ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ ಬಸ್ ಟಿಕೆಟ್ ಬುಕಿಂಗ್ ಏಜೆನ್ಸಿಗಳಿಗೆ ಲೈಸೆನ್ಸ್ ಕಡ್ಡಾಯ

By Nayana
|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಗ್ರಾಹಕರ ಸುಲಿಗೆ ಮಾಡುವ ಆರೋಪದ ಹಿನ್ನೆಲೆಯಲ್ಲಿ ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಕಂಪನಿಗಳ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ರೆಡ್ ಬಸ್ ಸೇರಿದಂತೆ ಎಲ್ಲಾ ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ಕಂಪನಿಗಳು ಸಾರಿಗೆ ಇಲಾಖೆಯಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆಯುವಂತೆ ಆದೇಶ ಹೊರಡಿಸಲಾಗಿದೆ.

ಹಬ್ಬದ ರಜೆಗಳು ಹಾಗೂ ವೀಕೆಂಡ್ ರಜೆಗಳ ವೇಳೆ ಅನೇಕ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಅಥವಾ ಮೋಸ ಮಾಡುವ ಆರೋಪದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಮೋಟಾರ್ ವಾಹನ ಕಾಯ್ದೆಯ ತಿದ್ದುಪಡಿ ಅನ್ವಯ ಸಮೂಹ ಸಾರಿಗೆ ಬಳಸುವ ಗ್ರಾಹಕರ (ಪ್ರಯಾಣಿಕರ) ಹಿತ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಏಜೆಂಟ್ ಅಥವಾ ಕಂಪನಿ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ವಾಹನಗಳಿಗೆ ಜಿಪಿಎಸ್ ಕಡ್ಡಾಯ: ಸಾರಿಗೆ ಇಲಾಖೆ ನಿರಾಸಕ್ತಿವಾಹನಗಳಿಗೆ ಜಿಪಿಎಸ್ ಕಡ್ಡಾಯ: ಸಾರಿಗೆ ಇಲಾಖೆ ನಿರಾಸಕ್ತಿ

ಇದರ ಅನ್ವಯ ಇತ್ತೀಚೆಗೆ ರೆಡ್ ಬಸ್ ಸಂಸ್ಥೆ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದರೂ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಪಾಲಿಸುವಲ್ಲಿ ಸಂಸ್ಥೆ ವಿಲವಾಗಿದೆ ಎಂಬ ಕಾರಣಕ್ಕಾಗಿ ಲೈಸೆನ್ಸ್‌ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿದೆ.

License compulsory for Online ticket booking agencies

ಆದರೆ ರೆಡ್ ಬಸ್ ಸಂಸ್ಥೆ ತನಗೆ ಮೋಟಾರು ವಾಹನ ಕಾಯ್ದೆ ಅನ್ವಯಿಸುವುದಿಲ್ಲ, ಬದಲಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಮಾತ್ರ ಅನ್ವಯವಾಗುತ್ತದೆ, ಏಕೆಂದರೆ ರೆಡ್ ಬಸ್ ಸಂಸ್ಥೆ ಯಾವುದೇ ಸಾರಿಗೆ ಸಂಸ್ಥೆ ನಡೆಸುತ್ತಿಲ್ಲ ಬದಲಾಗಿ, ಸಾರಿಗೆ ಸಂಸ್ಥೆಗಳು ಮತ್ತು ಗ್ರಾಹಕರ ನಡುವೆ ಕೇವಲ ತಾಂತ್ರಿಕ ಸಂಬಂಧಿ ಸೇವೆ ನೀಡುತ್ತಿದೆ ಎಂದು ಬಲವಾಗಿ ಸಮರ್ಥಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ರೆಡ್ ಬಸ್ ಸಂಸ್ಥೆ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮೆಟ್ಟಿಲೇರಿದ್ದು, ತನಗೆ ಲೈಸೆನ್ಸ್ ನೀಡಲು ನಿರಾಕರಿಸಿರುವುದು ಕಾನೂನು ಬಾಹಿರ ಎಂದು ದೂರಿದೆ.

'ಇದು ಕೇವಲ ರೆಡ್ ಬಸ್ ಸಂಸ್ಥೆಗೆ ಸಂಬಂಧಿಸಿದ ಪ್ರಕರಣ ಅಲ್ಲ, ರೆಡ್ ಬಸ್ ಸಂಸ್ಥೆ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಬಸ್ ಟಿಕೆಟ್ ಬುಕಿಂಗ್ ಮಾಡುವ ಎಲ್ಲ ಸಂಸ್ಥೆಗಳಿಗೆ ಲೈಸೆನ್ಸ್ ಪಡೆಯುವಂತೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಸಾರಿಗೆ ಶುಲ್ಕವಲ್ಲದೇ ಗ್ರಾಹಕರ ಮೇಲೆ ಮನಬಂದಂತೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದನ್ನು ಇದರಿಂದ ತಪ್ಪಿಸಬಹುದು' ಎಂದು ಬೆಂಗಳೂರು ಸಾರಿಗೆ ಜಂಟಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ಹೇಳಿದ್ದಾರೆ.

English summary
Department of transport has issued notice to all online ticket booking agencies should sought license from department as per the amended central motor vehicle act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X