ಸೈರಾಟ್ ಸಿನಿಮಾ ಮಾದರಿಯಲ್ಲಿ ಪ್ರೇಮಿಗಳ ಜೀವನ ಅಂತ್ಯ
ಬೆಂಗಳೂರು,
ಫೆಬ್ರವರಿ 16: ಪ್ರೀತಿಸಿ ಮದುವೆಯಾಗಿ ಎರಡು ತಿಂಗಳು. ಹುಟ್ಟು ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಸಹೋದರಿಯ ಗಂಡನನ್ನು ಹತ್ಯೆ ಮಾಡಿ ತಂಗಿಯ ಕುಂಕುಮ ಅಳಿಸಿ ಹಾಕಿರುವ ಘಟನೆ ಬೆಂಗಳೂರಿನ ರಾಜ ಗೋಪಾಲನಗರ ದಲ್ಲಿ ನಡೆದಿದೆ. id="toptextpromo"> id='are-slot-1' class='oiad oi-axt oiadv'>ಚೇತನ್
ಕೊಲೆಯಾದ ನವ ವಿವಾಹಿತ. ಚೇತನ್ ಪತ್ನಿಯ ಅಣ್ಣ ಅಕಾಶ್, ನಂಜೇಗೌಡ, ಸಿದ್ದ ಎಂಬುವರು ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿದ್ದಾರೆ. ಆರೋಪಿಗಳನ್ನು ರಾಜ ಗೋಪಾಲನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. id='are-slot-2' class='oiad oi-axt oiadv'>
ಪ್ರೀತಿ
ಕುಣಿಗಲ್ ನ ಹುಲಿಯೂರು ದುರ್ಗ ಮೂಲದ ಚೇತನ್ ಮತ್ತು ಭೂಮಿಕಾ ಕಾಲೇಜು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿ ಬೇಡ ಎಂದು ಬುದ್ಧಿವಾದ ಹೇಳಿದ್ದ ಕುಟುಂಬ ಎರಡು ತಿಂಗಳ ಹಿಂದೆ ಬೇರೆ ವರನ ಜತೆ ಭೂಮಿಕಾ ಮದುವೆ ಮಾಡಿಸಲಾಗಿತ್ತು. ಮದುವೆ ಬಳಿಕವೂ ಚೇತನ್ ಮತ್ತು ಭೂಮಿಕಾ ಪರಸ್ಪರ ಪ್ರೀತಿ ಮಾಡುತ್ತಿದ್ದರು.

ಪರಾರಿ ಯಾದ ಜೋಡಿ
ಭೂಮಿಕಾಳನ್ನು ಕುಟುಂಬಸ್ಥರು ವಿಜಯ್ ಎಂಬಾತನಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರಂತೆ. ಆದ್ರೆ ಭೂಮಿಕಾ ಕಾಲೇಜ್ ದಿನಗಳಲ್ಲೇ ಚೇತನ್ ನನ್ನು ಪ್ರೀತಿಸುತ್ತಿದ್ದಳಂತೆ.. ಇದರಿಂದ ಮದುವೆಯಾದ ಮೂರೇ ದಿನಕ್ಕೆ ಚೇತನ್ ಗೆ ಫೋನ್ ಮಾಡಿ ನಿನ್ ಇಲ್ಲಾ ಅಂದ್ರೆ ಬದುಕಲಾರೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದಿದ್ದಳಂತೆ. ಹೀಗಾಗಿ ಚೇತನ್ ಭೂಮಿಕಾಳನ್ನು ಕರೆದುಕೊಂಡು ಓಡಿಹೋಗಿದ್ದ.. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿದ್ರು ಬಗ್ಗದ ಭೂಮಿಕ ಚೇತನ್ ಜೊತೆಯಲ್ಲೇ ಹೋಗುವುದಾಗಿ ಹೇಳಿ ಬಂದಿದ್ದಾಳೆ.

ಪಂಚಾಯ್ತಿ ಆಗಿತ್ತು
ಭೂಮಿಕಾ ಹಾಗೂ ಚೇತನ್ ವಿವಾಹದ ಬಳಿಕ ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆದಿತ್ತು. ವಿಚ್ಚೇದನ ಕೊಟ್ಟು ಆನಂತರ ಮದುವೆಯಾಗುವಂತೆ, ಅಲ್ಲಿಯ ವರೆಗೆ ಭೂಮಿಕಾ ರನ್ನು ಮನೆಗೆ ಕಳುಹಿಸಲು ಪೋಷಕರು ಹೇಳಿದ್ದರು. ಇದಕ್ಕೆ ಭೂಮಿಕಾ ಪ್ರತಿರೋಧ ತೋರಿ ತನ್ನ ಲವರ್ ಜತೆ ಬಂದಿದ್ದಳು. ಇದರಿಂದ ಭೂಮಿಕಾ ಮನೆಯವರು ಕೋಪಗೊಂಡಿದ್ದರು. ಮದುವೆ ಮಾಡಿಕೊಟ್ಟಿದ್ದ ವರನ ಕಡೆಯವರಿಂದ ಅವಮಾನಕ್ಕೆ ಒಳಗಾಗಿದ್ದರು.
Recommended Video

ಜನ್ಮ ದಿನಕ್ಕೆ ಮುಹೂರ್ತ
ಲಗ್ಗೆರೆಯಲ್ಲಿರುವ ಎಲ್. ಜಿ ರಾಮಣ್ಣ. ಬಡಾವಣೆಯಲ್ಲಿ ಭೂಮಿಕಾ ಮತ್ತು ಚೇತನ್ ವಾಸವಿದ್ದರು. ಇದರ ಮಾಹಿತಿ ಪಡೆದಿದ್ದ ಅಕಾಶ್ ಮತ್ತು ದೀಪಕ್ ಮತ್ತು ಅಕೆಯ ಚಿಕ್ಕಪ್ಪ ಮೂವರು ಹುಟ್ಟುಹಬ್ಬಕ್ಕೆ ಶುಭಕೋರಲೆಂದು ಚೇತನ್ ಮನೆಗೆ ಬಂದಿದ್ದಾರೆ. ಮಂಗಳವಾರ ಮಧ್ಯಾಹ್ನ ಚೇತನ್ ಮನೆಗೆ ಬಂದ ಅಕಾಶ್ ಇತರೆ ಇಬ್ಬರು ವ್ಯಕ್ತಿಗಳು,ಭೂಮಿಕಾಳನ್ನು ಅಂಗಡಿಗೆ ಕಳುಹಿಸಿ ಮನೆ ಚಿಲಕ ಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ.
ಅಂಗಡಿಯಿಂದ ಬಂದ ಭೂಮಿಕಾ ಗಂಡ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಷಕರ ವಿರೋಧ ನಡುವೆ ಮದುವೆಯಾಗಿ ಪುಟ್ಟ ಜೀವನ ಕಟ್ಟಿಕೊಂಡಿದ್ದ ಪ್ರೇಮಿಯನ್ನು ಯುವತಿಯ ಕಡೆಯವರು ಹತ್ಯೆ ಮಾಡಿ ಜೀವನ ಅಂತ್ಯ ಗೊಳಿಸುವ ಮರಾಠಿ ಸಿನಿಮಾ ಸೈರಾಟ್ ದೇಶದೆಲ್ಲಡೆ ಸಂಚಲನ ಮೂಡಿಸಿತ್ತು. ಅದೇ ರೀತಿ ಭೂಮಿಕಾ ಕೂಡ ಗಂಡನನ್ನು ಕಳೆದುಕೊಂಡಿದ್ದಾಳೆ. ನೆಚ್ಚಿನ ಪ್ರೇಮಿ ಕತೆಗಿಲ್ಲ, ಕೊಲೆ ಪಾತಕ ತವರೂರಿಗೆ ಹೋಗಲು ಆಗದ ನರಕ ಯಾತನೆ ಅನುಭವಿಸುವಂತಾಗಿದೆ.












Click it and Unblock the Notifications