3 ನಗರಗಳ ಪಯಣ, ಬದಲಾದ ಬದುಕು; ಬೆಂಗಳೂರಿನಿಂದ ದುಬೈವರೆಗೆ ಮಹಿಳೆಯ ಸ್ಪೂರ್ತಿದಾಯಕ ಕಥೆ

Life Lessons: ಒಂದು ನಗರ ಬದಲಾಯಿಸುವುದು ಎಂದರೆ ಕೇವಲ ವಿಳಾಸ ಬದಲಾವಣೆ ಅಲ್ಲ. ಹೊಸ ನಗರ, ಹೊಸ ಜನರು, ಹೊಸ ಸಂಸ್ಕೃತಿ ಹಾಗೂ ಹೊಸ ಜವಾಬ್ದಾರಿಗಳು ವ್ಯಕ್ತಿಯ ಜೀವನದ ದೃಷ್ಟಿಕೋನವನ್ನೇ ಬದಲಿಸಬಹುದು. ಇದಕ್ಕೆ ಉದಾಹರಣೆಯಾಗಿ ಮಹಿಳೆಯೊಬ್ಬರು ಬೆಂಗಳೂರು, ಹೈದರಾಬಾದ್ ಹಾಗೂ ದುಬೈನಲ್ಲಿ ಕಳೆದ ತಮ್ಮ ಜೀವನದ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಂಧ್ರಪ್ರದೇಶದ ಸಣ್ಣ ಗ್ರಾಮದಲ್ಲಿ ಹುಟ್ಟಿ, ತೆಲುಗು ಮಾಧ್ಯಮ ಶಾಲೆಯಲ್ಲಿ ಓದಿದ್ದ ತೇಜಸ್ವಿನಿ ರೆಡ್ಡಿ ತಮ್ಮ ಜೀವನದಲ್ಲಿ ಮೂರು ನಗರಗಳು ಹೇಗೆ ವಿಭಿನ್ನ ಪಾಠಗಳನ್ನು ಕಲಿಸಿವೆ ಎಂಬುದನ್ನು Instagramನಲ್ಲಿ ಹಂಚಿಕೊಂಡಿದ್ದಾರೆ.

Life Lessons Bengaluru Showed Me the World Hyderabad Taught Me Independence Woman Shares Lessons

'ಬೆಂಗಳೂರು ನನಗೆ ಜಗತ್ತನ್ನು ತೋರಿಸಿತು'

ತಮ್ಮ 10ನೇ ವಯಸ್ಸಿನಲ್ಲಿ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ಜೀವನದಲ್ಲಿ ದೊಡ್ಡ ಬದಲಾವಣೆಯಾಯಿತು ಎಂದು ತೇಜಸ್ವಿನಿ ಹೇಳಿದ್ದಾರೆ. ಸಣ್ಣ ಗ್ರಾಮದ ಸೀಮಿತ ಜಗತ್ತಿನಿಂದ ಬೆಂಗಳೂರಿಗೆ ಬಂದ ಬಳಿಕ ಹಲವು ಭಾಷೆಗಳು, ಸಂಸ್ಕೃತಿಗಳು ಮತ್ತು ವಿಭಿನ್ನ ಹಿನ್ನೆಲೆಯ ಜನರನ್ನು ಪರಿಚಯಿಸಿಕೊಂಡೆ ಎಂದು ತಿಳಿಸಿದ್ದಾರೆ.

'ನನ್ನ ಜಗತ್ತು ಒಂದು ಗ್ರಾಮವಾಗಿದ್ದರೆ, ಬೆಂಗಳೂರು ನನಗೆ ಆ ಜಗತ್ತಿನಾಚೆಗಿನ ಪ್ರಪಂಚವನ್ನು ತೋರಿಸಿತು' ಎಂಬ ಅರ್ಥದಲ್ಲಿ ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ.

ಹೈದರಾಬಾದ್‌ನಲ್ಲಿ 'ಅಡಲ್ಟಿಂಗ್' ಪಾಠ

ಉದ್ಯೋಗಕ್ಕಾಗಿ ಹೈದರಾಬಾದ್‌ಗೆ ತೆರಳಿದ ಬಳಿಕ ಸ್ವತಂತ್ರ ಜೀವನದ ನಿಜವಾದ ಅನುಭವ ಆರಂಭವಾಯಿತು ಎಂದು ಅವರು ಹೇಳಿದ್ದಾರೆ. ಕಾಲೇಜಿನಲ್ಲಿ ಹಾಸ್ಟೆಲ್ ಜೀವನ ಅನುಭವಿಸದಿದ್ದ ಕಾರಣ ಬೇರೆ ನಗರದಲ್ಲಿ ಸ್ವತಂತ್ರವಾಗಿ ಬದುಕುವ ಆಸೆ ಇತ್ತು. ಉದ್ಯೋಗ ಸಿಕ್ಕ ತಕ್ಷಣ ಆ ಅವಕಾಶವನ್ನು ಬಳಸಿಕೊಂಡೆ ಎಂದು ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ಸ್ವತಃ ದಿನಸಿ ಸಾಮಗ್ರಿಗಳನ್ನು ಖರೀದಿಸುವುದು, ಜಿಮ್‌ಗೆ ಸೇರುವುದು ಹಾಗೂ ಬಟ್ಟೆಗಳನ್ನು ತಾವೇ ಒಗೆಯುವಂತಹ ದಿನನಿತ್ಯದ ಜವಾಬ್ದಾರಿಗಳನ್ನು ನಿರ್ವಹಿಸಲು ಕಲಿತೆ ಎಂದು ಅವರು ಹೇಳಿದ್ದಾರೆ.

ದುಬೈ ಕಲಿಸಿದ 'ನೆಟ್‌ವರ್ಕಿಂಗ್' ಪಾಠ

31ನೇ ವಯಸ್ಸಿನಲ್ಲಿ ಭಾರತದಲ್ಲಿದ್ದ ಸ್ಥಿರ ಉದ್ಯೋಗವನ್ನು ತೊರೆದು ಪತಿಯೊಂದಿಗೆ ದುಬೈಗೆ ತೆರಳಿದ್ದು ತಮ್ಮ ಜೀವನದ ಮತ್ತೊಂದು ಮಹತ್ವದ ತಿರುವು ಎಂದು ತೇಜಸ್ವಿನಿ ಹೇಳಿದ್ದಾರೆ.

ದುಬೈಗೆ ತೆರಳಿದ ಬಳಿಕ ಉದ್ಯೋಗಕ್ಕಾಗಿ ಹಲವು ಕಡೆ ಅರ್ಜಿ ಸಲ್ಲಿಸಿದರೂ ನಿರೀಕ್ಷಿಸಿದ ರೀತಿಯಲ್ಲಿ ಅವಕಾಶ ಸಿಗಲಿಲ್ಲ. ಉದ್ಯೋಗ ಪೋರ್ಟಲ್‌ಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಸಿಗದೆ ನಿರಾಶೆಗೊಂಡಿದ್ದೆ ಎಂದು ಅವರು ವಿವರಿಸಿದ್ದಾರೆ.

ಕೊನೆಗೆ ಹಲವು ವರ್ಷಗಳ ಹಿಂದೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬರ ಸಂಪರ್ಕದ ಮೂಲಕ ಉದ್ಯೋಗ ದೊರೆಯಿತು. ಈ ಅನುಭವವೇ ವೃತ್ತಿಜೀವನದಲ್ಲಿ ನೆಟ್‌ವರ್ಕಿಂಗ್‌ನ ಮಹತ್ವವನ್ನು ಮೊದಲ ಬಾರಿಗೆ ಅರ್ಥಮಾಡಿಸಿತು ಎಂದು ಹೇಳಿದ್ದಾರೆ.

Life Lessons: ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ತೇಜಸ್ವಿನಿ ಹಂಚಿಕೊಂಡಿರುವ ವಿಡಿಯೋಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. 'ಪ್ರತಿಯೊಂದು ನಗರವೂ ನಮಗೆ ಹೊಸದನ್ನು ಕಲಿಸುತ್ತದೆ', 'ನಾವು ಯಾರಾಗುತ್ತೇವೆ ಎಂಬುದನ್ನು ಸ್ಥಳಗಳೂ ರೂಪಿಸುತ್ತವೆ' ಎಂಬ ಅಭಿಪ್ರಾಯಗಳನ್ನು ಹಲವರು ಹಂಚಿಕೊಂಡಿದ್ದಾರೆ.

ಬೆಂಗಳೂರು ತಮಗೆ ಜಗತ್ತನ್ನು ಪರಿಚಯಿಸಿತು, ಹೈದರಾಬಾದ್ ಸ್ವತಂತ್ರ ಜೀವನದ ಜವಾಬ್ದಾರಿಗಳನ್ನು ಕಲಿಸಿತು ಹಾಗೂ ದುಬೈ ವೃತ್ತಿಜೀವನದಲ್ಲಿ ನೆಟ್‌ವರ್ಕಿಂಗ್‌ನ ಶಕ್ತಿಯನ್ನು ಅರ್ಥಮಾಡಿಸಿತು ಎಂದು ತೇಜಸ್ವಿನಿ ತಮ್ಮ ಅನುಭವವನ್ನು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+