ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ವರ್ಷಗಳ ಬಳಿಕ ಆಗಸ್ಟ್ ತಿಂಗಳಲ್ಲಿ ದಾಖಲೆ ಮಳೆ ಕಂಡ ಬೆಂಗಳೂರು: ಜನರ ಪರದಾಟ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ 184.4 ಮಿ.ಮೀ ಮಳೆಯಾಗಿದ್ದು, ಐದು ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ, ಮುಂಜಾನೆ 3 ರಿಂದ 6 ರ ನಡುವಿನ ಮೂರು ಗಂಟೆಗಳಲ್ಲಿ ನಗರದಲ್ಲಿ 41.4 ಮಿಮೀ ಮಳೆ ದಾಖಲಾಗಿದೆ. ಶನಿವಾರ ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಕೆಂಗೇರಿ ಮತ್ತು ಬಿಡದಿ ಬಳಿಯ ವಂಡರ್ಲಾ ಅಮ್ಯೂಸ್‌ಮೆಂಟ್ ಪಾರ್ಕ್ ನಡುವಿನ ಕಣ್ಮನಿಕೆ ಕೆರೆಯು ಉಕ್ಕಿ ಹರಿದು ಬೆಂಗಳೂರು-ಮೈಸೂರು ಹೆದ್ದಾರಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಪೌರಕಾರ್ಮಿಕರು ರಸ್ತೆ ತೆರವುಗೊಳಿಸಲು ಹರಸಾಹಸ ಪಡುತ್ತಿರುವುದರಿಂದ ನೂರಾರು ಪ್ರಯಾಣಿಕರು ಹಾಗೂ ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿದ್ದವು. ಮೈಸೂರು ರಸ್ತೆ ಎಕ್ಸ್‌ಪ್ರೆಸ್‌ವೇ ಹೊಸ ಟೋಲ್‌ ಬೂತ್‌ ಕೂಡ ನೀರಿನಲ್ಲಿ ಮುಳುಗಿದೆ. ನಗರದ ಹಲವೆಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.

ಬೆಂಗಳೂರು ಮಳೆ ಅವಾಂತರ: ಕೆಂಗೇರಿ-ವಂಡರ್ಲಾ ನಡುವಿನ ಸಂಚಾರ ಅಸ್ತವ್ಯಸ್ತಬೆಂಗಳೂರು ಮಳೆ ಅವಾಂತರ: ಕೆಂಗೇರಿ-ವಂಡರ್ಲಾ ನಡುವಿನ ಸಂಚಾರ ಅಸ್ತವ್ಯಸ್ತ

ಟ್ರಾಫಿಕ್ ಮತ್ತು ಮಳೆಯ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡ ಬಳಕೆದಾರರು, ಪರ್ಯಾಯ ಮಾರ್ಗಗಳು, ಮಳೆ ಸಮಸ್ಯೆ ಬಗ್ಗೆ ಇತತರಿಗೆ ಎಚ್ಚರಿಗೆ ನೀಡಿದರು.

 ಯಾವ ಭಾಗದಲ್ಲಿ ಎಷ್ಟು ಮಳೆ?

ಯಾವ ಭಾಗದಲ್ಲಿ ಎಷ್ಟು ಮಳೆ?

ನಗರದಲ್ಲಿ ಗೊಟ್ಟಿಗೆರೆ, ಅಂಜನಾಪುರ, ಹೆಮ್ಮಿಗೆಪುರ, ದೊರೆಸಾನಿಪಾಳ್ಯ, ಅರಕೆರೆ, ಬಿಳೇಕಹಳ್ಳಿ, ಬೇಗೂರು, ಗೊಲ್ಲಹಳ್ಳಿ, ರಾಜಮಹಲ್, ಆರ್‌ಆರ್‌ನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಗೊಟ್ಟಿಗೆರೆ 61 ಮಿ. ಮೀ, ಅಂಜನಾಪುರ 60 ಮಿ. ಮೀ, ಹೆಮ್ಮಿಗೆಪುರ 53 ಮಿ. ಮೀ, ದೊರೆಸಾನಿಪಾಳ್ಯ 51 ಮಿ. ಮೀ, ಅರಕೆರೆ 49 ಮಿ. ಮೀ, ಬಿಳೇಕಹಳ್ಳಿ 48 ಮಿ. ಮೀ, ಬೇಗೂರು 42 ಮಿ. ಮೀ, ಗೊಲ್ಲಹಳ್ಳಿ 41 ಮಿ. ಮೀ, ರಾಜಮಹಲ್ 36 ಮಿ. ಮೀ, ಆರ್.ಆರ್.ನಗರ 34 ಮಿ. ಮೀ., ರಾಜಮಹಲ್ 36 ಮಿ. ಮೀ., ಆರ್. ಆರ್. ನಗರ 34 ಮಿ. ಮೀ. ಮಳೆಯಾಗಿದೆ.

 ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆ

ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರಿಗೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ಇನ್ನೂ ಮುಂದಿವೆ. ಈ ವರ್ಷದ ಮಾರ್ಚ್‌ನಿಂದ ಇಲ್ಲಿವರೆಗೆ ನಗರದಲ್ಲಿ 1,031 ಮಿ.ಮೀ ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ 200 ಮಿಲಿ ಮೀಟರ್ ದಾಟುವ ನಿರೀಕ್ಷೆಯಿದೆ.

2021ರಲ್ಲಿ ಆಗಸ್ಟ್‌ ತಿಂಗಳಲ್ಲಿ 98.5 ಮಿಲಿ ಮೀಟರ್ ಮಾತ್ರ ಮಳೆಯಾಗಿತ್ತು. 2018ರಲ್ಲಿ 185 ಮಿಲಿ ಮೀಟರ್ ಮಳೆ ಸುರಿದಿತ್ತು. ಆಗಸ್ಟ್‌ನಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 147 ಮಿಲಿ ಮೀಟರ್ ಆಗಿದ್ದು, ಈ ಬಾರಿ 184.4 ಮಿಲಿ ಮೀಟರ್ ಮಳೆಯಾಗಿದೆ. 2017ರ ಆಗಸ್ಟ್‌ನಲ್ಲಿ 351.8 ಮಿಲಿ ಮೀಟರ್ ಮಳೆಯಾಗಿರುವುದು ದಾಖಲೆಯಾಗಿದೆ.

 ಸೆಪ್ಟೆಂಬರ್ 3ರವರೆಗೆ ಉತ್ತಮ ಮಳೆ ಸಾಧ್ಯತೆ

ಸೆಪ್ಟೆಂಬರ್ 3ರವರೆಗೆ ಉತ್ತಮ ಮಳೆ ಸಾಧ್ಯತೆ

ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಭಾನುವಾರ ಕೂಡ ಮೋಡ ಕವಿದ ವಾತಾವರಣ ಮುಂದುವರೆದಿದೆ.

ಶನಿವಾರ ರಾತ್ರಿ, ಭಾನುವಾರ ಮುಂಜಾನೆ ಕೂಡ ನಗರದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಸೆಪ್ಟೆಂಬರ್ 3 ರವರೆಗೆ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

 ಮುಂದುವರೆದ ಬೆಂಗಳೂರಿಗರ ಪರದಾಟ

ಮುಂದುವರೆದ ಬೆಂಗಳೂರಿಗರ ಪರದಾಟ

ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗುತ್ತವೆ. ಬರಿ ಮೂರು ಗಂಟೆಯಲ್ಲೇ ಸುರಿದ ದಾಖಲೆ ಮಳೆಗೆ ನಗರದ ಹಲವು ಭಾಗಗಳು ಜಲಾವೃತವಾಗಿದೆ. ಇನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು.

ಹಲವು ತಗ್ಗು ಪ್ರದೇಶಗಳು, ರಸ್ತೆಗಲು ಜಲಾವೃತವಾಗಿದ್ದರಿಂದ ಮಳೆ ಜೊತೆಗೆ ಟ್ರಾಫಿಕ್ ಸಮಸ್ಯೆ ಕೂಡ ಜನರನ್ನು ಹೈರಾಣಾಗಿಸಿತು. ಎಂದಿನಂತೆ ಈ ಬಾರಿಯೂ ಸಮಸ್ಯೆ ಸರಿಪಡಿಸುವುದಾಗಿ ಬಿಬಿಎಂಪಿ ಹೇಳಿಕೆ ನೀಡಿದೆ. ಜನರನ್ನು ಹಿಡಿಶಾಪ ಹಾಕುವುದು ಮುಂದುವರೆದಿದೆ.

English summary
Bengaluru city recorded 41.4 mm of rainfall between 3 am and 6 am on Friday, Bengaluru received 184.4 mm of rainfall in the month of August, which is the highest in Last five years. In the city, areas like Gottigere, Anjanapura, Hemmigepura, Doresanipalya, Arakere, Bilekahalli, Begur, Gollahalli, Rajmahal, RR Nagar among other localities witnessed intense downpours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X