ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Rains : ಬೆಂಗಳೂರಲ್ಲಿ 3 ದಿನ ತುಂತುರು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

|
Google Oneindia Kannada News

ಬೆಂಗಳೂರು, ನವೆಂಬರ್ 21: ಹವಾಮಾನದಲ್ಲಿ ಪದೇ ಪದೆ ಉಂಟಾಗುತ್ತಿರುವ ಬದಲಾವಣೆಗಳಿಂದ ವಾತಾವರಣದಲ್ಲಿ ಚಳಿ-ಮಳೆ-ಬಿಸಿಲಿನ ಏರಿಳಿತ ಮುಂದುವರಿದಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಮೂರು ದಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

ನಗರದಲ್ಲಿ ಎರಡು ವಾರದಿಂದಲೂ ಮಳೆ, ಬೆಳಗ್ಗೆ ಚಳಿ ಜೊತೆಗೆ ಅತ್ಯಧಿಕ ಮಂಜು ಕವಿದ ವಾತಾವರಣ ದಾಖಲಾಗುತ್ತಿದೆ. ಮಧ್ಯಾಹ್ನ ಬಿಸಿಲು ಕಂಡು ಬರುತ್ತಿದೆ. ಸದ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನವೆಂಬರ್ 22 ರಿಂದ ನ.24ರವರೆಗೆ ನಗರದಲ್ಲಿ ಮಳೆ ಬೀಳಲಿದೆ.

ರಾಜ್ಯ ರಾಜಧಾನಿಯಲ್ಲಿ ಇನ್ಮುಂದೆ ಮಳೆ ಇಳಿಕೆ, ಚಳಿ-ಬಿಸಿಲು ಕ್ರಮೇಣ ಏರಿಕೆ: ಹವಾಮಾನ ವರದಿ ರಾಜ್ಯ ರಾಜಧಾನಿಯಲ್ಲಿ ಇನ್ಮುಂದೆ ಮಳೆ ಇಳಿಕೆ, ಚಳಿ-ಬಿಸಿಲು ಕ್ರಮೇಣ ಏರಿಕೆ: ಹವಾಮಾನ ವರದಿ

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಮಧ್ಯಾಹ್ನ ಇಲ್ಲವೆ ಸಂಜೆ ನಂತರ ಒಂದೆರಡು ಕಡೆಗಳಲ್ಲಿ ಜಿಟಿ ಜಿಟಿ ಇಲ್ಲವೇ ಹಗುರದಿಂದ ಸಾಧಾರಣವಾಗಿ ಮಳೆ ಬೀಳಲಿದೆ. ಇದೇ ವೇಳೆ ಬಹಳಷ್ಟು ಪ್ರದೇಶಗಳಲ್ಲಿ ತುಂತುರು ಮಳೆ ಸುರಿಯುವ ಮುನ್ಸೂಚನೆ ಇದೆ. ಮಬ್ಬು ವಾತಾವರಣ ಇದ್ದರೂ ಚಳಿ ತುಸು ಕಡಿಮೆ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Light to Moderate rain expected in Bengaluru for Next 3 days

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಒಣ ಹವೆ ಮುಂದುವರಿದಿತ್ತು. ಬೆಂಗಳೂರಲ್ಲಿ ನವೆಂಬರ್ 18, 19 ರಂದು ದಿಢೀರ್ ಚಳಿ ಹೆಚ್ಚಾಗಿತ್ತು. ನೆಲಮಂಗಲ, ಕೆಂಗೇರಿ, ವೈಟ್‌ಫಿಲ್ಡ, ವಿಜಯನಗರ ಹೀಗೆ ನಗರದ ಬಹುತೇಕ ಎಲ್ಲ ಕಡೆಗಳಲ್ಲಿ ದಟ್ಟ ಮಂಜು ಆವರಿಸಿತ್ತು. ಇದೀಗ ಮಳೆ ಬರುವ ಮುನ್ಸೂಚನೆ ಹಿನ್ನೆಲೆ ಸ್ವಲ ಪ್ರಮಾಣದಲ್ಲಿ ಚಳಿ, ಮಂಜು ಕಡಿಮೆಯಾಗುತ್ತಿದೆ.

ಗರಿಷ್ಠ ತಾಪಮಾನದಲ್ಲಿ ತುಸು ಬದಲಾವಣೆ

ಮುಂದಿನ ಎರಡುಮೂರು ದಿನ ಮಳೆ ಸುರಿದರೆ ಚಳಿ ಹಾಗೂ ಮಂಜಿನ ಪ್ರಮಾಣ ಇನ್ನಷ್ಟು ತಗ್ಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬೆಂಗಳೂರಿನ ಕನಿಷ್ಠ ತಾಪಮಾನ ಸಹಜ ಸ್ಥಿತಿಗೆ ಬರಲಿದ್ದು, ಗರಿಷ್ಠ ತಾಪಮಾನದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ. ಮುಂದಿನ ಮೂರು ದಿನ ನಗರದಲ್ಲಿ ಕನಿಷ್ಠ ತಾಪಾಮಾನ 18-19ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಗರಿಷ್ಠ ತಾಪಮಾನ 25-26ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ನಂತರ ಎರಡು ದಿನ ಒಣ ಹವೆಯ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಕೇಂದ್ರದ ವರದಿ ಮಾಹಿತಿ ನೀಡಿದೆ.

English summary
Light to Moderate rain expected in Bengaluru for 3 days from Tuesday, Bengaluru Meteorological Center forecast said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X