ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂಡಲ್ಸ್ ಜೊತೆ ಅರಿಯದೆ ಇಲಿ ಪಾಷಾಣ ಸೇವಿಸಿ ಬಾಲಕಿ ಸಾವು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 31: ಮಸಾಲೆ ಪುಡಿ ಎಂದುಕೊಂಡು ಇಲಿ ಪಾಷಾಣವನ್ನು ನೂಡಲ್ಸ್‌ ಜೊತೆ ಬೇಯಿಸಿಕೊಂಡು ತಿಂದು 10 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಬಾಬುಸಾಬ್‌ಪಾಳ್ಯ ಸಮೀಪದ ಫ್ಲವರ್ ಗಾರ್ಡನ್ ಪ್ರದೇಶದ ನಿವಾಸಿ ಶಂಕರ್ ಮತ್ತು ಗಾಂಧಿಮತಿ ಎಂಬುವರ ಪುತ್ರಿ ಜೆಸ್ಸಿಕಾ ಮೃತ ಬಾಲಕಿ. ಇವಳ ಸಹೋದರಿ ಜೆನ್ನಿಫರ್ (12) ಕೂಡ ನೂಡಲ್ಸ್ ತಿಂದಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಡೆದಿದ್ದೇನು? : ಮನೆ ಕೆಲಸ ಮಾಡುತ್ತಿರುವ ಗಾಂಧಿಮತಿ ಮನೆಗೆ ಬಂದಾಗ ಮಕ್ಕಳಾದ ಜೆಸ್ಸಿಕಾ, ಜೆನ್ನಿಫರ್ ಇಬ್ಬರೂ ತಮಗೆ ಹಸಿವಾಗುತ್ತಿದೆ ಎಂದು ಹೇಳಿದ್ದಾರೆ. ಆದ್ದರಿಂದ ಗಾಂಧಿಮತಿ ಅವರು ಮಕ್ಕಳಿಗೆ ನೂಡಲ್ಸ್ ಬೇಯಿಸಿಕೊಡಲು ತೀರ್ಮಾನಿಸಿದರು. ನೂಡಲ್ಸ್ ಪ್ಯಾಕೆಟ್‌ನಂತೆಯೇ ಕಾಣುತ್ತಿದ್ದ ಮತ್ತೊಂದು ಸಣ್ಣ ಪಾಕೆಟ್‌ನಲ್ಲಿದ್ದ ಪೌಡರ್‌ನ್ನು ನೂಡಲ್ಸ್ ಜೊತೆ ಹಾಕಿ ಕುದಿಸಿದ್ದರು. ನಂತರ ಮೂವರೂ ನೂಡಲ್ಸ್ ಸೇವಿಸಿದ್ದರು.

rat

ಆದರೆ, ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಎಲ್ಲರಿಗೂ ವಾಂತಿ ಆರಂಭವಾಗಿದೆ. ತಕ್ಷಣ ಅತ್ತೆ ನೆರವಿನೊಂದಿಗೆ ಹೆಣ್ಣೂರು ಬಂಡೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ತಾಯಿ ಹಾಗೂ ಮಕ್ಕಳಿಬ್ಬರೂ ದಾಖಲಾಗಿದ್ದರು. ಚಿಕಿತ್ಸೆ ಪಡೆದ ನಂತರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿತ್ತು. ವೈದ್ಯರು ಇನ್ನಷ್ಟು ಚಿಕಿತ್ಸೆ ಬೇಕು ಎಂದು ಹೇಳಿದ್ದರೂ ಕೇಳದೆ ಮನೆಗೆ ವಾಪಸ್ ಬಂದಿದ್ದರು.

ಆದರೆ, ಮಂಗಳವಾರ ಬೆಳಗಿನ ಜಾವ ಬಾಲಕಿ ಜೆಸ್ಸಿಕಾಗೆ ಮತ್ತೆ ವಾಂತಿ ಆರಂಭವಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಳು.

ಮಸಾಲೆ ಪ್ಯಾಕೆಟ್‌ನಲ್ಲಿ ಇಲಿ ಪಾಷಾಣ ಹೇಗೆ ಬಂತು? : ಮನೆಯಲ್ಲಿ ಇಲಿ ಕಾಟ ಅತಿಯಾಗಿದ್ದ ಕಾರಣ ಪಾಷಾಣ ತಂದಿದ್ದರು. ಸ್ವಲ್ಪ ಪಾಷಾಣ ಇಲಿಗೆ ಹಾಕಿ ಉಳಿದಿದ್ದನ್ನು ಖಾಲಿಯಾಗಿದ್ದ ನೂಡಲ್ಸ್ ಕವರ್‌ನಲ್ಲಿ ಹಾಕಿಟ್ಟಿದ್ದರು. ಆದರೆ, ಅದನ್ನು ನೂಡಲ್ಸ್ ಪಾಕೆಟ್ ಪಕ್ಕದಲ್ಲಿಯೇ ಇಟ್ಟಿದ್ದೇ ಮಗಳ ಜೀವಕ್ಕೆ ಮುಳುವಾಗಿದೆ.

English summary
A 10 year old girl died after consuming noodles suspected to have been laced with rat poison. Her mother and cousin also fell ill after eating noodles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X