ಭ್ರಷ್ಟಾಚಾರ-ಭಯೋತ್ಪಾದನೆ ವಿರುದ್ಧ ಡ್ರಮ್ ಬಾರಿಸುವ ಚಳವಳಿ!
ಬೆಂಗಳೂರು, ಜನವರಿ 24: ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ವಿರುದ್ಧ ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ಐತಿಹಾಸಿಕ ಭಾರತ್ ಬಚಾವೋ-ಡ್ರಮ್ಸ್ ಬಾರಿಸುವ ಮೂಲಕ ವಿನೂತನ ಚಳವಳಿ ನಡೆಯಲಿದೆ.
ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಮಿತಿ ಮೀರುತ್ತಿದೆ. ಯುವಕರೆಲ್ಲರೂ ಸೇರಿ ಇದಕ್ಕೆಲ್ಲ ಅಂತ್ಯ ಕಾಣಿಸಬೇಕು ಎಂದು ತೀರ್ಮಾನಿಸಿ ವಿಶಿಷ್ಟ ರೀತಿಯಲ್ಲಿ ಚಳವಳಿ ಮಾಡಲು ಮುಂದಾಗಿದ್ದಾರೆ. ಜನವರಿ 26ರಂದು ಜಯನಗರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, 10 ಸಾವಿರ ಯುವಕರು ಏಕಕಾಲದಲ್ಲಿ ಡ್ರಮ್ಸ್ ಬಾರಿಸುವ ಮೂಲಕ ವಿನೂತನ ಚಳವಳಿಗೆ ಚಾಲನೆ ನೀಡಲಿದ್ದಾರೆ.

ಬ್ರೀದ್ ಎಂಟರ್ ಟೇನ್ ಮೆಂಟ್ ಸಂಸ್ಥೆಯೂ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದೆ. ಜನವರಿ 26 ರಂದು ರಾತ್ರಿ 6 ಗಂಟೆಯಿಂದ ರಾತ್ರಿ9 ಗಂಟೆಯವರೆಗೆ ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆಯಲಿದೆ.












Click it and Unblock the Notifications