ಜೆಡಿಎಸ್: 15 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಂಗಳೂರು, ಮಾರ್ಚ್ 20: ಹತ್ತು ದಿನಗಳ ಹಿಂದೆ ರಾಜ್ಯದಲ್ಲಿ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಪ್ರಮುಖ ಪ್ರತಿಪಕ್ಷವಾದ ಜೆಡಿಎಸ್ ಇಂದು ಒಟ್ಟಾರೆ 15 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡರ ಅವರು ಬೆಂಗಳೂರಿನಲ್ಲಿ ಇಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಗಮನಾರ್ಹವೆಂದರೆ ಗೌಡರ ಕುಟುಂದದಿಂದ ಸದ್ಯಕ್ಕೆ ದೇವೇಗೌಡರು ಮಾತ್ರವೇ ಸ್ಪರ್ಧಿಸುತ್ತಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಬಗೆಗಿನ ಗಾಳಿಸುದ್ದಿ ಹಾಗೆಯೇ ಇದೆ. ಏಕೆಂದರೆ ಚಿಕ್ಕಬಳ್ಳಾಪುರ ಕ್ಷೇತ್ರವೊಂದನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಿಗೆ ಪಕ್ಷವು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಈ ಮಧ್ಯೆ, ಜಾಫರ್ ಷರೀಫ್ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ಅವರ ಜತೆ ಮಾತುಕತೆ ನಡೆದಿದೆ. ಕೇರಳದಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಗೌಡರು ಹೇಳಿದ್ದಾರೆ. 15 ಅಭ್ಯರ್ಥಿಗಳ ಜೆಡಿಎಸ್ ಪಟ್ಟಿ ಹೀಗಿದೆ:

1) ಕೋಲಾರ - ಕೇಶವ
2) ಬೆಂಗಳೂರು ಗ್ರಾಮಾಂತರ - ಆರ್ ಪ್ರಭಾಕರ ರೆಡ್ಡಿ
3) ಚಿತ್ರದುರ್ಗ - ಗೂಳಿಹಟ್ಟಿ ಶೇಖರ್
4) ಉಡುಪಿ ಚಿಕ್ಕಮಗಳೂರು - ಧನಂಜಯ ಕುಮಾರ್
5) ಬೀದರ್ -ಬಂಡೆಪ್ಪ ಕಾಂಶಂಪುರ್
6) ಚಿಕ್ಕೋಡಿ - ಶ್ರೀಮಂತ್ ಬಾಳಾಸಾಬ್ ಪಾಟೀಲ್
7) ಮಂಡ್ಯ - ಸಿ ಎಸ್ ಪುಟ್ಟರಾಜು
8) ಚಾಮರಾಜನಗರ - ಎಂ. ಕೋಟೆ ಶಿವಣ್ಣ
9) ಉತ್ತರ ಕನ್ನಡ - ಶಿವಾನಂದ ನಾಯಕ್
10)ರಾಯಚೂರು - ವೃಷಬೇಂದ್ರ ನಾಯಕ್
11) ಗುಲ್ಬರ್ಗ - ಎಸ್ ಡಿ ಸಾಗರ್
12) ಹಾಸನ - ಎಚ್ ಡಿ ದೇವೇಗೌಡ
13) ತುಮಕೂರು - ಎ ಕೃಷ್ಣಪ್ಪ
14) ಹಾವೇರಿ - ರವಿ ಮೆಣಸಿನಕಾಯಿ
15) ಶಿವಮೊಗ್ಗ - ಗೀತಾ ಶಿವರಾಜ್ ಕುಮಾರ್
16) ಬೆಂಗಳೂರು ಉತ್ತರ - ಅಬ್ದುಲ್ ಅಜೀಂ
17) ಬೆಂಗಳೂರು ದಕ್ಷಿಣ - ನಂದಿನಿ ಆಳ್ವಾ
18) ಬೆಂಗಳೂರು ದಕ್ಷಿಣ - ರುತ್ ಮನೋರಮಾ
19) ಚಿಕ್ಕಬಳ್ಳಾಪುರ - ಎಚ್.ಡಿ.ಕುಮಾರಸ್ವಾಮಿ
20) ಮೈಸೂರು - ಚಂದ್ರಶೇಖರಯ್ಯ
21) ಬಳ್ಳಾರಿ - ರವಿ ನಾಯಕ್












Click it and Unblock the Notifications