ರೈಲಿನಲ್ಲಿ ಯುವತಿಗೆ ಅಪರಿಚಿತನಿಂದ ಲೈಂಗಿಕ ಕಿರುಕುಳ
ಬೆಂಗಳೂರು, ಮೇ 22: ರೈಲಿನಲ್ಲಿ ಮಹಿಳೆಯರೊಬ್ಬರೇ ಓಡಾಡುವುದು ಕಷ್ಟ, ಇಷ್ಟು ದಿನ ಮೊಬೈಲ್, ಒಡವೆ ಕಳ್ಳರು ದರೋಡೆಕೋರರ ಭಯವಿತ್ತು, ಇದೀಗ ಲೈಂಗಿಕ ಕಿರುಕುಳ ಪ್ರಕರಣವೂ ಹೆಚ್ಚಾಗುತ್ತಿದ್ದು ಮಹಿಳೆಯರಲ್ಲಿ ಆತಂಕ ಮೂಡಿಸಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನಿದ್ರೆಯಲ್ಲಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಸಿಟಿ ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ.
ಉತ್ತರ ಭಾರತ ಮೂಲದ ಕಾಡುಗೋಡಿ ನಿವಾಸಿ ದೂರು ದಾಖಲಿಸಿದ್ದು ಆರೋಪಿ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಯುವತಿ ಮಾಲೂರಿನ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ, ಕಾಡುಗೋಡಿಯಲ್ಲಿ ನೆಲೆಸಿದ್ದು, ನಿತ್ಯ ಮಾಲೂರಿನಿಂದ ಕಾಡುಗೋಡಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.

ಆಕೆ ಪ್ರಯಾಣ ಮಾಡುವಾಗ ಸುಮಾರು 50 ವರ್ಷದ ವ್ಯಕ್ತಿಯೊಬ್ಬ ಯುವತಿಯನ್ನು ಖಾಸಗಿ ಭಾಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದಿದ್ದಾನೆ. ಎಚ್ಚರಗೊಂಡ ಯುವತಿ ಜೋರಾಗಿ ಚೀರಿಕೊಂಡಿದ್ದು, ಅದೇ ಬೋಗಿಯಲ್ಲಿ ಕುಳಿತಿದ್ದ ಪ್ರಯಾಣಿಕರು ತಕ್ಷಣವೇ ಓಡಿಬಂದಿದ್ದಾರೆ, ಆದರೆ ಹೆಚ್ಚು ದಟ್ಟಣೆ ಇದ್ದಿದ್ದರಿಂದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.












Click it and Unblock the Notifications