ತಿಂಗಳ ಎರಡನೇ ಭಾನುವಾರ ಸ್ವಂತ ವಾಹನಗಳಿಗೆ ಬ್ರೇಕ್
ಬೆಂಗಳೂರು, ಡಿಸೆಂಬರ್ 1 : ಪರಿಸರ ಮಾಲಿನ್ಯ ನಿಯಂತ್ರಣ ತಡೆಗಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರತಿ ತಿಂಗಳ ಎರಡನೇ ಭಾನುವಾರದಂದು ಸ್ವಂತ ವಾಹನ ಬಳಸುವ ಬದಲು ಸಮೂಹ ಸಾರಿಗೆ ಬಳಸಿ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಇದೇ ಕಾರಣಕ್ಕಾಗಿ ಲೆಸ್ ಟ್ರಾಫಿಕ್ ಡೇ 'ವಿರಳ ಸಂಚಾರ ದಿನ' ಆಚರಿಸಲು ನಿರ್ಧರಿಸಲಾಗಿದ್ದು ಅಂದು ಸರ್ಕಾರಿ ವಾಹನಗಳಾಗಲೀ, ಖಾಸಗಿ ವಾಹನಗಳಾಗಲಿ ಬೀದಿಗಿಳಿಯಕೂಡದು ಎಂದರು.

ಪ್ರತಿ ತಿಂಗಳ ಎರಡನೇ ಭಾನುವಾರ ಖಾಸಗಿ ವಾಹನಗಳನ್ನು ಹೊರಗೆ ತರದೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಬಾಡಿಗೆ ವಾಹನ, ರಿಕ್ಷಾಗಳನ್ನು ಬಳಸುವಂತೆ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿ ಪರಿಸರ ಮಾಲಿನ್ಯ ಹೆಚ್ಚಾಗಿರುವ ನಂತರದ ಪರಿಣಾಮವನ್ನು ಇಡೀ ದೇಶ ನೋಡುತ್ತಿದೆ. ಅಂತಹ ಸ್ಥಿತಿ ಇಲ್ಲಿ ಬಾರದಂತೆ ತಡೆಗಟ್ಟಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಫೆಬ್ರವರಿ ಎರಡನೇ ಭಾನುವಾರದಿಂದ ಕಾರ್ಯಕ್ರಮ ಜಾರಿಗೆ ಬರಲಿದೆ. ಈಗಾಗಲೇ ಬೆಂಗಳೂರಿನ ಕೋರಮಂಗಲ, ಎಚ್ ಎಸ್ ಆರ್ ಲೇಔಟ್ ಗಳಲ್ಲಿ ಅಲ್ಲಿನ ಸ್ಥಳೀಯರು ಸೇರಿ ಇಂತಹ ಒಂದು ಆಲೋಚನೆಯೊಂದಿಗೆ ಈಗಾಗಲೇ ಹೆಜ್ಜೆ ಇಟ್ಟಿದ್ದಾರೆ.











Click it and Unblock the Notifications