Karnataka Trains: ಭೂಕುಸಿತದಿಂದ ರೈಲುಗಳ ಸಂಚಾರ ಅಸ್ತವ್ಯಸ್ತ: ಹಲವು ರೈಲುಗಳು ರದ್ದು, ಮಾರ್ಗ ಬದಲಾವಣೆ

ಬೆಂಗಳೂರು: ನಿರಂತರ ಬಿರುಗಾಳಿ ಮಳೆಯಿಂದಾಗಿ ಮೈಸೂರು ವಿಭಾಗದ ಯೆಡಕುಮಾರಿ - ಶ್ರೀವಾಗಿಲು ನಿಲ್ದಾಣಗಳ ನಡುವಿನ ರೈಲ್ವೆ ಹಳಿ ಮೇಲೆ ಗುಡ್ಡಕುಸಿತ ಸಂಭವಿಸಿದ ಕಾರಣ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಿದ್ದಲ್ಲದೇ, ಇನ್ನು ಒಂದೆರಡು ರೈಲುಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರದ್ದಾದ ರೈಲುಗಳ ಪಟ್ಟಿ

* ಕೆಎಸ್ಆರ್ ಬೆಂಗಳೂರು - ಕಾರವಾರ ಪಂಚಂಗಂಗಾ ಎಕ್ಸ್‌ಪ್ರೆಸ್ ರೈಲು (16595) ಆಗಸ್ಟ 2ರಿಂದಲೇ ಪ್ರಯಾಣ ರದ್ದುಗೊಳಿಸಲಾಗಿದೆ.

* ಕಾರವಾರ-ಬೆಂಗಳೂರು ಪಂಚಂಗಂಗಾ ಎಕ್ಸ್‌ಪ್ರೆಸ್ ರೈಲು (16596) ರಂದು ಪ್ರಾರಂಭವಾಗುವ ಸಂಚಾರ ರದ್ದುಗೊಳಿಸಲಾಗಿದೆ.

* ವಿಜಯಪುರ -ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು (56920) ಪ್ರಯಾಣವನ್ನು ಮುಂದಿನ ಆದೇಶವರೆಗೆ ರದ್ದುಗೊಂಡಿದೆ

Disrupts Train Services

ಪ್ರಸ್ತುತ ಗುಡ್ಡ ಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಶೀಗ್ರವೇ ರೈಲುಗಳ ಸಂಚಾರ ಪುನರ್ ಸ್ಥಾಪಿಸಲಾಗುತ್ತದೆ. ಹಾಸನ ಮತ್ತು ಸುಬ್ರಹ್ಮಣ್ಯ ರಸ್ತೆಯಲ್ಲಿ ಅಗತ್ಯ ಪರ್ಯಾಯ ಪ್ರಯಾಣ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರ ಪುನಃಸ್ಥಾಪನೆ ಕಾರ್ಯ ಮೇಲ್ವಿಚಾರಣೆ ನಡೆಯುತ್ತಿದೆ. ಈ ಮಾರ್ಗದಲ್ಲಿ ಬಂದು ತೊಂದರೆ ಅನುಭವಿಸಿದ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಶ್ರೀ ಪಿ ಅನಂತ್, ಜನರಲ್ ಮ್ಯಾನೇಜರ್ ಮತ್ತು ಇಲಾಖೆಗಳ ಪ್ರಧಾನ ಮುಖ್ಯಸ್ಥರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಮುದಿತ್ ಮಿತ್ತಲ್, ಪುನಃಸ್ಥಾಪನೆ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಸಂಚಾರ ಅನಾನುಕೂಲತೆ ಕಡಿಮೆ ಮಾಡಲು ಆಗಸ್ಟ್ 2ರಿಂದ ಪ್ರಯಾಣಿಸುವ ಕೆಲವು ರೈಲುಗಳನ್ನು ಪರ್ಯಾಯ ಮಾರ್ಗಗಳಲ್ಲಿ ಓಡಿಸಲಾಗುತ್ತಿದೆ.

* ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (17377) ಹಾಲಿ ಮಾರ್ಗ ಎಸ್‌ಎಸ್‌ಎಸ್ ಹುಬ್ಬಳ್ಳಿ - ಅರಸೀಕೆರೆ - ಹಾಸನ - ಸಕಲೇಶಪುರ - ಸುಬ್ರಹ್ಮಣ್ಯ ರಸ್ತೆ - ಪಡೀಲ್ - ಮಂಗಳೂರು ಜಂಕ್ಷನ್ ಮೂಲಕ ಸಾಗುವ ಬದಲು, 'ಎಸ್‌ಎಸ್‌ಎಸ್ ಹುಬ್ಬಳ್ಳಿ - ಲೋಂಡಾ - ಕ್ಯಾಸಲ್ ರಾಕ್ - ಮಡ್ಗಾಂವ್ - ಕಾರವಾರ - ತೋಕೂರು - ಮಂಗಳೂರು ಜಂಕ್ಷನ್ ಮೂಲಕ ಸಾಗಲಿದೆ.

ಮಾಗ ಬದಲಾವಣೆ ಕಾರಣಕ್ಕೆ ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟವಾಳ ಮಾರ್ಗದ ಸಂಚಾರ ರದ್ದಾಗಿದ್ದು, ಈ ನಿಲ್ದಾಣಗಳಲ್ಲಿ ನಿಲುಗಡೆ ಸಹ ತಾತ್ಕಾಲಿಕವಾಗಿ ನಿಷೇಧಗೊಂಡಿದೆ.

ಮಾರ್ಗ ಬದಲಾವಣೆ

* ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ರೈಲು (17378)

ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ರೈಲು ಅಸ್ತಿತ್ವದಲ್ಲಿದ್ದ ಮಂಗಳೂರು ಜಂಕ್ಷನ್ - ಪಡೀಲ್ - ಸುಬ್ರಹ್ಮಣ್ಯ ರಸ್ತೆ - ಸಕಲೇಶಪುರ - ಹಾಸನ - ಅರಸೀಕೆರೆ - ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಬೇಕು. ಆದರೆ ಮಂಗಳೂರು ಜಂಕ್ಷನ್ - ತೋಕೂರು - ಕಾರವಾರ - ಮಡಗಾಂವ್ - ಕ್ಯಾಸಲ್ ರಾಕ್ - ಲೋಂಡಾ ಮೂಲಕ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಸಂಚಾರ ಮಾಡಲಿದೆ.

ಇದರಿಂದ ಬಂಟವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಅರಸೀಕೆರೆ, ಬೀರೂರು, ಕಡೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ ಮಾರ್ಗದಲ್ಲಿ ನಿಲುಗಡೆ/ಸಂಚಾರ ರದ್ದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಮುರುಡೇಶ್ವರ- ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16586)

ಮುರುಡೇಶ್ವರ- ಎಸ್‌ಎಂವಿಟಿ ಬೆಂಗಳೂರು ರೈಲು ಹಾಲಿ ಮಾರ್ಗ ಮುರ್ಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಪಡೀಲ್ - ಸುಬ್ರಹ್ಮಣ್ಯ ರಸ್ತೆ - ಸಕಲೇಶಪುರ - ಹಾಸನ - ಮೈಸೂರು - ಕೆಎಸ್ಆರ್ ಬೆಂಗಳೂರು ಮೂಲಕ ಸಂಚಾರ ಮಾಡುತ್ತಿತ್ತು. ಬದಲಾದ ಮುರುಡೇಶ್ವರ - ತೋಕೂರು - ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೋದನೂರು - ಜೋಲಾರ್ಪೆಟ್ಟೈ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮಾರ್ಗದಲ್ಲಿ ಸಂಚಾರ ಮಾಡಲಿದೆ.

ಈ ಮಾರ್ಗ ಬದಲಾವಣೆಯಿಂದ ಬಂಟವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಹೊಳೆ ನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಬೆಂಗಳೂರು ಕಂಟೋನ್ಮೆಂಟ್, ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ. ಈ ರೈಲು SMVT ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ.

* ಕೋಝಿಕ್ಕೋಡ್ - KSR ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16512)

ಈ ರೈಲು ಕಣ್ಣೂರು - ಮಂಗಳೂರು ಸೆಂಟ್ರಲ್ - ಮಂಗಳೂರು ಜಂಕ್ಷನ್ - ಪಡೀಲ್ - ಸುಬ್ರಹ್ಮಣ್ಯ ರಸ್ತೆ - ಸಕಲೇಶಪುರ - ಹಾಸನ - ಚನ್ನರಾಯಪಟ್ಟಣ - ಯಶವಂತಪುರ ಮಾರ್ಗದ ಬದಲಾಗಿ 'ಮಂಗಳೂರು ಸೆಂಟ್ರಲ್ - ಕಣ್ಣೂರು - ಶೋರನೂರು - ಪಾಲಕ್ಕಾಡ್ - ಪೊದನೂರು - ಜೋಲಾರ್ಪೆಟ್ಟೈ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು' ಮಾರ್ಗವಾಗಿ ಸಂಚರಿಸಲಿದೆ.

* KSR ಬೆಂಗಳೂರು-ಕೋಝಿಕ್ಕೋಡ್ ಎಕ್ಸ್‌ಪ್ರೆಸ್ ರೈಲು (16511)

ಈ ರೈಲು KSR ಬೆಂಗಳೂರು (SBC) ಬದಲಿಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು (SMVB) ನಿಂದ ಸಂಚಾರ ಆರಂಭಿಸುತ್ತದೆ. ಯಶವಂತಪುರ - ಚನ್ನರಾಯಪಟ್ಟಣ - ಹಾಸನ - ಸಕಲೇಶಪುರ - ಸುಬ್ರಹ್ಮಣ್ಯ ರಸ್ತೆ - ಪಡೀಲ್ - ಮಂಗಳೂರು ಜಂಕ್ಷನ್ - ಮಂಗಳೂರು ಸೆಂಟ್ರಲ್ - ಕಣ್ಣೂರು - ಕೋಝಿಕ್ಕೋಡ್ ಹಾಲಿ ಮಾರ್ಗಕ್ಕೆ ಬದಲಾಗಿ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಜೋಲಾರ್‌ಪೆಟ್ಟೈ ಜಂಕ್ಷನ್ - ಪೊದನೂರು ಜಂಕ್ಷನ್ - ಪಾಲಕ್ಕಾಡ್ ಜಂಕ್ಷನ್ - ಶೋರನೂರು ಜಂಕ್ಷನ್ - ಕೋಝಿಕ್ಕೋಡ್ - ಮಂಗಳೂರು ಸೆಂಟ್ರಲ್‌ಗೆ ಸಂಚರಿಸಲಿದೆ.

ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಬಿ ಜಿ ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟವಾಳ, ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಹಳಿ ಮೇಲಿನ ಮಣ್ಣು ತೆರವು ಬಳಿಕ ಮತ್ತೆ ಯಥಾಸ್ಥಿತಿ ರೈಲು ಕಾರ್ಯಾಚರಣೆ ಕುರಿತು ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+