Bengaluru Weather: ಬೆಂಗಳೂರಿಗೆ ಭಾರೀ ಮಳೆ ಎಚ್ಚರಿಕೆ, 2 ದಿನ 'ಯೆಲ್ಲೋ ಅಲರ್ಟ್' ಹವಾಮಾನ ಮುನ್ಸೂಚನೆ

ಬೆಂಗಳೂರು, ಜೂನ್ 12: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ನಿತ್ಯ ಮಳೆಯ ದರ್ಶನವಾಗುತ್ತಿದೆ. ಹವಾಮಾನ ವೈಪರೀತ್ಯಗಳ ಬದಲಾವಣೆ ಕಾರಣದಿಂದ ಕಳೆದ ಮೂರು ನಾಲ್ಕು ದಿನಗಳಿಂದ ಮುಂಗಾರು ಮಳೆ ರಾಜಧಾನಿಯಲ್ಲಿ ಸಕ್ರಿಯವಾಗಿದೆ. ಈವರೆಗೆ ಹಗುರದಿಂದ ಸಾಧಾರಣವಾಗಿ ಸುರಿಯುತ್ತಿತ್ತು, ನಗರದಲ್ಲಿ ಮುಂದಿನ ಎರಡು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Bengaluru Forecast) ತಿಳಿಸಿದೆ.

ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಮಂಡಲದಲ್ಲಿ ಚಂಡಮಾರುತ ರೂಪದ ತೀವ್ರ ಬಿರುಗಾಳಿ ಸೃಷ್ಟಿಯಾಗಿದೆ. ಈ ವೈಪರೀತ್ಯವು ತೀವ್ರತೆ ಪಡೆದುಕೊಂಡಿದೆ. ಇದರೊಂದಿಗೆ ಆಂಧ್ರ ಪ್ರದೇಶದ ಉತ್ತರ ಕರಾವಳಿಯಿಂದ ಮಹಾರಾಷ್ಟ್ರದ ದಕ್ಷಿಣ ಕರಾವಳಿವರೆಗೆ ಸ್ಟ್ರಫ್ ಉಂಟಾಗಿದೆ. ಈ ವೈಪರೀತ್ಯಗಳು ಸಮುದ್ರ ಮೇಲ್ಮೈನಿಂದ 3.4 ಕಿಲೋ ಮೀಟರ್ ದಷ್ಟು ಎತ್ತರದಲ್ಲಿವೆ. ಇದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ಸುರಿಯಲಿದೆ.

Likely Light to Moderate Rain Alert For Bengaluru Across City From Today Weather Forecast

ಬೆಂಗಳೂರಿನ ಹವಾಮಾನ ಕೇಂದ್ರದ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ಅವರು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಇಂದು ಜೂನ್ 12 ಗುರುವಾರ ಮತ್ತು ಜೂನ್ 13 ರಂದು ಶುಕ್ರವಾರ ನಗರದ ಕೆಲವೆಡೆ ಸಾಧಾರಣ ಮಳೆ ಆಗಲಿದ್ದು, ಇನ್ನೂ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ನೀಡಲಾಗಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದ ಎಂದು ತಿಳಿಸಿದ್ದಾರೆ.

ಬೆಂಗಳೂರು ತಾಪಮಾನ ಮುನ್ಸೂಚನೆ ವರದಿ

ಈ ಮಹಾಮಳೆ ಕೇವಲ ಎರಡು ದಿನಕ್ಕೆ ಸಿಮೀತವಾಗುವುದಿಲ್ಲ. ಬದಲಾಗಿ ಶುಕ್ರವಾರದ ನಂತರ ಜೂನ್ 16ರವರೆಗೂ ಸಾಧಾರಣವಾಗಿ ಮುಂದುವರಿಯಲಿದೆ. ನಾಲ್ಕೈದು ದಿನಗಳಿಂದ ನಗರದಲ್ಲಿ ನಿತ್ಯ ಮಬ್ಬು ವಾತಾವರಣ ಹಾಗೂ ತಂಪು ಗಾಳಿ ಬೀಸುತ್ತಿದೆ. ಸ್ಪಷ್ಟ ಮಳೆಗಾಲ ವಾತಾವರಣ ಕಂಡು ಬರುತ್ತಿದೆ. ಇಂದು ಗುರುವಾರ ಬೆಳಗ್ಗೆ ಸಹ ಮೋಡ ಕವಿದ ವಾತಾವರಣ ಕಂಡು ಬಂದಿದೆ. ನಗರದ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಐಎಂಡಿ ತಿಳಿಸಿದೆ.

ನೆನ್ನೆ ಸುರಿದ ಮಳೆ ವಿವರ, ಎಚ್ಚರಿಕೆ ಅಗತ್ಯ

ಕಳೆದ 24 ಗಂಟೆಗಳಲ್ಲಿ ವಿ.ನಾಗೇನಹಳ್ಳಿ 18 ಮಿ.ಮಿ., ಹೊರಮಾವು 16 ಮಿ.ಮಿ., ಬಸವನಪುರ 14 ಮಿ.ಮಿ., ಪುಲಕೇಶಿನಗರ 13 ಮಿ.ಮಿ., ವಿದ್ಯಾರಣ್ಯಪುರ 12 ಮಿ.ಮಿ., ಎಚ್‌ಎಎಲ್ ವಿಮಾನ ನಿಲ್ದಾಣ 11, ಎಚ್ಎಸ್‌ಆರ್ ಬಡಾವಣೆಯಲ್ಲಿ 10 ಮಿಲಿ ಮೀಟರ್ ಮಳೆ ಆಗಿದೆ. ನಗರದ ಅಲ್ಲಲ್ಲಿ ವಾಟಾರ್ ಲಾಗಿಂಗ್ ಸಮಸ್ಯೆ ಆಗಿದೆ. ರಸ್ತೆಗಳು ಜಾಲವೃತವಾಗುವುದು ಪ್ರತಿ ಮಳೆಗೆ ಸಾಮಾನ್ಯ ಎಂಬಂತ ಸ್ಥಿತಿ ಬೆಂಗಳೂರಿನಲ್ಲಿದೆ. ಮುನ್ಸೂಚನೆ ಪ್ರಕಾರ ಸುರಿಯಲಿರುವ ಜೋರು ಮಳೆಗೆ ಬಿಬಿಎಂಪಿ ಹಾಗೂ ಜನರ ಎಚ್ಚರಿಕೆ ವಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+