Bengaluru Rains : ವಾಯುಭಾರ ಕುಸಿತ; ಬೆಂಗಳೂರು ನಗರದಲ್ಲಿ ಮಳೆ ಮುನ್ಸೂಚನೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ 24 ಗಂಟೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಫೆಬ್ರವರಿ 02; ವಿಪರೀತ ಚಳಿ, ತಣ್ಣನೆಯ ಸುಳಿಗಾಳಿ, ಮೋಡ ಕವಿದ ವಾತಾವರಣ, ಸುಡುವ ಬಿಸಿಲು ಬೆಂಗಳೂರು ನಗರದ ಹವಾಮಾನ ದಿನ ದಿನ ಬದಲಾಗುತ್ತಿದೆ.

ಎರಡು ದಿನಗಳಿಂದ ಚಳಿ ಸಂಪೂರ್ಣವಾಗಿ ಕಡಿಮೆ ಆಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ ತನಕ ತಮಿಳುನಾಡಿನ ಕರಾವಳಿ ಜಿಲ್ಲೆಗಳು, ಪದುಚೇರಿ ಮತ್ತು ಕಾರೈಕಲ್‌ ಸೇರಿದಂತೆ 11 ಜಿಲ್ಲೆಗಳಲ್ಲಿ ವಾಯುಭಾರ ಕುಸಿದ ಪ್ರಭಾವದಿಂದ ಮಳೆಯಾಗಲಿದೆ.

Low Pressure Area In Bay Of Bengal Light Rains Forecast For Bengaluru

ಈ ವಾಯುಭಾರ ಕುಸಿತದ ಪ್ರಭಾವದಿಂದ ಬೆಂಗಳೂರು ನಗರದಲ್ಲಿಯೂ ಮೋಡ ಕವಿದ ವಾತಾವರಣ, ಗಾಳಿ ಇರಲಿದ್ದು, ತುಂತುರು ಮಳೆಯನ್ನು ಸಹ ನಿರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೋಮವಾರದಿಂದ ನಗರದಲ್ಲ ಶುಷ್ಕ ವಾತಾವರಣ ಕಂಡುಬರುತ್ತಿದೆ. ಸಂಜೆಯ ವೇಳೆಗೆ ಆಗಸದಲ್ಲಿ ಮೋಡಗಳ ಸಂಚಾರ ಕಾಣುತ್ತಿದೆ. ಆದರೆ ಮಳೆಯಾಗಿಲ್ಲ. ಚಳಿ ಗಣನೀಯವಾಗಿ ಕಡಿಮೆಯಾಗಿದ್ದು, ಬಿಸಿಲು ಇದ್ದರೂ ಮೈ ಸುಡುವಷ್ಟು ಬೆಚ್ಚಗಿಲ್ಲ.

Low Pressure Area In Bay Of Bengal Light Rains Forecast For Bengaluru

11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ; ಭಾರತೀಯ ಹವಾಮಾನ ಇಲಾಖೆ ಮಾಹಿತಿ ಅನ್ವಯ ಗುರುವಾರ ಮತ್ತು ಶುಕ್ರವಾರ ತಮಿಳುನಾಡಿನ 11 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಗಾಳಿಯ ವೇಗವೂ ಹೆಚ್ಚಿರಲಿದ್ದು, ಮೀನುಗಾರರಿಗೆ ಸಹ ಎಚ್ಚರಿಕೆ ರವಾನೆ ಮಾಡಲಾಗಿದೆ.

ತಮಿಳುನಾಡಿನ ಕರಾವಳಿ ಭಾಗದಲ್ಲಿ ಫೆಬ್ರವರಿ 4ರಂದು ಗಂಟೆಗೆ 40 ರಿಂದ 45 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ. ಆಗಾಗ ಗಾಳಿಯ ವೇಗ 55 ಕಿ. ಮೀ. ಆಗುವ ಸಾಧ್ಯತೆಯೂ ಇದೆ. ಆದ್ದರಿಂದ ಕುಮಾರ ಕಡಲ್ ಕಡೆಗೆ ಸಾಗುವ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಕನ್ಯಾಕುಮಾರಿ, ತೂತುಕುಡಿ, ರಾಮನಾಥಪುರಂ, ಶಿವಗಂಗೆ, ಪುದುಕೊಟ್ಟೈ, ನಾಗಪಟ್ಟಣಂ, ಕಡಲೂರು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 30 ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ ಹವಾಮಾನ; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಮತ್ತು ಮಂಜು ಕವಿದ ವಾತಾವರಣ ಮುಂದುವರೆದಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದೆ, ಕನಿಷ್ಠ ತಾಪಮಾನ 17 ಡಿಗ್ರಿ ಆಗುವ ನಿರೀಕ್ಷೆ ಇದೆ.

ಕಾರವಾರದಲ್ಲಿ ಅತಿ ಹೆಚ್ಚು ಎಂದರೆ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+