ವಿಸ್ಕಿ, ರಮ್, ಬ್ರಾಂಡಿ ಕುಡಿಯುತ್ತೀರಾ? ಹಾಗಾದರೆ ಈ ಸ್ಟೋರಿ ನೀವು ಓದಲೇಬೇಕು! Healthy Foods
ಜೀವನದಲ್ಲಿ ಏನೈತೆ ಗುರೂ, ಕುಡಿಬೇಕು ಎಂಜಾಯ್ ಮಾಡಬೇಕು... ಹೀಗೆ ನಿಮ್ಮ ಜೊತೆಯಲ್ಲಿ ಇದ್ದವರು ಹೇಳುವುದನ್ನ ಕೇಳಿದ್ದೀರಿ ಹಾಗೇ ಹೊಸ ವರ್ಷದ ದಿನ ಹಲವರು ಕಂಠಪೂರ್ತಿ ಎಣ್ಣೆ ಹಾಕಿ ನಶೆಯಲ್ಲಿ ತೇಲಾಡಿದ್ದೂ ಆಗಿದೆ. ಆದರೆ ದುಶ್ಚಟ ಕಲಿಸುವ ಸ್ನೇಹಿತರು ಅಥವಾ ಜೊತೆಗೆ ಇದ್ದವರು ಅದನ್ನು ಬಿಡುವುದು ಹೇಳಿಕೊಡುವುದೇ ಇಲ್ಲ. ಈ ಕಾರಣಕ್ಕೆ ನಮ್ಮ ಹಿರಿಯರು ಹೇಳ್ತಾ ಇದ್ರು ಆರೋಗ್ಯವೇ ಭಾಗ್ಯ ಅಂತಾ. ಆದರೆ ಈಗ ಆರೋಗ್ಯ ಕೆಡಿಸಿಕೊಳ್ಳಲು ದುಶ್ಚಟಗಳು ಸಾಕು ಎಂಬ ವಾತಾವರಣ ಇದೆ. ನೀವು ಕೂಡ ವಿಸ್ಕಿ, ರಮ್, ಬ್ರಾಂಡಿ ಕುಡಿಯುತ್ತೀರಾ? ಹಾಗಾದರೆ ಈ ಸ್ಟೋರಿ ನೀವು ಓದಲೇಬೇಕು!
ಅಂದಹಾಗೆ ವಿಸ್ಕಿ, ರಮ್, ಬ್ರಾಂಡಿ ಹೀಗೆ ಎಣ್ಣೆಯಲ್ಲಿ ವೆರೈಟಿ ವೆರೈಟಿ ಇದೆ. ಮತ್ತಿಗಾಗಿ ಇದನ್ನ ಕುಡಿದು ಕುಡಿತಕ್ಕೆ ದಾಸರಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇನ್ನೂ ಕೆಲವರು, ಕುಡಿಯದೇ ಇದ್ದರೆ ನಿದ್ದೆ ಬರೋದೆ ಇಲ್ಲ ಅಂತಾ ಹೇಳುತ್ತಾರೆ. ಇದೆಲ್ಲವನ್ನೂ ಹೊರತುಪಡಿಸಿ ನಿಮ್ಮ ಜೀವ ಹಾಗೂ ಆರೋಗ್ಯ ಉಳಿಸಲು ಉತ್ತಮ ಜೀವನ ಶೈಲಿ ಅತ್ಯಗತ್ಯ. ಅದರ ಹೊರತಾಗಿ, ಲಕ್ಷಾಂತರ ರೂಪಾಯಿ ಆಸ್ಪತ್ರೆಗೆ ಸುರಿಯುವ ಪರಿಸ್ಥಿತಿ ಬಂದುಬಿಡುತ್ತದೆ ಬದುಕಿನಲ್ಲಿ.

ಅದರಲ್ಲೂ ಎಣ್ಣೆಯ ದಾಸರಾದವರ ಕುಟುಂಬ ಹಾಗೂ ಬದುಕು ಹಲವು ಸಮಸ್ಯೆ ಎದುರಿಸುತ್ತಾ ಇರುತ್ತದೆ. ಹೀಗಿದ್ದಾಗ ನೀವು ನಿಮ್ಮ ಆರೋಗ್ಯ ಕಾಪಾಡಲು, ಮುಖ್ಯವಾಗಿ ಕುಡಿತದಿಂದ ಹಾಳಾದ ನಿಮ್ಮ ದೇಹದಲ್ಲಿನ ಅಂಗಾಂಗ ರಕ್ಷಣೆಗೆ ಈ ಸುದ್ದಿಯನ್ನ ತಪ್ಪದೆ ಓದಿ. ಲಿವರ್ ಆರೋಗ್ಯ ಸೇರಿ ದೇಹದ ಆರೋಗ್ಯ ರಕ್ಷಣೆಗೆ ಇಲ್ಲಿದೆ ಹಲವು ಉತ್ತಮ ಆಹಾರಗಳು.
ಲಿವರ್ ಆರೋಗ್ಯಕ್ಕೆ ಉತ್ತಮ ಆಹಾರಗಳು
* ಬೇಲದ ಹಣ್ಣು: ನಿಮ್ಮ ಲಿವರ್ ಆರೋಗ್ಯಕ್ಕೆ ಅಂದ್ರೆ ಯಕೃತ್ತಿನ ರಕ್ಷಣೆಗೆ ಬೇಲದ ಹಣ್ಣು ಬಳಕೆ ಉತ್ತಮ ಅಂತಾರೆ ತಜ್ಞರು. ಭಾರತೀಯ ಸಂಸ್ಕೃತಿಯಲ್ಲಿ ಬೇಲದ ಹಣ್ಣಿಗೆ ಪವಿತ್ರ ಸ್ಥಾನ ಇದ್ದು, ಹಿಂದೆಲ್ಲಾ ಪಾನಕಕ್ಕೆ ಇದೇ ಹಣ್ಣು ಬಳಸುತ್ತಿದ್ದರು. ಸಂಧಿವಾತ, ಮಲಬದ್ಧತೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆ ಸರಿಪಡಿಸಲು ಈ ಹಣ್ಣು ಬಳಸುತ್ತಾರೆ.
* ಸಿಟ್ರಸ್ ಹಣ್ಣುಗಳು: ಲಿವರ್ ಆರೋಗ್ಯ ರಕ್ಷಣೆಯಲ್ಲಿ ಸಿಟ್ರಸ್ ಹಣ್ಣುಗಳು ಅತ್ಯುತ್ತಮ ಪಾತ್ರವನ್ನ ವಹಿಸುತ್ತವೆ ಎನ್ನುತ್ತಾರೆ ತಜ್ಞರು. ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಸ್ ಇರುವ ಕಾರಣ ಈ ಎಲ್ಲಾ ಹಣ್ಣುಗಳು ದೇಹಕ್ಕೆ ಉತ್ತಮ. ಇದರ ಜೊತೆಗೆ ಬೆರ್ರಿ, ದ್ರಾಕ್ಷಿ, ಸೇಬು ಕೂಡ ಉತ್ತಮ.
* ಹಸಿರು ಸೊಪ್ಪು: ಎಲ್ಲರ ಮನೆಗಳಲ್ಲೂ ಹಿಂದೆ ಹಸಿರು ಸೊಪ್ಪುಗಳನ್ನ ಹೆಚ್ಚಾಗಿ ಬಳಸುತ್ತಿದ್ದರು. ಇದರಿಂದ ಹಲವು ಪ್ರಯೋಜನ ಇದ್ದು, ಪಾಲಕ್, ದಂಟು, ಅರಿವೆ ಸೇರಿದಂತೆ ಹಲವು ರೀತಿಯ ಹಸಿರು ಸೊಪ್ಪುಗಳು ದೇಹಕ್ಕೆ ಉತ್ತಮ.
* ತರಕಾರಿ ಬಳಕೆ: ನಿಮ್ಮ ನಿತ್ಯದ ಆಹಾರದಲ್ಲಿ ಹೆಚ್ಚಿನ ತರಕಾರಿ ಬಳಕೆ ಮಾಡಿದರೆ ಇದು ಉತ್ತಮ. ಅದರಲ್ಲೂ ಲಿವರ್ ಆರೋಗ್ಯಕ್ಕೂ ಇದು ಬಲ ತುಂಬುತ್ತದೆ. ಬೀಟ್ರೂಟ್ ಹಾಗೂ ಕ್ಯಾರೆಟ್ ಸೇರಿ ಬ್ರೊಕೊಲಿ ಬಳಕೆ ಆರೋಗ್ಯಕ್ಕೆ ಉತ್ತಮ.
* ಮೊಳಕೆ ಕಾಳುಗಳು: ನಿಮ್ಮ ಲಿವರ್‌ಗೆ ಬಲ ತುಂಬುವ ಆಹಾರಗಳ ಪೈಕಿ ಮೊಳಕೆ ಕಾಳುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಯ ಸುಧಾರಣೆ ಕೂಡ ಮಾಡುತ್ತದೆ, ಹೃದಯದ ಆರೋಗ್ಯಕ್ಕೂ ಇದು ಸಹಕಾರಿ.
(ವಿ.ಸೂ.: ಈ ಮಾಹಿತಿ ಪಾಲಿಸುವ ಮೊದಲು ನಿಮಗೆ ಆರೋಗ್ಯ ಸಮಸ್ಯೆಗಳು ಇದ್ದರೆ ವೈದ್ಯರ ಸಲಹೆ ಪಡೆಯಿರಿ.)
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications