ್ಬಂದಿಯೊಂದಿಗೆ ಚರ್ಚಿಸಿ ಯೋಜನೆಯನ್ನು ಸಿದ್ಧಪಡಿಸಿದರು.

ಚಾಮರಾಜನಗರದ ಹೊನ್ನೇಗೌಡನಹುಂಡಿ ಶಾಲೆಗೆ ಇಬ್ಬರೇ ವಿದ್ಯಾರ್ಥಿಗಳು..!

ಒಬೆರೊನ್ ನಿವಾಸಿ ಹಾಗು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮುನಿರಾಜು ಅವರು ಶಾಲೆಗೆ ಬಣ್ಣ ಬಳಿಸುವದಾಗಿ ಭರವಸೆ ನೀಡಿ ಸುಮಾರು 25 ಸಾವಿರ ರೂ ನೀಡಿ ತಮ್ಮ ಕಳಕಳಿಯನ್ನು ತೋರಿಸಿದರು.

ಸಂಗ್ರಹವಾದ ಎಪ್ಪತ್ತೈದು ಸಾವಿರ ರೂಪಾಯಿಗಳಿಂದ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿದ್ದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿ ಕಂಪ್ಯೂಟರ್, ಬೆಳಕಿಗೆ LED ಬಲ್ಬ್‌, ನೋಟ್‌ಬುಕ್ ಗಳು , ಪೆನ್ನು , ಪೆನ್ಸಿಲ್ ಪೌಚ್‌ ಗಳು , ಕುಳಿತುಕೊಳ್ಳಲು ಚಾಪೆಗಳು ,ಕನ್ನಡಿ, ಕರ್ಟನ್ ವ್ಯವಸ್ಥೆ ಮಾಡಿದ್ದಾರೆ.

ಶಾಲೆ ಬಿಟ್ಟವರು ಬೆಂಗಳೂರು ದಕ್ಷಿಣದಲ್ಲೇ ಹೆಚ್ಚು

ಶಾಲೆಯ ಮೂಲ ಸೌಕರ್ಯಗಳ ವ್ಯವಸ್ಥೆ ಆದ ನಂತರ ನಾವು ಮಕ್ಕಳ ಶೈಕ್ಷಣಿಕದ ಕಡೆ ಗಮನ ಹರಿಸಿ. , ಅಪಾರ್ಟಮೆಂಟಿನ ನಿವಾಸಿ ಹಿರಿಯರಾದ ಮಣಿ ಅಜ್ಜಿ ಅವರಿಂದ ನೀತಿ ಪಾಠ, ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಫ್ರಾನ್ಸಿಸ್ ಅವರಿಂದ ಆಂಗ್ಲ ಭಾಷೆಯ ಪಾಠ , ಟೆಕ್ಕಿ ಲಕ್ಷ್ಮಣ ಅವರಿಂದ ಕಂಪ್ಯೂಟರ್ ಪಾಠ ಹಾಗು ಅಪಾರ್ಟ್‌ಮೆಂಟಿನ ಕೆಲವು ಮಹಿಳೆಯರಿಂದ ಚಿತ್ರಕಲೆ ಮತ್ತು ಸಂಗೀತ ಶಿಕ್ಷಣ ವನ್ನು ಕೊಡಲು ಆರಂಭಿಸಿದರು.

ಅಪಾರ್ಟಮೆಂಟಿನಲ್ಲಿ ನಡೆಯುವ ಸ್ವಾತಂತ್ರ ದಿನಾಚರಣೆ , ರಾಜ್ಯೋತ್ಸವ , ಗಣತಂತ್ರ ದಿನಾಚರಣೆ ಒಳಗೊಂಡು ಎಲ್ಲ ಸಮಾರಂಭಕ್ಕೆ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಗಳೇ ಅತಿಥಿ ಮತ್ತು ಮುಖ್ಯ ಅತಿಥಿಗಳಾಗಿರುತ್ತಾರೆ.

ಈ ಲೇಖನ ಬರೆಯಲು ಮುಖ್ಯ ಕಾರಣ ನಾವು ಮಾಡಿರುವ ಕೆಲಸ ತೋರಿಸಲು ಅಲ್ಲ ಬದಲಾಗಿ ಇದರಿಂದ ಸ್ಪೂರ್ತಿಗೊಂಡು ಬೇರೆಯವರು ತಮ್ಮ ತಮ್ಮ ನಿವಾಸದ ಹತ್ತಿರ ಇರುವ ಅಥವಾ ಊರಿನಲ್ಲಿರುವ ಶಾಲೆಗಳಿಗೆ ಕೈಲಾದಷ್ಟು ಸಹಾಯವನ್ನು ಮಾಡಲಿ.

ಅಪಾರ್ಟ್‌ಮೆಂಟಿನ ಈ ಎಲ್ಲ ಕಾರ್ಯ ನೋಡಿ ಸ್ಪೂರ್ತಿಗೊಂಡು ಬೇರೆಯವರು ಮೇಲಂತಸ್ತಿನಲ್ಲಿರುವ ಮಾಧ್ಯಮಿಕ ತರಗತಿಗೆ ಬಣ್ಣ ಹಚ್ಚಿಸಿ ನೆಲಕ್ಕೆ ಟೈಲ್ಸ್ ಹಾಕಿಸಿ ಕೊಟ್ಟಿದ್ದಾರೆ.

ಇನ್ನೊಬ್ಬ ಗೃಹಿಣಿ ಈ ಶಾಲೆಯ ಮಕ್ಕಳಿಗೆ ತಮ್ಮ ಮನೆಯಲ್ಲಿ ಪಾಠ ಮಾಡಲು ಆರಂಭಿಸಿದ್ದಾರೆ. ಕನ್ನಡ ಅಭಿಮಾನ ನಮ್ಮ ಶಾಲೆ ಎಂಬ ಪ್ರೀತಿ ಈ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಈ ಕಾರ್ಯ ಮಾಡಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After bad consition of Goverment school Mahaveer oberon residents made development. Now this school looks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more