ಕರ್ನಾಟಕ - ತಮಿಳುನಾಡು ನಡುವೆ ಕಾರಿಡಾರ್: ಈ 6 ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ನಿರೀಕ್ಷೆ !

Bengaluru and Chennai Expressway: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೆಳೆಯುವಂತೆ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ವಿವಿಧ ಯೋಜನೆಗಳ ಕಾರಣಕ್ಕೆ ರಿಯಲ್ ಎಸ್ಟೇಟ್ ಬೂಸ್ಟ್‌ ಆಗಿದೆ. ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ 262 ಕಿ.ಮೀ ಉದ್ದದ 8 ಪಥದ ಪ್ರವೇಶ ನಿಯಂತ್ರಿತ ಕಾರಿಡಾರ್ ಇದೀಗ ವಿವಿಧ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವಾಗಿದೆ.

ಉದ್ದೇಶಿತ ಕಾರಿಡಾರ್ ಯೋಜನೆಯಿಂದ ಎರಡು ಪ್ರಮುಖ ನಗರಗಳ ನಡುವಿನ ಆರ್ಥಿಕತೆ ವೃದ್ಧಿಯಾಗಿದೆ. ಬೆಂಗಳೂರು ಹಾಗೂ ಚೆನ್ನೈ ನಡುವೆ ಇತ್ತೀಚಿನ ದಿನಗಳಲ್ಲಿ ಸಂಚಾರ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳು ಜಾರಿಯಾಗುತ್ತಿವೆ. ಈ ಎರಡೂ ನಗರಗಳ ನಡುವೆ ಪ್ರಯಾಣದ ಸಮಯವು ಹೊಸ ಕಾರಿಡಾರ್‌ನಿಂದಾಗಿ 6 ರಿಂದ 7 ಗಂಟೆಗಳಿಂದ ಇದೀಗ ಕೇವಲ 3 ಗಂಟೆಗಳಿಗೆ ಇಳಿಕೆಯಾಗಿದೆ. ಈ ಎಕ್ಸ್‌ಪ್ರೆಸ್‌ವೇ ಪೂರ್ವ ಬೆಂಗಳೂರಿನ ಹೊಸಕೋಟೆಯಲ್ಲಿ ಪ್ರಾರಂಭವಾಗುತ್ತದೆ. ಈ ಯೋಜನೆಯು ಸಂಪರ್ಕ ಸುಧಾರಣೆಯ ಭಾಗವಾಗಿದೆ. ನಗರೀಕರಣ ಹಾಗೂ ರಿಯಲ್ ಎಸ್ಟೇಟ್‌ಗೆ ಭರ್ಜರಿ ಬೂಸ್ಟ್‌ ನೀಡಿದೆ. ಪೂರ್ವ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಯ ಭಾಗವಾಗಿ ಈ ಯೋಜನೆ ಇರಲಿದೆ.

Land prices expected to gold in 6 parts of corridor between Karnataka and Tamil Nadu Bengaluru-Chennai Expressway

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ: ರಿಯಲ್ ಎಸ್ಟೇಟ್ ಮೇಲೆ ಪರಿಣಾಮ

ಈ ಉದ್ದೇಶಿತ ಯೋಜನೆಯು ಬೆಂಗಳೂರಿನ ಹೊರವಲಯದ ಹೊಸಕೋಟೆಯಿಂದ ಚೆನ್ನೈ ಬಳಿಯ ಶ್ರೀಪೆರಂಬುದೂರಿನವರೆಗೆ ಎಕ್ಸ್‌ಪ್ರೆಸ್‌ವೇ ವಿಸ್ತರಿಸಿದೆ. ಇದರಿಂದ ಈ ಭಾಗದಲ್ಲಿ ಬರುವ ಪ್ರಮುಖ ಪ್ರದೇಶಗಳಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ. ಈ ಎಕ್ಸ್‌ಪ್ರೆಸ್‌ವೇ 8 ಲೇನ್‌ಗಳೊಂದಿಗೆ ಸಂಪೂರ್ಣವಾಗಿ ಪ್ರವೇಶ ನಿಯಂತ್ರಿತವಾಗಿದೆ. ತಡೆರಹಿತ ಹೈ-ಸ್ಪೀಡ್ ಪ್ರಯಾಣವನ್ನು ಒದಗಿಸಲು NH75, ಪೆರಿಫೆರಲ್ ರಿಂಗ್ ರಸ್ತೆ (PRR) ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ನೊಂದಿಗೆ ಈ ಯೋಜನೆಯೂ ಸೇರಲಿದೆ. ಈಗಾಗಲೇ ಹಲವು ಯೋಜನೆಗಳು ಈ ಭಾಗದಲ್ಲಿ ಬರುತ್ತಿರುವುದರಿಂದ ಸಹಜವಾಗಿಯೇ ಭೂಮಿಯೆ ಬೆಲೆ ಹೆಚ್ಚಳವಾಗುತ್ತಿದೆ.

ಈ ಭಾಗದಲ್ಲಿ ಸರಕು - ಸಾಗಾಣಿಕೆ ಸುಲಭವಾಗುತ್ತಿದ್ದು. ಇದರಿಂದ ಉದ್ಯಮ ಹಾಗೂ ವಹಿವಾಟು ಹೆಚ್ಚಳವಾಗಲಿದೆ. ಹೆಚ್ಚುವರಿ ಸಾಗಾಣಿಕೆಗೆ ಇದು ಸಹಕಾರಿಯಾಗಲಿದೆ. ಇದರೊಂದಿಗೆ ಕರ್ನಾಟಕ ಹಾಗೂ ತಮಿಳುನಾಡಿನ ಆರ್ಥಿಕ ಅಭಿವೃದ್ಧಿಗೆ ಈ ಕಾರಿಡಾರ್‌ಗಳು ಸಹಕಾರಿಯಾಗಲಿವೆ. ರಿಯಲ್ ಎಸ್ಟೇಟ್ ಬೂಸ್ಟ್‌ ಆಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದೆ. ಹೊಸಕೋಟೆಯಿಂದ ಪ್ರಾರಂಭವಾಗುವ ಈ ಯೋಜನೆ ಪೂರ್ವ ಬೆಂಗಳೂರು ಸಮೀಪದಲ್ಲೇ ಇದೆ. ಇದರಿಂದ ಈ ಪ್ರದೇಶಕ್ಕೆ ಮೊದಲ ಲಾಭ ಸಿಗಲಿದೆ.

ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳ ಸಾಧ್ಯತೆ

ಇನ್ನು ಈ ಯೋಜನೆಯಿಂದಾಗಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ. ಅದರಲ್ಲಿ ವೈಟ್‌ಫೀಲ್ಡ್, ಕೆಆರ್ ಪುರಂ, ಬೂದಿಗೆರೆ ಕ್ರಾಸ್, ಮಾಲೂರು ಹಾಗೂ ಕನ್ನಮಂಗಲ ಪ್ರದೇಶಗಳು ಸೇರಿವೆ. ಇದಲ್ಲದೇ ಇದರ ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಮಿ ಬೆಲೆ ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆ ಮೂಡಿದೆ.

ಈಗಾಗಲೇ ಕೆ.ಆರ್‌ಪುರ ಹೊರ ವಲಯದಲ್ಲಿ ಹಾಗೂ ವೈಟ್‌ಫೀಲ್ಡ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಒಳ್ಳೆಯ ಹಾಗೂ ಬಂಗಾರದ ಬೆಲೆ ಬರಲು ಪ್ರಾರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+