• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಚ್ಚು-ಲಾಂಗು ತೋರಿಸಿ ಲೂಟಿ ಮಾಡುತ್ತಿದ್ದ ಮೂವರು ಅಂದರ್‌

By Nayana
|

ಬೆಂಗಳೂರು, ಜು.30: ರಾತ್ರಿ ಹೊತ್ತು ಒಂಟಿಯಾಗಿ ಹೋಗುತ್ತಿರುವವರಿಗೆ ಮಚ್ಚು, ಲಾಂಗು ತೋರಿಸಿ ದರೋಡೆ ಮಾಡುತ್ತಿದ್ದ ಮೂವರನ್ನು ವೈಯಾಲಿಕಾವಲ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಜು.15ರಂದು ವೈಯಾಲಿಕಾವಲ್‌ನಲ್ಲಿರುವ ಅಂಗಡಿಯನ್ನು ಲೂಟಿ ಮಾಡಿದ್ದರು, ರಾಡ್‌ ಹಿಡಿದು ಸುತ್ತಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು, ಈ ಖದೀಮರ ಕೆಲಸ ರಾತ್ರಿ 12 ಗಂಟೆಯ ಬಳಿಕವೇ ಆರಂಭವಾಗುತ್ತಿತ್ತು, ರಾತ್ರಿ ಹೊತ್ತು ಒಂಟಿ ಮಹಿಳೆ ಅಥವಾ ವ್ಯಕ್ತಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದರು. ನಂದೀಶ್‌, ಸಾಜಿದ್‌ ಬಂಧಿತರು.

ಸಿಬ್ಬಂದಿ ಚಹಾಕ್ಕೆ ಹೋದರು: ಕಳ್ಳರು 15 ಲಕ್ಷ ದೋಚಿದರು

ಒಂದೊಮ್ಮೆ ಕೆಲಸ ವಿಫಲವಾದಲ್ಲಿ ಅದೇ ದಿನ ಸಣ್ಣ ಪುಟ್ಟ ಅಂಗಡಿಗಳನ್ನು ದರೋಡೆ ಮಾಡುತ್ತಿದ್ದರು, ದರೋಡೆಗೆ ಒಂದೇ ಬೈಕ್‌ಗಳನ್ನು ಬಳಸುತ್ತಿರಲಿಲ್ಲ ಬದಲಾಗಿ ಕದ್ದ ಬೈಕ್‌ಗಳನ್ನೇ ದರೋಡೆಗೆ ಬಳಕೆ ಮಾಡುತ್ತಿದ್ದರು, ಬಂಧಿತರಿಂದ 6.5 ಲಕ್ಷ ನಗದು, 107 ಗ್ರಾಂ ಚಿನ್ನ ಹಾಗೂ 21 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
Vaiyali kaval police have arrested three miscreants who were looted people in the nights treating them showing knife and iron bar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X