ಕುಂಭಮೇಳ: ಮೂರನೇ ಶಾಹಿ ಸ್ನಾನದಲ್ಲಿ ಮಿಂದೆದ್ದ ಭಕ್ತ ವೃಂದ

ಬೆಂಗಳೂರು, ಸೆಪ್ಟೆಂಬರ್, 26 : ಗೋದಾವರಿ ನದಿ ತೀರದಲ್ಲಿ ಮೂರನೆ ಶಾಹಿ ಸ್ನಾನದ ಪ್ರಯುಕ್ತ ಭಕ್ತ ಸಮೂಹ ತುಂಬಿ ತುಳುಕುತ್ತಿದ್ದು, ಹಲವಾರು ಸಾಧುಗಳು, ಸಾಮಾನ್ಯ ಮಂದಿ ನದಿಯಲ್ಲಿ ಮಿಂದು ಪಾವಿತ್ರ್ಯ ಭಾವ ಪಡೆಯುತ್ತಿದ್ದಾರೆ.

ಒಂದುವಾರ ಕಾಲ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾರತದ ಹಲವಾರು ಅವಕಾಶಗಳು, ಸವಾಲುಗಳುಗಳ ಕುರಿತಾಗಿ ಸಾಕಷ್ಟು ಚರ್ಚೆ ನಡೆಸಿ ಪರಿಹಾರೋಪಾಯ ಕ್ರಮಗಳತ್ತ ದೃಷ್ಠಿ ನೆಡಲು ಅಣಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸುಫ್ ಸುಸ್ಥಿರ ಅಭಿವೃದ್ಧಿ ಸಮಿತಿಯ ಉದ್ಘಾಟನೆ ಮಾಡಿದ್ದಾಳೆ.[ನಾಸಿಕ್ ಮಹಾಕುಂಭಮೇಳದಲ್ಲಿ ಭಕ್ತರ ಪುಣ್ಯಸ್ನಾನ]

ಫಿಜಿಕಲ್ ಚಾಲೆಂಜ್ಡ್ ಕ್ರಿಕೆಟ್ ತಂಡ 2015ರ ಆಕ್ಸಿಜನ್ ಪ್ರಶ್ತಸ್ತಿ ಪಡೆದುಕೊಂಡಿದೆ. ಬಿಜೆಪಿ ಗಣ್ಯರು ಪಂಡಿತ್ ದೀನದಯಾಳು ಉಪಾಧ್ಯಾಯ ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅಮೆರಿಕಾದ ವಾಷಿಂಗ್ಟನ್ ನಲ್ಲಿ ಭೇಟಿಯಾಗಿದ್ದಾರೆ. ಇದು ಈ ದಿನದ ಸುದ್ದಿ ಗುಚ್ಛ ಹೆಚ್ಚಿನ ಮಾಹಿತಿಗೆ ಸ್ಲೈಡ್ ನೋಡಿ

ಭಕ್ತರೋ ಭಕ್ತರು

ಭಕ್ತರೋ ಭಕ್ತರು

ನಾಸಿಕ್ ನ ಗೋದಾವರಿಯಲ್ಲಿ ಮಿಂದೇಳಲು ದೇಶದ ನಾನಾ ಮೂಲೆಗಳಿಂದ ಆಗಮಿಸಿದ ಭಕ್ತ ಸಮೂಹ ಮೂರನೇ ಶಾಹಿ ಸ್ನಾನದಲ್ಲಿ ಪಾಲ್ಗೊಂಡು ಪುನೀತರಾದರು.

ಹುಟ್ಟುಹಬ್ಬ ಆಚರಣೆ

ಹುಟ್ಟುಹಬ್ಬ ಆಚರಣೆ

ನವದೆಹಲಿಯಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ್, ಕೇಂದ್ರ ಸಚಿವ ಹರ್ಷ ವರ್ಧನ್ ಮತ್ತು ಇನ್ನಿತರ ಗಣ್ಯರು ಬಿಜೆಪ ಸಂಸ್ಥಾಪಕ ಹಾಗೂ ಮಾನವತಾವಾದಿಯಾದ ಪಂಡಿತ್ ದೀನ ದಯಾಳ್ ಅವರ 99 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದರು.

ಶ್ರೀಲಂಕಾ ಗೆದ್ದಿತು

ಶ್ರೀಲಂಕಾ ಗೆದ್ದಿತು

ಶ್ರೀಲಂಕಾದ ಭೌತಿಕ ಹಾಗೂ ಮಾನಸಿಕ ಚಾಲೆಂಜಿಗ್ ಕ್ರಿಕೆಟ್ ತಂಡ ಭಾರತ ತಂಡ ವಿರುದ್ಧ ಜಯಗಳಿಸಿ 2015ನೇ ಸಾಲಿನ ಆಕ್ಸಿಜನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಶ್ರೀಲಂಕಾ ತಂಡ.

ವಿಶ್ವ ಬ್ಯಾಂಕ್ ಅಧ್ಯಕ್ಷನ ಭೇಟಿ

ವಿಶ್ವ ಬ್ಯಾಂಕ್ ಅಧ್ಯಕ್ಷನ ಭೇಟಿ

ವಿದೇಶ ಪ್ರವಾಸದ ನಿಮಿತ್ತ ನ್ಯೂಯಾರ್ಕ್ ಗೆ ತೆರಳಿದ್ದ ನರೇಂದ್ರ ಮೋದಿ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಂಗ್ ಕಿಮ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮಲಾಲಾ ಯೂಸೂಫ್

ಮಲಾಲಾ ಯೂಸೂಫ್

ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕಿನ ಹೋರಾಟಗಾರ್ತಿ ಮಲಾಲಾ ಯೂಸೂಫ್ ಯುನೈಟೆಡ್ ನೇಷನ್ಸ್ ನಲ್ಲಿ ಸುಸ್ಥಿರ ಅಭಿವೃದ್ಧಿ ಸಮಿತಿ-2015ನ್ನು ಉದ್ಘಾಟಿಸಿದರು.

ಮಕ್ಕಳೊಂದಿಗೆ ಅಧ್ಯಕ್ಷರ ಪತ್ನಿಯರು

ಮಕ್ಕಳೊಂದಿಗೆ ಅಧ್ಯಕ್ಷರ ಪತ್ನಿಯರು

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಅವರ ಪತ್ನಿ ಮೈಕೇಲ್ ಒಬಾಮ ಮತ್ತು ಚೀನಾ ಅಧ್ಯಕ್ಷ ಜಿನ್ ಪಿಂಗ್ , ಅವರ ಪತ್ನಿ ಪೆಂಗ್ ಲಿಯಾನ್ ವಾಷಿಂಗ್ಟನ್ ನಲ್ಲಿ ಭೇಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಒಬಾಮ ಪತ್ನಿ ಮೈಕೇಲ್ ಒಬಾಮ ಹಾಗೂ ಜಿನ್ ಪಿಂಗ್ ಪತ್ನಿ ಪೆಂಗ್ ಲಿಯಾನ್ ವಾಷಿಂಗ್ಟನ್ ಶಾಲೆಯ ಮಕ್ಕಳೊಂದಿಗೆ ಬೆರೆತು ಸಂತೋಷ ಅನುಭವಿಸಿದ ಕ್ಷಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+