ಬೆಂಗಳೂರಿನ 'ಆ ದಿನಗಳನ್ನು' ನೆನೆದ ಎಲ್ ಕೆ ಅಡ್ವಾಣಿ

ಬೆಂಗಳೂರು, ನ. 30: 'ಬೆಂಗಳೂರಿನೊಂದಿಗೆ ನನಗೆ ನಿಕಟ ಸಂಬಂಧವಿದೆ. ತುರ್ತು ಪರಿಸ್ಥಿತಿ ಸಂದರ್ಭ ಇಲ್ಲಿನ ಜೈಲಿನಲ್ಲಿ ಅನೇಕ ತಿಂಗಳುಗಳನ್ನು ಕಳೆದಿದ್ದೇನೆ. ಆ ವೇಳೆ ಪ್ರಮುಖ ನಾಯಕರನ್ನು ಭೇಟಿಯಾಗಿದ್ದೇನೆ. ಜೀವನದ ದಿಕ್ಕು ಬದಲಿಸಲು ಜೈಲು ವಾಸದ ಎರಡು ತಿಂಗಳುಗಳು ಕಾರಣವಾದವು' ಹೀಗೆಂದು ಹೇಳಿದವರು ಬಿಜೆಪಿ ಭೀಷ್ಮ ಎಲ್. ಕೆ. ಅಡ್ವಾಣಿ.

ನಗರದ ಹೆಬ್ಬಾಳದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಭಾನುವಾರ ನಡೆದ ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಮೊಮ್ಮಗ ಮಧುಕೇಶ್ವರ ದೇಸಾಯಿ ವಿವಾಹಕ್ಕೆ ಆಗಮಿಸಿದ ಅಡ್ವಾಣಿ ಮಾಧ್ಯಮದವರೊಂದಿಗೆ ಮಾತನಾಡಿದರು.[ಅಧಿಕಾರ ಇದ್ರೂ ನಿರುದ್ಯೋಗಿಯಂತಾದ ಅಡ್ವಾಣಿ]

advani

ಹಳೆಯ ದಿನಗಳನ್ನು ಮೆಲುಕು ಹಾಕಿದ ಬಿಜೆಪಿ ನಾಯಕ, ಬೆಂಗಳೂರಿಗೆ ಬರದೇ ಬಹಳ ದಿನಗಳಾಗಿದ್ದವು. ಅಲ್ಲದೇ ಬರುವಂಥ ಸಂದರ್ಭಗಳು ಎದುರಾಗಿರಲಿಲ್ಲ. ಹಿಂದೆ ಜನಚೇತನ ಯಾತ್ರೆ ವೇಳೆ ಇಲ್ಲಿಗೆ ಬಂದಿದ್ದೆ. ಈಗ ಮದುವೆಯೊಂದು ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದೆ ಎಂದು ಅಡ್ವಾನಿ ನೆನೆದರು.[ಮದುವೆಯಾದ ಹುಡುಗಿ ಹುಡುಗನಾಗಿ ಬದಲಾದ!]

ಅಡ್ವಾಣಿಯೊಂದಿಗೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಾಜಿ ಸಚಿವ ವಿ ಸೋಮಣ್ಣ, ಗೋವಿಂದ ಕಾರಜೋಳ ಹಾಜರಿದ್ದರು. ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮತ್ತು ಕನ್ನಡ ಹಾಗೂ ತೆಲಗು ಚಿತ್ರರಂಗದ ಸ್ಟಾರ್ ಗಳು ಭಾಗವಹಿಸಲಿದ್ದಾರೆ.

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ಕೂಡ ಆಗಿರುವ ಮಧುಕೇಶ್ವರ ದೇಸಾಯಿ ಅವರು ಕಿರ್ಲೋಸ್ಕರ್ ಸಂಸ್ಥೆಯ ಮಾಲೀಕರ ಮಗಳು ಮತ್ತು ಮುಂಬೈ ಮೂಲದ ಪತ್ರಕರ್ತೆಯನ್ನು ವಿವಾಹವಾದರು. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕಾಫಿಬೋರ್ಡ್ ಲೇಔಟ್‌ನಲ್ಲಿರುವ ಕಿರ್ಲೋಸ್ಕರ್ ಹೌಸ್‌ನಲ್ಲಿ ವಿವಾಹ ನಡೆಯಿತು.

ತುರ್ತು ಪರಿಸ್ಥಿತಿ ಕರಾಳ ನೆನಪು
1976 ರಲ್ಲಿ ಅಂದಿನ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ತುರ್ತು ಪರಿಸ್ಥತಿ ಘೋಷಣೆ ಮಾಡಿತು. ಮಾಧ್ಯಮದ ಹಕ್ಕು ಕಸಿದುಕೊಳ್ಳಲಾಯಿತು. ಅಲ್ಲದೇ ಅನೇಕ ನಾಯಕರನ್ನು ಕಾರಣವಿಲ್ಲದೆ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಇಂಥ ಸಂದರರ್ಭದಲ್ಲಿಯೇ ಲಾಲ್ ಕೃಷ್ಣ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅಂಥವರ ನಡುವಿನ ಸಂಬಂಧ ಬಿಗಿಯಾಗಿದ್ದು.

ಇಂದಿನ ಫ್ರೀಡಂ ಪಾರ್ಕ್ ಅಂದು ಬೆಂಗಳೂರು ಸೆಂಟ್ರಲ್ ಜೈಲಾಗಿತ್ತು. ಅಡ್ವಾಣಿಯವರನ್ನು ಸಹ ಬಂಧಿಸಿ ಇಡಲಾಗಿತ್ತು. ಈ ವೇಳೆ ಭಾರತದ ಅನೇಕ ಪಕ್ಷಗಳ ನಾಯಕರು ಒಂದಾಗಿ ಹೋರಾಡುವ ತೀರ್ಮಾನ ತೆಗೆದುಕೊಂಡರು. ಜನತಾ ಪಕ್ಷದ ಉದಯವಾಗಿದ್ದು ಇಲ್ಲಿಂದಲೇ ಎಂದು ಇತಿಹಾಸ ಹೇಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+