Mahadevpura Dengue: ಮಹದೇವಪುರ ವಲಯ ಡೆಂಗ್ಯೂ ಹಾಟ್‌ಸ್ಪಾಟ್- ನಿಂತ ನೀರಿನಲ್ಲಿ ಸೊಳ್ಳೆ ಸಂತಾನ ವೃದ್ಧಿ!
ಬೆಂಗಳೂರು ಜುಲೈ 10: ಬೆಂಗಳೂರಿನಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆತಂಕ ಶುರುವಾಗಿದೆ. ಈವರೆಗೆ ದಾಖಲಾದ ಡೆಂಗ್ಯೂ ಪ್ರಕರಣದಲ್ಲಿ ಹೆಚ್ಚಿನ ಪ್ರಕರಣಗಳು ಮಹದೇವಪುರ ವಲಯದಲ್ಲಿ ದಾಖಲಾಗಿದ್ದು ಸೊಳ್ಳೆ ಕಂಡರೆ ಹೆದರುವಂತಾಗಿದೆ.
ನಗರದಲ್ಲಿ ವರದಿಯಾಗುತ್ತಿರುವ ಪ್ರತಿ ನಾಲ್ಕು ಡೆಂಗ್ಯೂ ಪ್ರಕರಣಗಳಲ್ಲಿ ಒಂದು ಪ್ರಕರಣ ಮಹದೇವಪುರ ವಲಯದ್ದಾಗಿದೆ. ಇದರಿಂದಾಗಿ ಟೆಕ್ ಹಬ್ ಪ್ರದೇಶ ಈಗ ಡೆಂಗ್ಯೂ ರಾಜಧಾನಿಯಾಗಿದೆ.

ಬಿಬಿಎಂಪಿ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ಸೋಮವಾರದವೆರೆಗೆ 3,815 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹದೇವಪುರ ವಲಯದಲ್ಲಿ 1041 ಕೇಸ್ ಕಂಡು ಬಂದಿವೆ. 892 ಕೇಸ್ ವರದಿಯಾಗುವ ಮೂಲಕ ಪೂರ್ವ ವಲಯ ಎರಡನೇ ಸ್ಥಾನದಲ್ಲಿದೆ.
ಜುಲೈ ಮೊದಲ ಎಂಟು ದಿನದಲ್ಲಿ ಮಹದೇವಪುರ ವಲಯದಲ್ಲಿ 179 ಪ್ರಕರಣ ವರದಿಯಾಗಿದೆ. ವರ್ತೂರು, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ, ಬೆಳ್ಳಂದೂರು ಮತ್ತು ಕೆ.ಆರ್.ಪುರದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.
ಜೂನ್ ಒಂದರ ಬಳಿಕ ಪೂರ್ವ ವಲಯದಲ್ಲಿ 642 ಪ್ರಕರಣಗಳು ವರದಿಯಾಗಿವೆ. ಈಜಿಪುರ, ಜೋಗುಪಾಳ್ಯ, ಜಯಮಹಲ್, ಪುಲಿಕೇಶಿನಗರ, ದೊಮ್ಮಲೂರು, ಶಾಂತಲಾ ನಗರ, ಶಾಂತಿನಗರ, ಸಿ.ವಿ. ರಾಮನ್ ನಗರ, ಹಲಸೂರಿನಲ್ಲಿ ಹೆಚ್ಚು ಪ್ರಕರಣಗಳಿವೆ.

ನಿರ್ಮಾಣ ಚಟುವಟಿಗಳು ಜೋರಾಗಿ ನಡೆಯುತ್ತಿವೆ. ಈ ಪ್ರದೇಶಗಳಲ್ಲಿ ಕಾರ್ಮಿಕರು ಡ್ರಮ್‌ಗಳಲ್ಲಿ ಹಲವು ದಿನ ನೀರು ಶೇಖರಿಸಿಡುತ್ತಿದ್ದು, ಸೊಳ್ಳೆ ಸಂತತಿ ಹೆಚ್ಚಲು ಕಾರಣವಾಗುತ್ತಿದೆ. ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಹಲವರು ವಾಸ ಮಾಡುವ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಲು ಗಮನ ಹರಿಸುತ್ತಿಲ್ಲ. ಇದು ಕೂಡ ಸಂತತಿ ಹೆಚ್ಚಾಗಲು ಕಾಣವಾಗಿದೆ ಎಂದು ಹೇಳಲಾಗುತ್ತಿದೆ.
ಯಾವ ವಲಯದಲ್ಲಿ ಎಷ್ಟು ಪ್ರಕರಣ?
*ಮಹದೇವಪುರ 1041
*ಆರ್ ಆರ್ ನಗರ 311
*ಬೊಮ್ಮನಹಳ್ಳಿ 387
*ದಾಸರಹಳ್ಳಿ 35
*ಪೂರ್ವ 892
*ದಕ್ಷಿಣ 527
*ಪಶ್ಚಿಮ 367
*ಯಲಹಂಕ 255

ವಾರಕ್ಕೆ ಒಂದು ದಿನ ಈಡಿಸ್ ಈಜಿಪ್ಟ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ಸಾಮೂಹಿಕವಾಗಿ ನಾಶ ಮಾಡುವ 'ಡ್ರೈ ಡೇ' ಕಾರ್ಯಚರಣೆ ಪ್ರಾರಂಭಿಸಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಲಾರ್ವ ನಾಶಕ ಸಿಂಪಡಿಸಲಾಗುತ್ತಿದೆ. ಫಾಗಿಂಗ್ ತೀವ್ರಗೊಳಿಸಲಾಗಿದೆ. ಅಗತ್ಯವಿರುವ ಕಡೆ ಸೊಳ್ಳೆಗಳನ್ನು ಜೈವಿಕ ವಿಧಾನ ಬಳಸಿ ನಾಶಪಡಿಸಲಾಗುತ್ತಿದೆ ಎಂದು ಮಹದೇವಪುರ ವಲಯದ ಅಧಿಕಾರಿಯೊಬ್ಬರು ಹೇಳಿದರು.
ರಾಜ್ಯದಲ್ಲಿ ಇದುವರೆಗೆ 7362 ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ 303 ಸಕ್ರಿಯ ಪ್ರಕರಣಗಳಿವೆ. 7 ಸಾವು ಸಂಭವಿಸಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆ ವಿಶೇಷ ವಾರ್ಡ್ ಸಜ್ಜುಗೊಳಿಸಬೇಕು. ಮೆಡಿಕಲ್ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಸಭೆಗಳನ್ನು ನಡೆಸಿ ಪರಿಶೀಲನೆ ನಡೆಸಬೇಕು' ಎಂದು ಸೂಚಿಸಿದರು.
-
ದುಬಾರಿ ಆ್ಯಂಟಿ ಏಜಿಂಗ್ ಕ್ರೀಮ್ಗಿಂತ ಈ ತರಕಾರಿಯೇ ಪರಿಣಾಮಕಾರಿಯಂತೆ: ಚಿರಯೌವನ ತ್ವಚೆಗೆ ನೈಸರ್ಗಿಕ ಉಪಾಯ -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ












Click it and Unblock the Notifications