ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಜಗನ್ನಾಥ ಯಾತ್ರೆ ಛಾಯಾಚಿತ್ರಗಳ ಅನಾವರಣ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 04: ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಜಗನ್ನಾಥ ಯಾತ್ರಾ ಛಾಯಾಚಿತ್ರ ಪ್ರದರ್ಶನಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ.

ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೊಶಿಯಲ್ ಸೈನ್ಸ್(ಕೆಐಎಸ್ ಎಸ್) ಆಶ್ರಯದಲ್ಲಿ ಎರಡು ದಿನ ನಡೆದ ಪ್ರದರ್ಶನವನ್ನು ಸಾವಿರಾರು ಜನ ಕಣ್ಣು ತುಂಬಿಕೊಂಡರು. ಪ್ರತಿವರ್ಷ ಲಕ್ಷಾಂತರ ಜನ ಜಗನ್ನಾಥ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಅದರ ಎಲ್ಲ ಚಿತ್ರಣ, ಯಾತ್ರೆಯ ಸಣ್ಣ ಸಣ್ಣ ಅಂಶಗಳನ್ನು ಹತ್ತಿರದಿಂದ ನೋಡುವ ಅವಕಾಶ ಬೆಂಗಳೂರಿನಲ್ಲೇ ಸಿಕ್ಕಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಐಐಎಸ್ ಮತ್ತು ಕೆಐಐಟಿ ಸಂಸ್ಥಾಪಕ ಡಾ. ಅಚ್ಯುತ ಸಮಂತ, ರಥಯಾತ್ರೆಯ ಯಶಸ್ಸಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ ಅರ್ಪಿಸಿದರು. ಬೆಂಗಳೂರಿಗರು ಸದಾ ಹೊಸ ಅಂಶಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ ಎಂದು ಹೇಳಿದರು.

ಭುವನೇಶ್ವರಕ್ಕೆ ಮತ್ತೊಂದು ರಥಯಾತ್ರೆ

ಭುವನೇಶ್ವರಕ್ಕೆ ಮತ್ತೊಂದು ರಥಯಾತ್ರೆ

ಜಗನ್ನಾಥ ರಥಯಾತ್ರೆ ಯಶಸ್ವಿಯಾಗಿದ್ದು ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೊಶಿಯಲ್ ಸೈನ್ಸ್ ವಿದ್ಯಾರ್ಥಿಗಳು ಜುಲೈ 6 ರಿಂದ ಭುವನೇಶ್ವರಕ್ಕೆ ಮತ್ತೊಂದು ರಥಯಾತ್ರೆ ಹಮ್ಮಿಕೊಂಡಿದ್ದಾರೆ.

ವರ್ಷದಲ್ಲಿ ಒಮ್ಮೆ

ವರ್ಷದಲ್ಲಿ ಒಮ್ಮೆ

ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೊಶಿಯಲ್ ಸೈನ್ಸ್ ವರ್ಷದಲ್ಲಿ ಒಮ್ಮೆ ಜಗನ್ನಾಥ ಯಾತ್ರೆ ಹಮ್ಮಿಕೊಳ್ಳುತ್ತ ಬಂದಿದೆ.

ಯಾರು ಸಂಘಟಿಸಿದ್ದರು?

ಯಾರು ಸಂಘಟಿಸಿದ್ದರು?

ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೊಶಿಯಲ್ ಸೈನ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ಬುಡಕಟ್ಟು ವಿದ್ಯಾರ್ಥಿಗಳು ಯಾತ್ರೆಯನ್ನು ಆಯೋಜನೆ ಮಾಡಿದ್ದರು.

ಎಲ್ಲದರ ಸಾಕಾರ

ಎಲ್ಲದರ ಸಾಕಾರ

ಭಕ್ತಿ, ಸಂಕಲ್ಪ, ಶಿಸ್ತು ಮತ್ತು ನಂಬಿಕೆಗಳ ಆಧಾರದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು ಯಾತ್ರೆಯ ಎಲ್ಲ ವಿವರಗಳನ್ನು ಛಾಯಾ ಚಿತ್ರ ಪ್ರದರ್ಶನ ಕಣ್ಣಿಗೆ ಕಟ್ಟಿಕೊಟ್ಟಿತು.

ಶಂಕರಮೂರ್ತಿ ಉದ್ಘಾಟನೆ

ಶಂಕರಮೂರ್ತಿ ಉದ್ಘಾಟನೆ

ವಿಧಾನ ಪರಿಷತ್ ಸಭಾಪತಿ ಡಿ ಎಚ್. ಶಂಕರಮೂರ್ತಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಪ್ರದರ್ಶನವನ್ನು ಉದ್ಘಾಟನೆ ಮಾಡಿದರು.

ರಥದ ವಿಶೇಷ

ರಥದ ವಿಶೇಷ

125 ಕರಕುಶಲಕರ್ಮಿಗಳು ನಿರಂತರ 58 ದಿನ ಶ್ರಮವಹಿಸಿ 2, 188 ಮರದ ತುಂಡುಗಳನ್ನು ಬಳಕೆ ಮಾಡಿ ರಥ ನಿರ್ಮಿಸಿದ್ದರು.

25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ

25 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ

ಕಳಿಂಗ ಇನ್ ಸ್ಟಿಟ್ಯೂಟ್ ಆಫ್ ಸೊಶಿಯಲ್ ಸೈನ್ಸ್ 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿದೆ. ಜತೆಗೆ ಇಂಥಹ ರಚನಾತ್ಮಕ ಕೆಲಸದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಕ್ರೀಡಾ ಸಾಧಕರು

ಕ್ರೀಡಾ ಸಾಧಕರು

ಕ್ರೀಡಾ ತರಬೇತಿ ನೀಡುವುದರಲ್ಲೂ ಸಂಸ್ಥೆ ಮುಂದಿದೆ. ಸಂಸ್ಥೆಯಲ್ಲಿ ಅದ್ಯಯನ ಮಾಡಿದ ವಿದ್ಯಾರ್ಥಿಗಳು ಒಲಿಂಪಿಕ್ಸ್ ಗೂ ಆಯ್ಕೆಯಾಗಿದ್ದಾರೆ.

English summary
The two-day KISS Jagannath Rath Yatra photo exhibition in Bengaluru turned out to be a big hit.Hundreds of Bengalureans turned up for the photo exhibition and were awed by the fact as to how the only tribal Rath Yatra in the country was such a treat to watch
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X