ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಣಪ್ರಕಾಶ್ ಜೊತೆ ಮೊದಲ ಮತ್ತು ಕೊನೆಯ ಮಾತು

By ಕಿರಣ್ ಕುಮಾರ್ ಕೆಎಸ್, ಸಾಫ್ಟ್ ವೇರ್ ಇಂಜಿನಿಯರ್
|
Google Oneindia Kannada News

ಕೆಲವು ವ್ಯಕ್ತಿಗಳೇ ಹಾಗೆ. ಕೆಲವೇ ಕ್ಷಣಗಳ ಕಾಲ ಅವರನ್ನು ಭೇಟಿ ಮಾಡಿದ್ದರೂ, ಉಳಿದ ಜನ್ಮಕ್ಕಾಗುವಷ್ಟು ಅಚ್ಚಳಿಯದ ಛಾಪನ್ನು ನಮ್ಮ ಮನದಲ್ಲಿ ಒತ್ತಿಬಿಡುತ್ತಾರೆ. ಅಸ್ವಸ್ಥರಾಗಿದ್ದರೂ ಕನ್ನಡಕ್ಕಾಗಿ ಬೀದಿಗಿಳಿದಿದ್ದ, ಇತ್ತೀಚಿಗೆ ವಿಧಿವಶರಾದ ನಿಸ್ವಾರ್ಥ ಮನಸ್ಸಿನ ವನ್ಯಜೀವ ಛಾಯಾಗ್ರಾಹಕ ಎನ್.ಜೆ. ಗುಣಪ್ರಕಾಶ್ ಅವರನ್ನು ಲೇಖಕ ಸ್ಮರಿಸಿಕೊಂಡಿದ್ದಾರೆ. ತಮ್ಮನ್ನು ಗುರುತಿಸಿಕೊಳ್ಳಲು 'ಹೋರಾಟ' ನಡೆಸುವವರ ನಡುವೆ ಗುಣಪ್ರಕಾಶ್ ಅವರಂಥವರು ಸಿಗುವುದು ನಿಜಕ್ಕೂ ಅಪರೂಪ.

***
ಎ.ಟಿ. ರಾಮಸ್ವಾಮಿಯವರ ಭೂ ಕಬಳಿಕೆ ಹೋರಾಟ ಸಮಿತಿಯು ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ ಸುಮಾರು 38 ದಿನಗಳ ಕಾಲ, ಎ.ಟಿ. ರಾಮಸ್ವಾಮಿಯವರ ವರದಿಯನ್ನು ಅನುಷ್ಠಾನ ಗೊಳಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆ ನಡೆಸಿತು.

ಈ ಸುಧೀರ್ಘವಾದ ಹೋರಾಟದಲ್ಲಿ ಕೆಲವು ದಿನಗಳು ನಾನು ಕೂಡ ಭಾಗವಹಿಸಿದ್ದೆ. ನಾನು ಪ್ರತಿಭಟನೆ ನಡೆಯುತ್ತಿದ್ದ (ಪುರಭವನದ ಎದುರು) ಸ್ಥಳಕ್ಕೆ ಹೋದಾಗಲೇ ಅವರನ್ನು ಕಂಡು ಸ್ವಲ್ಪ ಮಟ್ಟಿಗೆ ಆಕರ್ಷಿತನಾದೆ. ನಾನು ಭಾಗವಹಿಸಿದ ಪ್ರತಿ ದಿನವೂ ಹಾಗು ಸಮಯದಲ್ಲೂ ಅವರು ಅಲ್ಲಿದ್ದುದನ್ನು ನಾ ಕಂಡೆ. [ಭೂಗಳ್ಳರ ವಿರುದ್ಧ ಆಪ್ ಉಪವಾಸ]

Let's salute Gunashekara's, wildlife photographer

ಪ್ರತಿಭಟನೆ ಬಹುತೇಕ ಮುಗಿಯುವ ಹಂತದ, ಕಡೆಯ ದಿನಗಳಲ್ಲಿ, ಒಂದು ದಿನ ನಾನು ಅವರಲ್ಲಿಗೆ ಹೋಗಿ, "ಸಾರ್ ನಮಸ್ಕಾರ, ನೀವು ಪತ್ರಕರ್ತರಾ?" ಎಂದು ಕೇಳಿದೆ. ಅದಕ್ಕವರು, "ಇಲ್ಲ ನಾನು ಛಾಯಾಚಿತ್ರಕಾರ" ಅಂದ್ರು.

ನಾನು : ಮತ್ತೇಕೆ, ಪ್ರತಿ ದಿನವೂ ಬರ್ತಿರ.. ಬೆಳಿಗ್ಗೆ ಬಂದು ಸಂಜೆಯವರೆಗೂ ಇರ್ತೀರಾ.. ಏನ್ ವಿಶೇಷ?

ಅವರು : ನೋಡಪ್ಪ, ಈ ಹೋರಾಟ ಕೇವಲ ಎ.ಟಿ. ರಾಮಸ್ವಾಮಿಯವರದ್ದೋ, ದೊರೆಸ್ವಾಮಿಯವರದ್ದೋ, ಅಥವಾ ಇಲ್ಲಿ ಬಂದಿರೋ ಕೆಲವೇ ಕೆಲವು ನಾಗರೀಕರದ್ದಲ್ಲದೆ, ಇಡೀ ಕರ್ನಾಟಕದ ಎಲ್ಲ ನಾಗರೀಕರ ಜವಾಬ್ದಾರಿ ಹಾಗು ಕರ್ತವ್ಯ. ಹಾಗಂತ ನಾನು, ನೀನು ಬಂದಿದೀವಿ ಅಂತ ಸರ್ಕಾರ ಎ.ಟಿ. ರಾಮಸ್ವಾಮಿಯವರ ವರದಿಯನ್ನ ಜಾರಿಗೆ ತರುತ್ತೆ ಅಂತಲ್ಲ. ಆದರೆ ನಾಗರಿಕ ಸಮಾಜದಲ್ಲಿ ಇಂತಹ ಅನ್ಯಾಯದ ವಿರುದ್ದ ಹೋರಾಟದಲ್ಲಿ ಭಾಗಿಯಾಗಿ ಕಬಳಿಕೆಯಾಗಿರುವ ಸರ್ಕಾರಿ ಜಮೀನುಗಳನ್ನು ನಮ್ಮಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕೆ, ಇಡೀ ದಿನ ಇಲ್ಲೇ ಇದ್ದು ಫೋಟೋಗಳನ್ನು ತೆಗೆದು, ಮಾದ್ಯಮದವರಿಗೆ, ಸ್ನೇಹಿತರಿಗೆ ಫೋಟೋಗಳನ್ನು ಕೊಡ್ತೀನಿ...

...ಅಂತ ಹೇಳಿದವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ, ತಮ್ಮ ಕೊನೆಯ ಕೆಲವು ದಿನಗಳನ್ನು ಕಳೆಯುತ್ತಿದ್ದ ಹೆಸರಾಂತ ವನ್ಯಜೀವಿ ಛಾಯಾಚಿತ್ರಗಾರ ಎನ್. ಜೆ. ಗುಣಪ್ರಕಾಶ್ ರವರು. ಅದಕ್ಕೆ ನಾನು ಅವರಿಗೆ ಅಭಿನಂದನೆ ಹಾಗು ಧನ್ಯವಾದಗಳನ್ನು ತಿಳಿಸಿದಕ್ಕೆ, ನನಗ್ಯಾಕೆ ಧನ್ಯವಾದ ಹೇಳ್ತಿರ, ನನ್ನ ಕರ್ತವ್ಯ ಅಂದಿದ್ರು. [ಭೂ ಒತ್ತುವರಿ ತೆರವಿಗೆ ಆದ್ಯತೆ ನೀಡಿ]

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವೇ ಕೆಲವು ಹೆಜ್ಜೆಗಳನ್ನು ಇಡಲೂ ಕಷ್ಟಪಡುತ್ತಿದ್ದರು ಹಾಗು ಆಯಾಸಕ್ಕೊಳಗಾಗುತ್ತಿದ್ದರು. ಮೊನ್ನೆ ಅವರ ನಿಧನದ ಸುದ್ದಿಯನ್ನು ಪತ್ರಿಕೆಯೊಂದರಲ್ಲಿ ಓದಿ, ಬೇಸರ - ಹೆಮ್ಮೆ - ಗೌರವದ ಭಾವ ಮೂಡಿತು.

ತಮ್ಮ ಕೊನೆಯ ದಿನಗಳಲ್ಲೂ ಅನ್ಯಾಯದ ವಿರುದ್ದ ಹೋರಾಟದ ಮನೋಭಾವವಿದ್ದ ಇಂತಹವರೇ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಅಂದು ಆಶಿಸುತ್ತೇನೆ. ಅಗಲಿರುವ ಎನ್.ಜೆ. ಗುಣಪ್ರಕಾಶ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ.

English summary
Kiran Kumar K S, software professional and a political activist from Bengaluru remembers N.J.Gunashekara, Fmaous wildlife photographer, who participated in protest against land grabbing, even though he was not well. Let's salute Gunashekara's fighting spirits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X