ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟದಲ್ಲಿ ಕಾರಿನ ಮೇಲೆ ಸಿಂಹಗಳ ದಾಳಿ

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ಅಂಗಳದಲ್ಲಿ ಸಿಂಹಗಳು ಸಫಾರಿ ವಾಹನದ ಮೇಲೆ ದಾಳಿ ಮಾಡಿದೆ. ಇದು ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ.

ಜೈವಿಕ ಉದ್ಯಾನವನದ ಗ್ರ್ಯಾಂಡ್ ಸಫಾರಿಯಲ್ಲಿನ ಸಿಂಹಗಳು ಇನ್ನೋವಾ ವಾಹನ ಮೂಲಕ ಪ್ರವಾಸಿಗರು ಸಫಾರಿಯೊಳಗೆ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಸಿಂಹಗಳು ವಾಹನದ ಮೇಲೆ ದಾಳಿ ಮಾಡಿವೆ. ವಾಹನದ ಮೇಲೆಲ್ಲಾ ಹತ್ತಿ ಪ್ರವಾಸಿಗರಿಗೆ ಭಯ, ಆತಂಕ ಹುಟ್ಟಿಸಿವೆ. ಒಂದು ಗಂಡು ಸಿಂಹ ಮತ್ತು ಹೆಣ್ಣು ಸಿಂಹ ಕಾರಿನ ಮೇಲೆ ದಾಂಧಲೆ ನಡೆಸಿವೆ.[ಬನ್ನೇರುಘಟ್ಟದಲ್ಲಿ ಆನೆ ದಾಳಿ, ಮಹಿಳೆ ಬಲಿ]

Lion attacks on safari vehicle in bannerghatta park

ವಾಹನಗಳು ಸಫಾರಿಯೊಳಗೆ ಪ್ರವೇಶಿಸಿದ ಬಳಿಕ ಸ್ವಲ್ಪಹೊತ್ತಿನಲ್ಲಿಯೇ ಸಿಂಹಗಳು ಹಿಂದಿನಿಂದ ಓಡಾಟ ನಡೆಸಿವೆ. ಅದರಲ್ಲಿ ಗಂಡು ಸಿಂಹ ಹಿಂಬದಿಯಿಂದ ಕಾರಿನ ಮೇಲೆ ಹತ್ತಲು ಯತ್ನಿಸಿದೆ. ಹೀಗಾಗಿ ಕಾರಿನಲ್ಲಿದ್ದ ಏಳು ಮಂದಿ ಪ್ರವಾಸಿಗರು ಈ ಘಟನೆಯಿಂದ ಹೆದರಿದರು. ನಂತರ ಚಾಲಕ ಮೆಲ್ಲನೆ ಕಾರನ್ನು ದೂರ ತೆಗೆದುಕೊಂಡು ಹೋದ ಬಳಿಕ ಸಿಂಹಗಳು ದೂರಾದವರು ಪ್ರವಾಸಿಗರು ನಿಟ್ಟುಸಿರು ಬಿಟ್ಟರು.

Lion attacks on safari vehicle in bannerghatta park

ಇನ್ನು ಪ್ರವಾಸಿಗರು ಅಪಾಯದಿಂದ ಪಾರಾಗಿ ಪ್ರತಿಕ್ರಯಿಸಿದ್ದು, ' ಇಂತಹ ಚಿಕ್ಕ ಚಿಕ್ಕ ಅವಘಡಗಳು ಸಂಭವಿಸಿದಾಗಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕು ಇಲ್ಲವಾದರೆ ಮುಂದೊಂದು ದಿನ ನಡೆಯುವ ದೊಡ್ಡ ಪ್ರಮಾದಕ್ಕೆ ಅಧಿಕಾರಿಗಳೆ ಹೊಣೆಯಾಗಬೇಕಾಗುತ್ತದೆ ಎಂದಿದ್ದಾರೆ.

ಇನ್ನೋವಾ ಕಾರಿನ ಗ್ಲಾಸ್ ಗಳು ಏನಾದರೂ ಹೊಡೆದು ಹೋಗಿದ್ದಿದ್ದರೆ ಅಲ್ಲಿ ಒಂದು ಮಾರಣಾಂತಿಕ ಘಟನೆಯೇ ನಡೆದು ಹೋಗುತ್ತಿತ್ತು ಎಂದು ಪ್ರವಾಸಿಗರು ಭಯಭೀತರಾಗಿ ನುಡಿದರು.

English summary
a lion leapt at a safari vehicle at the Bannerghatta Biological Park in Bengaluru. Two lions followed a safari vehicle as it slowed down for tourists to have a closer look on Monday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X