ಗಮನಿಸಿ: ಮಡಿವಾಳ ಸರಹದ್ದಿನಲ್ಲಿ ಸಂಚಾರ ಮಾರ್ಗಬದಲಾವಣೆ
ಬೆಂಗಳೂರು, ಸೆ. 29: ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಂಚಾರ ಮಾರ್ಗಬದಲಾವಣೆ ಮಾಡುತ್ತಿರುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಇಲ್ಲಿದೆ ಮಾಹಿತಿ....
ಮಡಿವಾಳ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಡಾ.ಮರೀಗೌಡ ರಸ್ತೆಯ ಚೆಕ್‍ಪೋಸ್ಟ್ ನಿಂದ ತಾವರೆಕೆರೆ ಜಂಕ್ಷನ್ ವರೆಗೆ ರಸ್ತೆಯ ಎಡ ಭಾಗದಲ್ಲಿ ಬಿಬಿಎಂಪಿ ವತಿಯಿಂದ 400 ಎಂ.ಎಂ ಕೊಳವೆಯನ್ನು ಅಳವಡಿಸುವ ಸಂಬಂಧ ಕಾಮಗಾರಿಯನ್ನು ಪ್ರಾರಂಭಿಸುತ್ತಿದ್ದು, ಕಾಮಗಾರಿಯು ಪ್ರಾರಂಭವಾದ ದಿನದಿಂದ ರಸ್ತೆಯ ಒಂದು ಭಾಗವು ಸಂಪೂರ್ಣವಾಗಿ ಸಂಚಾರಕ್ಕೆ ಲಭ್ಯವಿರುವುದಿಲ್ಲ.
ಆದ್ದರಿಂದ ಮಡಿವಾಳ ಮುಖ್ಯರಸ್ತೆಯ ಕಡೆಯಿಂದ ಡಾ.ರೀಗೌಡ ರಸ್ತೆ ಮಾರ್ಗವಾಗಿ ಡೈರಿ ವೃತ್ತದ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನ ಸಂಚಾರವನ್ನು ಮಡಿವಾಳ ಚೆಕ್‍ಪೋಸ್ಟ್ ಬಳಿ ನಿಷೇಧಿಸಲಾಗಿದೆ. ಸದರಿ ಮಾರ್ಗದಲ್ಲಿ ಸಂಚರಿಸುವ ಲಘುವಾಹನಗಳನ್ನು ಮಡಿವಾಳ ಮುಖ್ಯರಸ್ತೆಯಲ್ಲಿ ಸರ್ಜಾಪುರ ಜಂಕ್ಷನ್ ಬಳಿ ಎಡ ತಿರುವು ಪಡೆದು ಸೆಂಟ್‍ಜಾನ್ ವುಡ್ ಸ್ಟ್ರೀಟ್ ಮುಖಾಂತರ ತಾವರೆಕೆರೆ ರಸ್ತೆ ತಲುಪಿ ಬಲ ತಿರುವು ಪಡೆದು ಡಾ:ಮರೀಗೌಡ ರಸ್ತೆಯನ್ನು ತಲುಪಿ ಡೈರಿ ವೃತ್ತದ ಕಡೆ ಸಂಚರಿಸಬಹುದು.

ಹಾಗೇಯೇ ಮಡಿವಾಳ ಮುಖ್ಯರಸ್ತೆಯಿಂದ ಡೈರಿ ವೃತ್ತದ ಕಡೆಗೆ ಸಂಚರಿಸುವ ಬಾರಿ ವಾಹನಗಳು (ಬಸ್ಸು, ಲಾರಿ, ಗೂಡ್ಸ್ ವಾಹನಗಳು ಮತ್ತು ಇತರೆ ವಾಹನ) ಚೆಕ್‍ಪೋಸ್ಟ್ ಜಂಕ್ಷನ್ ಬಳಿ ಹೊಸೂರು ಲಷ್ಕರ್ ರಸ್ತೆ ಮುಖಾಂತರ ನೇರವಾಗಿ ಚಲಿಸಿ ಆಡುಗೋಡಿ ಜಂಕ್ಷನ್ ಬಳಿ ಎಡತಿರುವ ಪಡೆದು ಡೈರಿ ವೃತ್ತದ ಕಡೆಗೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.












Click it and Unblock the Notifications