ಲಾಕ್ ಡೌನ್; ಕ್ಯಾಮರಾ ಕಣ್ಣಲ್ಲಿ ಬೆಂಗಳೂರು ರಸ್ತೆಗಳು
ಬೆಂಗಳೂರು, ಏಪ್ರಿಲ್ 23 : ಕೊರೊನಾ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ರಸ್ತೆಗಳ ಅಂದ ಕಣ್ಣಿಗೆ ಮುದ ನೀಡುತ್ತಿದೆ.
ಬೆಂಗಳೂರು ನಗರದ ರಸ್ತೆಗಳೇ ಹಾಗೆ. ಸಾವಿರಾರು ಬಸ್, ಲಕ್ಷಾಂತರ ಬೈಕ್, ಟ್ಯಾಕ್ಸಿ, ಲಾರಿ ಸೇರಿದಂತೆ ವಿವಿಧ ವಾಹನಗಳಿಂದ ಸದಾ ತುಂಬಿರುತ್ತದೆ. ಆದರೆ, ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರು ಹೇಗಿದೆ?.
ಲಾಕ್ ಡೌನ್ ಸಮಯದ ಬೆಂಗಳೂರಿನ ರಸ್ತೆಗಳ Aerial view ನಿಮ್ಮನ್ನು ಬೆರಗುಗೊಳಿಸುತ್ತದೆ. ಅದರಲ್ಲೂ ಹೆಬ್ಬಾಳ ಫ್ಲೈಓವರ್, ನೈಸ್ ರಸ್ತೆ ಬೆಂಗಳೂರಿನ ಮೇಲಿನ ನಿಮ್ಮ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಪಿಟಿಐ ಕ್ಯಾಮರಾಮೆನ್‌ಗಳು ಸೆರೆ ಹಿಡಿದಿರುವ ಬೆಂಗಳೂರಿನ ರಸ್ತೆಗಳನ್ನು ನೀವು ಒಮ್ಮೆ ನೋಡಿ. ಈ ರಸ್ತೆಯಲ್ಲಿಯದು ಎಂದು ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿ.

ಹೆಬ್ಬಾಳ ಫ್ಲೈ ಒವರ್
ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೆಬ್ಬಾಳ ಫ್ಲೈ ಓವರ್ ರಸ್ತೆ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಸುಂದರವಾಗಿ ಕಾಣುತ್ತಿದೆ ನೋಡಿ. ಹೆಬ್ಬಾಳವನ್ನು ಹೀಗೆ ನೋಡಲು ಲಾಕ್ ಡೌನ್ ಅವಧಿಯಲ್ಲಿ ಮಾತ್ರ ಸಾಧ್ಯ.

'ನೈಸ್' ರಸ್ತೆ ಎಷ್ಟು ಸುಂದರ
ಬೆಂಗಳೂರು ಹೊರ ವಲಯದ ನೈಸ್ ರಸ್ತೆ ನೋಡಲು ಅಂದವಾಗಿಯೇ ಇದೆ. ಆದರೆ, ಲಾಕ್ ಡೌನ್ ಪರಿಣಾಮ ವಾಹನಗಳು ಇಲ್ಲವಾದ ಕಾರಣ ಅಂದ ಮತ್ತಷ್ಟು ಹೆಚ್ಚಿದೆ. ಹೀಗೆ ಕಾಣುತ್ತಿದೆ ನೋಡಿ ನೈಸ್ ರಸ್ತೆ.

ಹೊರ ವರ್ತುಲ ರಸ್ತೆ
ಬೆಂಗಳೂರು ನಗರದ ಹೊರಲಯದ ಹೊರ ವರ್ತುಲ ರಸ್ತೆ ಲಾಕ್ ಸಂದರ್ಭದಲ್ಲಿ ಕಂಡಿದ್ದು ಹೀಗೆ. ಸಾಮಾನ್ಯ ದಿನಗಳಲ್ಲಿ ಈ ರಸ್ತೆ ವಾಹನಗಳಿಂದ ತುಂಬಿ ಹೋಗಿರುತ್ತದೆ.

ಈ ರಸ್ತೆ ಯಾವುದು ಗೊತ್ತಾ?
ಲಾಕ್ ಡೌನ್ ಅವಧಿಯಲ್ಲಿ ಕಂಡು ಬಂದ ಹೊರವರ್ತುಲ ರಸ್ತೆಯ ಚಿತ್ರಣ ಇದು. ಸಾಮಾನ್ಯ ದಿನಗಳಲ್ಲಿ ಇಲ್ಲಿ ಎಷ್ಟು ವಾಹನ ಇರುತ್ತದೆ ಒಮ್ಮೆ ನೆನಪು ಮಾಡಿಕೊಳ್ಳಿ.

ಆಡಳಿತ ಶಕ್ತಿ ಕೇಂದ್ರ
ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದ ರಸ್ತೆ ಹೇಗಿದೆ ನೋಡಿ. ವಿಧಾನಸೌಧದ ಮುಂಭಾಗದಲ್ಲಿ ಇಷ್ಟು ಶಾಂತ ಪರಿಸ್ಥಿತಿಯನ್ನು ಕಾಣಲು ಸಾಧ್ಯವೇ ಇಲ್ಲ.












Click it and Unblock the Notifications