ಬಹುಮಹಡಿ ಕಟ್ಟಡಗಳಲ್ಲಿ ಸಾವಿರಾರು ಜನರಿದ್ದರೂ ಕಾಡುವ ಒಂಟಿತನದ ಬಗ್ಗೆ ಬಿಚ್ಚಿಟ್ಟ ಮಹಿಳೆ: Video Viral

ಗಗನಚುಂಬಿ ಕಟ್ಟಡಗಳು, ಐಷಾರಾಮಿ ಸೌಲಭ್ಯಗಳು, ಸಾವಿರಾರು ಫ್ಲಾಟ್‌ಗಳು... ಇದು ಇಂದಿನ ಆಧುನಿಕ ನಗರ ಅಂದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಿಸುವವರ ಜೀವನದ ಚಿತ್ರಣವಿದು. ಆದರೆ, ಈ ಐಷಾರಾಮಿ ಬದುಕಿನ ಹಿಂದೆ ಯಾರಿಗೂ ಕಾಣದ ಒಂದು ನೋವು ಅಡಗಿದೆ. ಅದೇ ಒಂಟಿತನ.

ಹೌದು, ನೂರಾರು ಕುಟುಂಬಗಳು ಒಂದೇ ಸೂರಿನಡಿ ವಾಸವಿದ್ದರೂ, ಯಾರೊಬ್ಬರಿಗೂ ಇನ್ನೊಬ್ಬರ ಪರಿಚಯವೇ ಇರುವುದಿಲ್ಲ. ಈ ಕುರಿತು ಸುನೀತಾ ಬಾದಲ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹೈ-ರೈಸ್ ಸೊಸೈಟಿ ಒಂಟಿತನದ ವಾಸ್ತವ ಚಿತ್ರಣವನ್ನ ಬಿಚ್ಚಿಟ್ಟಿದೆ.

Loneliness in High Rise Societies Why Modern City Living Feels So Isolating Instagram Video Viral

ವೈರಲ್‌ ವಿಡಿಯೋದಲ್ಲಿ ಏನಿದೆ?

ತಮ್ಮ ಫ್ಲಾಟ್‌ನ ಬಾಲ್ಕನಿಯಿಂದ ಕಾಣುವ ಬೃಹತ್ ವಸತಿ ಸಮುಚ್ಚಯಗಳನ್ನ ತೋರಿಸುತ್ತಾ ಸುನೀತಾ ಅವರು ಆಡಿರುವ ಮಾತುಗಳು ಪ್ರತಿಯೊಬ್ಬ ನಗರವಾಸಿಗಳ ಮನಮುಟ್ಟುವಂತಿವೆ. "ಈ ಬಹುಮಹಡಿ ಕಟ್ಟಡಗಳನ್ನು ಒಮ್ಮೆ ಗಮನಿಸಿ, ಇಲ್ಲಿ ಎಷ್ಟು ಒಂಟಿತನ ತುಂಬಿದೆ ನೋಡಿ. ಇದೊಂದು ದೊಡ್ಡ ಸೊಸೈಟಿ, ಜನರಿಗೆ ಒಂಟಿತನ ಕಾಡಬಾರದು ಎಂಬ ಉದ್ದೇಶದಿಂದಲೇ ಇಡೀ ಸಮುದಾಯವನ್ನ ಒಂದೇ ಕಡೆ ಸೇರಿಸುವಂತೆ ಇದನ್ನು ನಿರ್ಮಿಸಲಾಗಿದೆ. ಆದರೆ, ಈ ಕಟ್ಟಡಗಳ ಒಳಗೆ ಕೇವಲ ಶೂನ್ಯತೆ ಮತ್ತು ಒಂಟಿತನ ಮಾತ್ರ ಆವರಿಸಿದೆ. ಇಲ್ಲಿ ಯಾರೂ ಯಾರ ಬಗ್ಗೆಯೂ ಗಮನಹರಿಸುವುದಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದೊಡ್ಡ ನಗರಗಳಲ್ಲಿ ಸಾವಿರಾರು ಜನರು ಅತ್ಯಂತ ಸಣ್ಣ ಭೌಗೋಳಿಕ ಪ್ರದೇಶದಲ್ಲಿ ವಾಸಿಸುತ್ತಾರೆ. ಆದರೆ, ಪಕ್ಕದ ಮನೆಯಲ್ಲಿ ಯಾರು ವಾಸವಿದ್ದಾರೆ ಎಂಬುದು ಕೂಡ ಬಹುತೇಕರಿಗೆ ತಿಳಿದಿರುವುದಿಲ್ಲ. ಆಧುನಿಕ ಬದುಕಿನ ಈ ವಿಪರ್ಯಾಸವನ್ನ ಸುನೀತಾ ಅವರ ವಿಡಿಯೋ ಎತ್ತಿ ತೋರಿಸಿದೆ.

ಹಳ್ಳಿಗಳಲ್ಲಿ ಮನೆಗಳು ದೂರವಿದ್ದರೂ ಜನರ ಮನಸ್ಸುಗಳು ಹತ್ತಿರವಿರುತ್ತವೆ. ಆದರೆ, ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಗೋಡೆಗಳು ಮಾತ್ರ ಹತ್ತಿರವಿರುತ್ತವೆ, ಮನಸ್ಸುಗಳ ನಡುವೆ ಮೈಲಿಗಟ್ಟಲೆ ಅಂತರವಿರುತ್ತದೆ.

ಸಮುದಾಯದ ಉದ್ದೇಶವೇ ವಿಫಲ

ಸಾಮಾನ್ಯವಾಗಿ ದೊಡ್ಡ ರೆಸಿಡೆನ್ಶಿಯಲ್ ಸೊಸೈಟಿಗಳಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್, ಪಾರ್ಕ್ ಮುಂತಾದ ಹಂಚಿಕೊಂಡ ಸೌಲಭ್ಯಗಳನ್ನ ನೀಡಲಾಗಿರುತ್ತದೆ. ಜನರೆಲ್ಲರೂ ಒಟ್ಟಿಗೆ ಸೇರಲಿ, ಪರಸ್ಪರ ಬೆರೆಯಲಿ ಎಂಬುದು ಇದರ ಹಿಂದಿನ ಉದ್ದೇಶ. ಆದರೆ, ಕೇವಲ ಭೌತಿಕವಾಗಿ ಹತ್ತಿರ ವಾಸಿಸಿದ ಮಾತ್ರಕ್ಕೆ ಸಾಮಾಜಿಕ ಬಾಂಧವ್ಯ ಬೆಳೆಯುವುದಿಲ್ಲ ಎಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸಿದೆ.

ಜನರು ಈ ಸೌಲಭ್ಯಗಳನ್ನ ಬಳಸಿದರೂ, ಪರಸ್ಪರ ಅರ್ಥಪೂರ್ಣ ಸಂಭಾಷಣೆ ನಡೆಸುವ ಅಥವಾ ಬೆರೆಯುವ ಗೋಜಿಗೆ ಹೋಗುವುದಿಲ್ಲ.

ನೆಟ್ಟಿಗರ ಪ್ರತಿಕ್ರಿಯೆ

ಸುನೀತಾ ಅವರ ಈ ವಿಡಿಯೋಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಜೀವನದ ಈ ವಾಸ್ತವವನ್ನ ಹಲವರು ಒಪ್ಪಿಕೊಂಡಿದ್ದಾರೆ. "ನೀವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ," ಎಂದು ಒಬ್ಬರು ಕಮೆಂಟ್ ಮಾಡಿದರೆ, "ಸುತ್ತಲೂ ಸಾವಿರಾರು ಜನರಿದ್ದರೂ, ಸಂಪೂರ್ಣವಾಗಿ ಒಂಟಿಯಾದ ಭಾವನೆ ಕಾಡುತ್ತದೆ," ಎಂದು ಮತ್ತೊಬ್ಬರು ಬರೆದಿದ್ದಾರೆ.

"ಹೈ-ರೈಸ್ ಬಿಲ್ಡಿಂಗ್‌ಗಳಲ್ಲಿ ಬದುಕುವುದು ವಿಚಿತ್ರವಾದ ಒಂಟಿತನವನ್ನು ತರುತ್ತದೆ," ಎಂದು ಇನ್ನೊಬ್ಬ ಬಳಕೆದಾರರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಯಾಂತ್ರಿಕವಾಗಿರುವ ಇಂದಿನ ಬದುಕಿನಲ್ಲಿ ಪಕ್ಕದ ಮನೆಯವರೊಂದಿಗೆ ನಾಲ್ಕು ಮಾತುಗಳನ್ನಾಡುವ ಸೌಜನ್ಯವನ್ನ ನಾವು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+