ಬೆಂಗಳೂರಿನಲ್ಲಿ ಕಂಡ ಭಾಗಶಃ ಚಂದ್ರಗ್ರಹಣ
ಬೆಂಗಳೂರು, ಆಗಸ್ಟ್ 8: ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣವನ್ನು ನೋಡಬೇಕೆಂಬ ಹಲವರ ಆಸೆಗೆ ತಣ್ಣೀರೆರಚಿದ್ದು ಮಳೆ. ರಾಜಧಾನಿ ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆಕಾಶದ ತುಂಬ ಮೋಡ ಮುಸುಕಿದ್ದರಿಂದ ಚಂದ್ರ ಕಾಣಲಿಲ್ಲ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣವಿದ್ದರೂ, ಭಾಗಶಃ ಚಂದ್ರಗ್ರಹಣವನ್ನು ನೋಡುವ ಅವಕಾಶ ಹಲವರಿಗೆ ಸಿಕ್ಕಿತ್ತು. ಟೆಲಿಸ್ಕೋಫ್ ಮೂಲಕ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಇಲ್ಲಿನ ನೆಹರೂ ಪ್ಲಾನೆಟೇರಿಯಂ ಯೋಜನೆಯನ್ನೂ ಹವಾಮಾನ ಸರಿಯಿಲ್ಲದ ಕಾರಣ ಕೈಬಿಡಲಾಯಿತು.

ನಿನ್ನೆ ರಾತ್ರಿ(ಆಗಸ್ಟ್ 7) 10:52 ಆರಂಭವಾಗಿದ್ದ ಗ್ರಹಣ 12:48 ರವರೆಗೂ ಕಾಣಿಸಿಕೊಂಡಿದ್ದು, ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ ಎನ್ನಿಸಿದೆ. ಈ ಗ್ರಹಣ ಜಗತ್ತಿನ ಬಹುತೇಕ ಎಲ್ಲ ಕಡೆಗಳಿಂದಲೂ ಬರಿಗಣ್ಣಿಗೆ ಕಾಣುತ್ತಿತ್ತು ಎಂಬುದು ಮತ್ತೊಂದು ವಿಶೇಷ.












Click it and Unblock the Notifications