ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ Live Updates

|
Google Oneindia Kannada News

ಬೆಂಗಳೂರು, ಜುಲೈ 8: ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಗಳು ನಿರ್ಣಾಯಕ ಘಟ್ಟ ತಲುಪುವ ಸೂಚನೆಗಳು ಕಂಡು ಬರುತ್ತಿವೆ.

ಆನಂದ್ ಸಿಂಗ್ ಅವರ ಶಾಸಕ ಸ್ಥಾನದ ರಾಜೀನಾಮೆಯಿಂದ ಶುರುವಾದ ರಾಜೀನಾಮೆ ಪರ್ವ ಶನಿವಾರ ತೀವ್ರ ಸಂಚಲನ ಮೂಡಿಸುವ ಮಟ್ಟಕ್ಕೆ ಏರಿತ್ತು. ಸೋಮವಾರ ಇನ್ನಷ್ಟು ತಿರುವುಗಳನ್ನು ಪಡೆದುಕೊಂಡಿದೆ.

ಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆ ಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆ

ದೋಸ್ತಿ ಸರ್ಕಾರದ ಅಳಿವು ಉಳಿವಿನ ಬಗ್ಗೆ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸರ್ಕಾರ ಉಳಿಸಿಕೊಳ್ಳುವ ಕಸರತ್ತನ್ನು ಕೈಬಿಟ್ಟಿಲ್ಲ. ಬದಲಾಗಿ ಸಮ್ಮಿಶ್ರ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಪಣದೊಂದಿಗೆ ನಿರಂತರ ಪ್ರಯತ್ನಗಳನ್ನು ನಡೆಸುತ್ತಿವೆ.

live updates karnataka congress jds coalition government crisis

ಮುಖ್ಯವಾಗಿ ಕಾಂಗ್ರೆಸ್ ಪಾಳಯದಲ್ಲಿ ಶಾಸಕರ ಸಾಮೂಹಿಕ ರಾಜೀನಾಮೆಯಿಂದ ತಲ್ಲಣ ಉಂಟಾಗಿದೆ. ಅತೃಪ್ತ ಶಾಸಕರನ್ನು ಹೇಗಾದರೂ ಮಾಡಿ ಸಮಾಧಾನ ಮಾಡುವ ಸಲುವಾಗಿ ಡಿಸಿಎಂ ಪರಮೇಶ್ವರ್ ಸೇರಿದಂತೆ 22 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತ್ಯಾಗಕ್ಕೆ ಮುಂದಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಹೊಸ ಬೆಳವಣಿಗೆಗಳು ಉಂಟಾಗುತ್ತಿವೆ. ಏನೆಲ್ಲ ಆಗುತ್ತಿವೆ? ಮುಂದೇನು ಆಗಲಿದೆ ಎಂಬ ಮಾಹಿತಿಯನ್ನು ಈ ಪುಟದಲ್ಲಿ ಪಡೆದುಕೊಳ್ಳಬಹುದು.

Newest FirstOldest First
6:12 PM, 8 Jul

ನಾನು ಪ್ರಶ್ನೋತ್ತರ ಬ್ಯಾಲೆಟ್‌ಅನ್ನು ಸ್ಪೀಕರ್ ಕಚೇರಿಗೆ ಸಲ್ಲಿಸಬೇಕಿತ್ತು. ಅದರ ಬಗ್ಗೆ ತಿಳಿದುಕೊಳ್ಳಲು ಬಂದಿದ್ದೆ. ನನ್ನ ಕ್ಷೇತ್ರ ಕೊಳ್ಳೇಗಾಲಕ್ಕೆ ನಾಳೆ ತೆರಳುತ್ತಿದ್ದೇನೆ. ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆಯುವುದಿಲ್ಲ. ಮಾಯಾವತಿಯಿಂದ ಯಾವುದೇ ನಿರ್ದೇಶನ ಬಂದಿಲ್ಲ- ಎನ್ ಮಹೇಶ್, ಬಿಎಸ್‌ಪಿ ಶಾಸಕ
6:06 PM, 8 Jul

ನಿಮ್ಮ ನೇತೃತ್ವದ ಸಚಿವ ಸಂಪುಟಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಆರ್. ಶಂಕರ್ ಅವರು ಎಚ್ ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
6:02 PM, 8 Jul

ಸರ್ಕಾರಕ್ಕೆ ನನ್ನ ಬೆಂಬಲ ಇದೆ. ಮೈತ್ರಿ ಸರ್ಕಾರಕ್ಕೆ ಬೆಂಬಲಿಗನಾಗಿ ಇದ್ದೇನೆ. ಅದರಲ್ಲಿ ಬದಲಾವಣೆ ಇಲ್ಲ- ಬಿಎಸ್‌ಪಿ ಶಾಸಕ ಎನ್ ಮಹೇಶ್
5:59 PM, 8 Jul

ಮಧ್ಯಾಹ್ನ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದ ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮುಂಬೈನತ್ತ ಹೊರಟಿದ್ದಾರೆ.
5:53 PM, 8 Jul

ಅತೃಪ್ತರ ಮನವೊಲಿಸಿ ಕರೆತರಲು ಮುಂಬೈನತ್ತ ಡಿಕೆ ಶಿವಕುಮಾರ್ ಹೊರಟಿದ್ದಾರೆ ಎನ್ನಲಾಗಿದೆ.
5:45 PM, 8 Jul

ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
5:44 PM, 8 Jul

ಮುಂಬೈನ ಸೋಫಿಟೆಲ್ ಹೋಟೆಲ್ ಮುಂಭಾಗ ಅತೃಪ್ತ ಶಾಸಕರು ಹಾಗೂ ಬಿಜೆಪಿ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
Advertisement
5:40 PM, 8 Jul

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಅವರೊಂದಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸೌಮ್ಯಾ ರೆಡ್ಡಿ
5:38 PM, 8 Jul

ಸರ್ಕಾರ ಬಹುಮತ ಕಳೆದುಕೊಂಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು- ಯಡಿಯೂರಪ್ಪ.
5:33 PM, 8 Jul

ರಾಜೀನಾಮೆ ನೀಡುವ ಮೊದಲೇ ಬಂಡಾಯ ಶಾಸಕರು ಪಕ್ಷಾಂತರ ಕಾಯ್ದೆ ಸೇರಿದಂತೆ ಕಾನೂನು ಕ್ರಮಗಳ ಸಾಧ್ಯತೆ ಕುರಿತು ಮಾಹಿತಿ ಪಡೆದುಕೊಂಡಿದ್ದರು ಎನ್ನಲಾಗಿದೆ.
5:29 PM, 8 Jul

ಅತೃಪ್ತ ಶಾಸಕರ ಬೆಳವಣಿಗೆಗಳನ್ನು ಮಾಧ್ಯಮಗಳಿಗೆ ನೀಡುವ ಜವಾಬ್ದಾರಿಯನ್ನು ಎಸ್‌ಟಿ ಸೋಮಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
5:27 PM, 8 Jul

ಅಮೆರಿಕದಿಂದ ಬಂದ ಕೂಡಲೇ ರಾಜೀನಾಮೆ ಕೊಡುತ್ತಾರೆ ಎಂದುಕೊಂಡಿದ್ದೆವು. ಅವರಿನ್ನೂ ಕೊಟ್ಟಿಲ್ಲ. ಮತ್ತೆ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ. ಏನು ಮಾಡಿದರೂ ಸರ್ಕಾರ ಉಳಿಸಿಕೊಳ್ಳಲು ಆಗೊಲ್ಲ. ಅವರೇ ಕಚ್ಚಾಡಿಕೊಳ್ಳುತ್ತಿದ್ದಾರೆ- ಜಗದೀಶ್ ಶೆಟ್ಟರ್
Advertisement
5:26 PM, 8 Jul

ವಿಮಾನ ನಿಲ್ದಾಣದಲ್ಲಿಯೇ ಶಂಕರ್ ತಡೆದು ಮನವೊಲಿಸಲು ಡಿಕೆ ಶಿವಕುಮಾರ್ ತಡೆಯಲು ಯತ್ನಿಸಿದರು ಎಂದು ವರದಿಯಾಗಿದೆ.
5:22 PM, 8 Jul

ಗೇಮ್ ಈಸ್ ನಾಟ್ ಓವರ್. ಗೇಮ್ ಈಸ್ ಜಸ್ಟ್ ಬಿಗನ್. ಈಗ ಆಟ ಶುರುವಾಗುತ್ತಿದೆ- ಎಂಬಿ ಪಾಟೀಲ್
5:20 PM, 8 Jul

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ- ಆರ್. ಅಶೋಕ್.
5:18 PM, 8 Jul

ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಹೋಗಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸುತ್ತೇವೆ.- ಜಗದೀಶ್ ಶೆಟ್ಟರ್
5:17 PM, 8 Jul

ಕಾಂಗ್ರೆಸ್ ನಾಯಕರಿಗೆ 24 ಗಂಟೆಗಳ ಗಡುವು ನೀಡಿದ ಕುಮಾರಸ್ವಾಮಿ. ನಾಳೆ ಸಂಜೆಯೊಳಗೆ ಅತೃಪ್ತ ಶಾಸಕರನ್ನು ವಾಪಸ್ ಕರೆಸುವಂತೆ ಗಡುವು ನೀಡಿದ್ದಾರೆ ಎನ್ನಲಾಗಿದೆ.
5:16 PM, 8 Jul

ಸ್ಪೀಕರ್ ರಮೇಶ್ ಕುಮಾರ್ ಅವರು ಬೆಂಗಳೂರಿನತ್ತ ಹೊರಟಿದ್ದಾರೆ. ನಾಳೆ ಕಚೇರಿಗೆ ತೆರಳುವ ನಿರೀಕ್ಷೆ.
5:10 PM, 8 Jul

ಅನರ್ಹತೆಗೊಳಿಸುವ ಪ್ರಕ್ರಿಯೆ ಆರಂಭಿಸುವುದಕ್ಕೆ ಅವಕಾಶವಿಲ್ಲ. ಯಾರದ್ದಾದರೂ ಬಲವಂತವಾಗಿ ಕೊಟ್ಟಿದ್ದಾರಾ? ಸ್ವ ಇಚ್ಛೆಯಿಂದ ಕೊಟ್ಟಿದ್ದಾರಾ ಎಂದು ಪರಿಶೀಲಿಸಲು ಮಾತ್ರ ಸ್ಪೀಕರ್‌ಗೆ ಅವಕಾಶವಿಲ್ಲ. 164-1ಬಿನಲ್ಲಿ ಅನರ್ಹತೆಗೊಳಿಸಲು ಅವಕಾಶವಿಲ್ಲ- ಅಶೋಕ್ ಹಾರನಹಳ್ಳಿ
5:07 PM, 8 Jul

ರಾಜೀನಾಮೆ ಪತ್ರ ಮುಂದಿಟ್ಟುಕೊಂಡು ಅನರ್ಹತೆ ಕ್ರಮ ಆರಂಭಿಸುತ್ತೇವೆ ಎನ್ನುವುದು ಕಾನೂನು ಪ್ರಕಾರ ತಪ್ಪು- ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ
5:01 PM, 8 Jul

ನಾಟಕ ಮುಗಿದಿದೆ. ಈಗ ಆಟ ಶುರುವಾಗಲಿದೆ. 30-40 ಕೋಟಿ ರೂಪಾಯಿ ಕೊಟ್ಟು ಶಾಸಕರನ್ನು ಸೆಳೆದಿದ್ದಾರೆ. ಈಗ ಕಾಂಗ್ರೆಸ್ ಕೂಡ ಶುರುಮಾಡಲಿದೆ. ನೋಡ್ತಾ ಇರಿ ಏನೇನ್ ಆಗುತ್ತದೆ ಅಂತ- ಎಂಬಿ ಪಾಟೀಲ್
4:57 PM, 8 Jul

ನಿಮ್ಮನ್ನು ಯಾರಾದರೂ ಸಂಪರ್ಕಿಸಿದರೆ ನನಗೆ ಮಾಹಿತಿ ನೀಡಿ. ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡೋಣ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಸಭೆಯಲ್ಲಿ ಸೂಚನೆ ನೀಡಿದರು ಎನ್ನಲಾಗಿದೆ.
4:55 PM, 8 Jul

ಜೆಡಿಎಸ್ ಶಾಸಕರೊಂದಿಗೆ ಎಚ್ ಡಿ ಕುಮಾರಸ್ವಾಮಿ ಅವರ ಸಭೆ ಮುಕ್ತಾಯ
4:44 PM, 8 Jul

ಉಮೇಶ್ ಜಾಧವ್ ಅವರು ರಾಜೀನಾಮೆ ನೀಡುವ ಮೊದಲೇ ಅನರ್ಹತೆ ದೂರು ನೀಡಲಾಗಿತ್ತು. ಆದರೂ ಅವರ ರಾಜೀನಾಮೆ ಅಂಗೀಕಾರವಾಗಿತ್ತು.
4:42 PM, 8 Jul

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬವಾದರೂ ಕಾನೂನು ಪ್ರಕ್ರಿಯೆ ನಡೆಸುವ ಸಂಬಂಧ ಕೂಡ ಬಿಎಸ್‌ವೈ ಮತ್ತು ಬೋಪಣ್ಣ ಚರ್ಚಿಸಿದ್ದಾರೆ.
4:37 PM, 8 Jul

ಅಹ್ಮದ್ ಪಟೇಲ್ ನೇತೃತ್ವದಲ್ಲಿ ಸಂಜೆ ಏಳು ಗಂಟೆಗೆ ಎಐಸಿಸಿ ನಾಯಕರಿಂದ ಸಭೆ.
4:32 PM, 8 Jul

ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ. ಬೆಂಗಳೂರಿಗೆ ಆಗಮಿಸುತ್ತಿರುವ ಬಿಜೆಪಿ ಮುಖಂಡರು.
4:25 PM, 8 Jul

ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಕೆಜಿ ಬೋಪಯ್ಯ. ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಾಧ್ಯತೆಗಳ ಕುರಿತು ಅವರು ಚರ್ಚಿಸುವ ಸಾಧ್ಯತೆ.
4:22 PM, 8 Jul

ಆಪರೇಷನ್ ಕಮಲದ ವಿರುದ್ಧ ರಾಜ್ಯಾದ್ಯಂತ ನಾಳೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
4:21 PM, 8 Jul

ಕುಮಾರಸ್ವಾಮಿ ಅವರೇ ಸಿಎಂ ಆಗಿರಬೇಕು. ಇಂದು ಸಂಜೆ ವೇಳೆಗೆ ಎಲ್ಲವನ್ನೂ ತೀರ್ಮಾನಿಸುತ್ತೇವೆ- ಜಿಟಿ ದೇವೇಗೌಡ
READ MORE

English summary
Karnataka coalition government of Congress and JDS crisis continues. More developments are happening in the state politics. Here is the live updates. ಸರ್ಕಾರ ಉಳಿಯುತ್ತಾ? ಉರುಳುತ್ತಾ? ನಿರಂತರ ಮಾಹಿತಿ Live Updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X