Beer Price Hike: ಬಿಯರ್‌ ಪ್ರಿಯರಿಗೆ ಬೆಲೆ ಏರಿಕೆಯ ಕಹಿ ಸುದ್ದಿ, ಯಾವ ಮದ್ಯ ದರ ಎಷ್ಟು ಹೆಚ್ಚಳ ಇಲ್ಲಿದೆ ಮಾಹಿತಿ ?!

Beer Price Hike: ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಶಾಕ್‌ ನೀಡಿದೆ. ರಾಜ್ಯದಲ್ಲಿ ಬಿಯರ್‌ ಸೇರಿದಂತೆ ಹಲವು ಮದ್ಯಗಳ ಬೆಲೆ ಹೆಚ್ಚಳವಾಗಲಿದೆ. ಬಿಯರ್‌ ಬೆಲೆ ಹೆಚ್ಚಳ ಮಾಡುವ ಮೂಲಕ ಕರ್ನಾಟಕ ಸರ್ಕಾರವು ಮೂರನೇ ಬಾರಿ ಮದ್ಯ ಪ್ರಿಯರಿಗೆ ಶಾಕ್‌ ನೀಡಿದೆ. ಯಾವ ಬಿಯರ್‌ ಬೆಲೆ ಹೆಚ್ಚಳವಾಗಿದೆ ಹಾಗೂ ಯಾವೆಲ್ಲ ಬಿಯರ್‌ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್‌ ನೀಡುವುದನ್ನು ಮುಂದುವರಿಸಿದೆ. ಬಿಯರ್‌ ಬೆಲೆಯನ್ನು ಈಗಾಗಲೇ ಕರ್ನಾಟಕ ಸರ್ಕಾರವು ಮೂರು ಬಾರಿ ಹೆಚ್ಚಳ ಮಾಡಿ ಶಾಕ್‌ ನೀಡಿದೆ. ಇದೀಗ ಮತ್ತೊಮ್ಮೆ ಅದೂ ಸಹ ಪ್ರತಿ ಮೂರು ತಿಂಗಳಿಗೊಮ್ಮೆ ಬೆಲೆ ಏರಿಕೆ ಮಾಡುವುದಕ್ಕೆ ಮುಂದಾಗಿದೆ. ಈ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ ಮದ್ಯದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದು. ಮದ್ಯ ಲವರ್‌ಗಳ ಜೇಬು ಸುಡುವುದು ಫಿಕ್ಸ್‌ ಅಂತಲೇ ಹೇಳಲಾಗುತ್ತಿದೆ. ಬಿಯರ್‌ ಕಂಪನಿಗಳು ಹಾಗೂ ಮದ್ಯ ಪ್ರಿಯರ ವಿರೋಧದ ನಡುವೆ ಸದ್ದಿಲ್ಲದೆ ಬಿಯರ್‌ ಬೆಲೆ ಹೆಚ್ಚಳ ಮಾಡಲಾಗುತ್ತಿದೆ.

Liquor and Beer Price Hike in Karnataka Which liquor Prices Increase How much

ಹೌದು ಕರ್ನಾಟಕ ಸರ್ಕಾರವು ಬಿಯರ್‌ನ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಲು ಮುಂದಾಗಿದೆ. ಬಿಯರ್‌ ಮೇಲೆ ಶೇಕಡಾ 10 ರಷ್ಟು ಅಬಕಾರಿ ಟ್ಯಾಕ್ಸ್‌ ಹೆಚ್ಚಳವಾಗಲಿದೆ. ಇದರಿಂದ ಪ್ರೀಮಿಯಂ ಬಿಯರ್‌ಗಳ ಬೆಲೆಯು 10ರಿಂದ15 ರೂಪಾಯಿ ಹೆಚ್ಚಳವಾಗಲಿದೆ. ಕರ್ನಾಟಕ ಸರ್ಕಾರವು ಈ ಬಾರಿಯೂ ನೆರೆಯ ರಾಜ್ಯಗಳ ಬೆಲೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಬೆಲೆ ಕಡಿಮೆ ಇದೆ ಎಂದೂ ಹಾಗೂ ಅಬಕಾರಿ ತೆರಿಗೆ ಸಂಗ್ರಹ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಈ ಉಪಾಯವನ್ನು ಕಂಡುಕೊಂಡಿದೆ. ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಟ್ಯಾಕ್ಸ್‌ ಶೇ.10% ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.

ಯಾವ ಬಿಯರ್‌ನ ಬೆಲೆ ಎಷ್ಟು ಹೆಚ್ಚಳವಾಗಲಿದೆ: ರಾಜ್ಯದಲ್ಲಿ ಬಿಯರ್‌ ಮಾರಾಟ ಸಾಮಾನ್ಯವಾಗಿಯೇ ಹೆಚ್ಚಾಗಿದೆ. ಆದರೆ, ರಾಜ್ಯ ಸರ್ಕಾರವು ನಿರಂತರವಾಗಿ ಬಿಯರ್‌ ಬೆಲೆಯನ್ನು ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಯರ್‌ ಮಾರಾಟವು ಗಣನೀಯವಾಗಿ ಕುಸಿತ ಕಂಡಿದೆ. ಇದೀಗ ಹಲವು ಬಿಯರ್‌ಗಳ ಬೆಲೆಯು ಹೆಚ್ಚಳವಾಗುವ ಸಾಧ್ಯತೆ ಇದೆ. ಅದರ ವಿವರ ನೋಡೋಣ..

* ಪ್ರೀಮಿಯಂ ಹಾಗೂ ವಿವಿಧ ಬಿಯರ್‌ ಬ್ರ್ಯಾಂಡ್‌ಗಳ ಬೆಲೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಏರಿಕೆಯಾಗಲಿದೆ.

* ಪ್ರತಿ ಬಿಯರ್‌ ಬಾಟಲಿಗೆ ಅಂದಾಜು 10ರೂ.ಯಿಂದ 15 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ.

* ಪ್ರೀಮಿಯಂ ಬ್ರ್ಯಾಂಡ್‌ಗಳ ಬಿಯರ್‌ ಬೆಲೆಯು ಬಾಟಲಿಗೆ 10 ರೂ. ಜಾಸ್ತಿ

* ಕಡಿಮೆ ಬೆಲೆಯ ಅಥವಾ ಸ್ಥಳೀಯ ಬ್ರ್ಯಾಂಡ್‌ಗಳ ಬಿಯರ್‌ ಬೆಲೆಯು 5 ರೂಪಾಯಿ ವರೆಗೆ ಅಥವಾ ಅದಕ್ಕಿಂತ ಜಾಸ್ತಿ ಹೆಚ್ಚಳವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+